ಕೊರೊನಾ ವೈರಸ್ ಕುರಿತು ಅಮೆರಿಕಕ್ಕೆ ತಿರುಗೇಟು ನೀಡಿದ ಚೀನಾ
A very interesting video tells the truth: Once Upon a Virus. pic.twitter.com/8sjWK7v7Yz
— Generalkonsul Du Xiaohui (@GeneralkonsulDu) May 2, 2020
ಬೀಜಿಂಗ್: ಕೊರೊನಾ ವೈರಸ್ ಉಗಮದ ಕುರಿತಂತೆ ಅಮೆರಿಕ ಈವರೆಗೆ ಮಾಡಿರುವ ಎಲ್ಲ ಆರೋಪಿಗಳಿಗೆ ಚೀನಾ ಕಿರುಚಿತ್ರದ ಮೂಲಕ ವ್ಯಂಗ್ಯಭರಿತ ತಿರುಗೇಟು ನೀಡಿದೆ.
ಅನಿಮೇಷನ್ ತಂತ್ರಜ್ಞಾನದ ಮೂಲಕ ಚೀನಾ ʼಒನ್ಸ್ ಅಪಾನ್ ಎ ವೈರಸ್(Once upon a virus) ಹೆಸರಲ್ಲಿ ಒಂದೂವರೆ ನಿಮಿಷದ ಕಿರುಚಿತ್ರವನ್ನು ತಯಾರು ಮಾಡಿದೆ. ಮಾಸ್ಕ್ ಧರಿಸಿದ ಮಾನವನ ಆಕೃತಿ (ಚೀನಾ) ಮತ್ತು ಅಮೆರಿಕದ ಲಿಬರ್ಟಿ ಪ್ರತಿಮೆಯ ನಡುವೆ ಒಂದೂವರೆ ನಿಮಿಷಗಳ ಕಾಲ ಕುತೂಹಲಕಾ,ರಿ ಸಂಭಾಷಣೆ ನಡೆಯುತ್ತಿದೆ. ಈ ಸಂಭಾಷಣೆ ಮೂಲಕ ಚೀನಾ ಅಮೆರಿಕದ ಎಲ್ಲ ಆರೋಪಗಳಿಗೆ ತಿರುಗೇಟು ನೀಡಿದೆ.
ಮಾಸ್ಕ್ ಧರಿಸಿದ ಆಕೃತಿ ಚೀನಾ ಡಿಸೆಂಬರ್‌ನಲ್ಲಿ ಮೊದಲಿಗೆ , ʼನಮಗೆ ಹೊಸ ವೈರಸ್ ಪತ್ತೆಯಾಗಿದೆ, ʼ ಎಂದು ಹೇಳುತ್ತಿದೆ. ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ಸಂದೇಶವನ್ನು ಗ್ರಹಿಸಿರುವುದಾಗಿ ಹೇಳುತ್ತಿದೆ. ಆದರೆ , ಮಾಸ್ಕ್ ಧರಿಸಿದ ಅಮೆರಿಕದ ಲಿಬರ್ಟಿ ಪ್ರತಿಮೆಯು ʼಅದಕೇನು?ʼ ಎಂದು ಉಪೇಕ್ಷೆ ಮಾಡಿ ಪ್ರಶ್ನೆ ಮಾಡುತ್ತದೆ. ಅದಕ್ಕೆ ಮಾನವನ ಆಕೃತಿಯು ಮಾಸ್ಕ್ ಧರಿಸುವಂತೆ ಸಲಹೆ ನೀಡುತ್ತಿದೆ. ಆದರೆ ಲಿಬರ್ಟಿ ಅದನ್ನು ಉಪೇಕ್ಷಿಸುತ್ತದೆ ಈ ರೀತಿಯ ಕಿರುಚಿತ್ರವನ್ನು ತಯಾರಿಸಿ ಚೀನಾ ಅಮೆರಿಕಕ್ಕೆ ತಿರುಗೇಟು ನೀಡಿದೆ.