NEWSನಮ್ಮಜಿಲ್ಲೆ

ಕೊವೀಡ್-19: ಪ್ರತಿಬಂಧ ಉದ್ದೇಶ ಸಫಲತೆಗೆ ನಾಕಾಬಂದಿ

ಅಧಿಕಾರಿಗಳು ಜಿಲ್ಲೆಯ ರಕ್ಷಾ ಕವಚವಾಗಿ l ಸಚಿವ ಸಿ.ಸಿ.ಪಾಟೀಲ್‌ ಕರೆ

ವಿಜಯಪಥ ಸಮಗ್ರ ಸುದ್ದಿ

ಗದಗ: ಕೊವೀಡ್-19 ಸೋಂಕು ತಡೆಗೆ ಜಿಲ್ಲೆಯ ಲಾಕ್‌ಡೌನ್‌ ಜತೆಗೆ ಜಿಲ್ಲೆಗೆ ಹೊರಗಿನಿಂದ ಸೋಂಕು ಬರದಂತೆ ತಡೆಯಲು ಜಿಲ್ಲೆಯ ಎಲ್ಲ ಚೆಕ್‌ಪೋಸ್ಟ್‌ ಅಧಿಕಾರಿ ಸಿಬ್ಬಂದಿ ಜಿಲ್ಲೆಯ ಜನರ ರಕ್ಷಾ ಕವಚದಂತೆ ತಮಗೆ ವಹಿಸಿರುವ ತಪಸಾಣಾ ಮತ್ತು ನಿಯಂತ್ರಣ ಕಾರ್ಯಗಳನ್ನು ಯಾವುದೇ ದಾಕ್ಷಿಣ್ಯವಿಲ್ಲದೇ ಕಟ್ಟುನಿಟ್ಟಾಗಿ ಪಾಲಿಸಿ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ  ಸಿ ಸಿ ಪಾಟೀಲ್‌ ಕರೆ ನೀಡಿದರು..

ಜಿಲ್ಲೆಯ  ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಕೊವಿಡ್-19 ನಿಯಂತ್ರಣದ ಅಂಗವಾಗಿ ಸ್ಥಾಪಿತ ಕೊಣ್ಣೂರು ಚೆಕ್ ಪೋಸ್ಟ್ ಗೆ ಭೇಟಿ ನೀಡಿದ ಅವರು ಕಾರ್ಯ ಚಟುವಟಿಕೆಯನ್ನು  ಪರಿಶೀಲಿಸಿದರು.

ಕೊವಿಡ್-19 ವಿರುದ್ಧದ ಹೋರಾಟದಲ್ಲಿ ನಮ್ಮ ಜಿಲ್ಲೆಗೆ ಪ್ರವೇಶಿಸುವ ಪ್ರತಿ ವ್ಯಕ್ತಿಯ ಮತ್ತು ವಾಹನದ ತಪಾಸಣೆ ಕಟ್ಟು ನಿಟ್ಟಾಗಿ ನಡೆಸಬೇಕು. ಸಂಶಯ ಪ್ರಕರಣವಿದ್ದಲ್ಲಿ ತಕ್ಷಣ ಸಂಬಂಧಿತ  ಅಧಿಕಾರಿಗೆ ಮಾಹಿತಿ ನೀಡಬೇಕು. ಸರಿಯಾದ ದಾಖಲೆ ಇಲ್ಲದಿದ್ದಲ್ಲಿ ವಾಹನಗಳನ್ನು ವಶಪಡಿಸಿಕೊಂಡು ವರದಿ ಸಲ್ಲಿಸಬೇಕು ಎಂದರು.

ಈಗ ಸಾರ್ವಜನಿಕ ಆರೋಗ್ಯದ ವಿಪ್ಪತ್ತಿನ ಸಂದರ್ಭವಿದ್ದು ಒಂದೇ ಒಂದು ತಪ್ಪು ವೀಪರಿತ ಪರಿಣಾಮಕ್ಕೆ ಕಾರಣವಾಗಲಿದೆ.  ಆದುದರಿಂದ ಜಿಲ್ಲೆಯ ಎಲ್ಲ  ಗಡಿ ಚೆಕ್‌ಪೋಸ್ಟ್‌ ಗಳು ಸರಿಯಾಗಿ ಕರ್ತವ್ಯ ನಿರ್ವಹಿಸುವುದು ಅತ್ಯವಶಕ ಎಂದು ತಿಳಿಸಿದ್ದಾರೆ.

ಗದಗ ಬಾಗಲಕೋಟೆಯ ಚೆಕ್‌ಪೋಸ್ಟ್‌ ನಲ್ಲಿ  ನಿರತ ಸಿಬ್ಬಂದಿಗಳಿಗೆ ಮಜ್ಜಿಗೆಯ ವಿತರಿಸಿ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ