NEWSನಮ್ಮರಾಜ್ಯ

ಕೋವಿಡ್ – 19ರ ವಿರುದ್ಧ ಹೋರಾಟಕ್ಕೆ ಮತ್ತೊಂದು ಹೆಜ್ಜೆ

“ಆಪ್ತಮಿತ್ರ ಸಹಾಯವಾಣಿ” “ಆಪ್ತಮಿತ್ರ ಆಪ್” ಬಿಡುಗಡೆ ಮಾಡಿದ ಸಿಎಂ ಬಿಎಸ್‌ವೈ ಹೇಳಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರ್ವಜನಿಕರು ಜ್ವರ, ಒಣಕೆಮ್ಮು, ಉಸಿರಾಟದ ತೊಂದರೆ ಅಥವಾ ಇನ್‍ಪ್ಲೂಯೆನ್ಜಾ ಮಾದರಿಯ ರೋಗ ಲಕ್ಷಣಗಳಿದ್ದಲ್ಲಿ ಆಪ್ತ ಮಿತ್ರ ಸಹಾಯವಾಣಿ “14410” ಸಂಖ್ಯೆಗೆ ಕರೆ ಮಾಡಿ ಸಲಹೆ ಹಾಗೂ ಮಾರ್ಗದರ್ಶನ ಪಡೆಯಬಹುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಬುಧವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಆಪ್ತ ಮಿತ್ರ ಸಹಾಯವಾಣಿ  ಹಾಗೂ ಆಪ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ಸೋಂಕಿನ ಲಕ್ಷಣ ಇರುವ ವ್ಯಕ್ತಿಗಳಿಗೆ ಸಹಾಯವಾಣಿ ಮೂಲಕ ಸಲಹೆ ಹಾಗೂ ಮಾರ್ಗದರ್ಶನ ನೀಡಿ ಅವರಿಗೆ ಸೂಕ್ತ ಚಿಕಿತ್ಸೆಗೆ ನೆರವಾಗುವುದು ಇದರ ಮುಖ್ಯ ಉದ್ದೇಶವಾಗಿದೆ. ಕೋವಿಡ್ -19 ಸೊಂಕಿನ ಲಕ್ಷಣ ಇರುವ ವ್ಯಕ್ತಿಗಳು ಆಸ್ಪತ್ರೆಗೆ ಭೇಟಿ ನೀಡುವುದನ್ನು ತಪ್ಪಿಸುವ ಮೂಲಕ ರೋಗ ಹರಡುವ ಸಾಧ್ಯತೆಗಳನ್ನು ಸಹ ಕಡಿಮೆ ಮಾಡಬಹುದಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಲಾಕ್‍ಡೌನ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ದೈನಂದಿನ ಅಗತ್ಯ ವಸ್ತುಗಳಿಗೆ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದೆ. ಸಾರ್ವಜನಿಕರು ಬಹುತೇಕ ಸಹಕರಿಸುತ್ತಿದ್ದಾರೆ. ಮನೆಯಿಂದ ಹೊರಗೆ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಡೋರ್ ಡೆಲಿವರಿ ಸಹಾಯವಾಣಿಗೆ ನಿನ್ನೆ ಚಾಲನೆ ನೀಡಲಾಗಿದೆ. ಇಂದು ಆಪ್ತಮಿತ್ರ ಸಹಾಯವಾಣಿಗೆ ಚಾಲನೆ ನೀಡಿದ್ದೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕೋವಿಡ್ – 19ರ ನಿಯಂತ್ರಣ ಮತ್ತು ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರ, ವೈದ್ಯಕೀಯಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಸ್ವಯಂಸೇವಾ ಸಂಸಂಸ್ಥೆಗಳು ಎಲ್ಲರೂ ಹಗಲಿರುಳೆನ್ನದೆ ಶ್ರಮಿಸಿದ್ದಾರೆ. ಅವರ ಪರಿಶ್ರಮವನ್ನು ಗೌರವಿಸಿ ಸಾರ್ವಜನಿಕರು ಸಹಕರಿಸಿ ತಮ್ಮ ಮನೆಯಲ್ಲಿಯೇ ಇರುವುದು ಒಳ್ಳೆಯದು. ಇದರಿಂದಾಗಿ ಶೀಘ್ರದಲ್ಲಿಯೇ ಕೋವಿಡ್ – 19 ನಿಯಂತ್ರಣಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ. ಆಶ್ವತ್ಥ್ ನಾರಾಯಣ್, ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ  ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾರಕ್, ಸಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶ ಅಜಯ್ ಸೇಠ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವಿದ್ ಆಖ್ತರ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ. ಸೆಲ್ವಕುಮಾರ್, ಗಿರೀಶ್ ಸಿ ಹೊಸೂರ್, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಪಿ. ಮಣಿವಣ್ಣನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ ಕುಮಾರ್‍ಪಾಂಡೆ ಹಾಗೂ ಆಯುಷ್ ಇಲಾಖೆ ಆಯುಕ್ತೆ ಮೀನಾಕ್ಷಿ ನೇಗಿ ಉಪಸ್ಥಿತರಿದ್ದರು.

ಆಪ್ತಮಿತ್ರ ಮೊಬೈಲ್ ಆಪ್ ಮತ್ತು ಸಹಾಯವಾಣಿ ಕಾರ್ಯ

ಕರ್ನಾಟಕ ರಾಜ್ಯದ ಎಲ್ಲಾ ನಿವಾಸಿಗಳಿಗೆ, ವಿಶೇಷವಾಗಿ ಕೊರೋನಾ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ವಾಸಿಸುವವರಿಗೆ ತಲುಪಿ ಇನ್‍ಪ್ಲೂಎನ್ಜಾ ತರಹ ಅನಾರೋಗ್ಯ / ತೀವ್ರ ಉಸಿರಾಟದ ಸೋಂಕು / ಕರೋನಾ ರೋಗ ಲಕ್ಷಣಗಳಂತಹ ಅಥವಾ ಸೋಂಕಿಗೆ ಒಳಗಾಗುವ ಹೆಚ್ಚಿನ ಅಪಾಯ ಹೊಂದಿರುವವರನ್ನು ಗುರುತಿಸುವುದು.

ಕಡಿಮೆ ಅಪಾಯವಿರುವ ಆದರೆ ಕೊರೋನಾ ತರಹದ ಕೆಲವು ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ಗುರುತಿಸುವುದು ಮತ್ತು ಅವರಿಗೆ ಕೌಂಟರ್‍ನಲ್ಲಿ ದೊರೆಯುವ ಔಷಧಿಗಳನ್ನು ಟೆಲಿಮೆಡಿಸಿನ್ ಬೆಂಬಲದೊಂದಿಗೆ ಒದಗಿಸುವುದು ಮತ್ತು ಸ್ವಯಂ – ದಿಗ್ಬಂನಕ್ಕೆ ಒಳಪಡುವ ಬಗ್ಗೆ ಅವರಿಗೆ ಸಮಾಲೋಚಿಸಿ ಸೂಚಿಸುವುದು.

ಕಡಿಮೆ ಅಪಾಯದ ಎಲ್ಲಾ ಪ್ರಕರಣಗಳು ಸಂಪೂರ್ಣವಾಗಿ ಗುಣಮುಖವಾಗುವವರೆಗೆ ಅವರುಗಳನ್ನು ಹಿಂಬಾಲಿಸುವುದು

ಮಧ್ಯಮದಿಂದ ಹೆಚ್ಚಿನ ಹಂತದವರೆಗೆ ಕೊರೋನಾ ಅಪಾಯ ಹೊಂದಿರುವವರನ್ನು ನಿರ್ಧರಿಸುವುದು ಹಾಗೂ ಅವರನ್ನು ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಜ್ವರದ ಕ್ಲಿನಿಕ್ ಅಥವಾ ಕೊರೋನಾ ಸ್ಕ್ರೀನಿಂಗ್ ಕೇಂದ್ರಗಳಿಗೆ ಪಡೆಯುವುದು

ಹಾಟ್ ಸ್ಪಾಟ್‍ಗಳು, ಕ್ಲಸ್ಟರ್‍ಗಳು ಮತ್ತು ರೋಗ ಹೊರ ಹೊಮ್ಮುತ್ತಿರುವ ಪ್ರದೇಶಗಳಲ್ಲಿ ದಿಗ್ಬಂದನ ಕ್ರಮಗಳನ್ನು ಹೆಚ್ಚಿಸುವುದು ಮತ್ತು ಇದೇ ರೀತಿ ರೋಗ ಲಕ್ಷಣಗಳು ಕಡಿಮೆ ಇರುವ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲು ಪ್ರಸ್ತುತ ಲಾಕ್‍ಡೌನ್‍ನ್ನು ಶ್ರೇಣಿಕೃತ ಸಡಿಲಗೊಳಿಸುವ ನಿಧಾರ್Àರಗಳನ್ನು ತಿಳಿಯಲು ಇನಪ್ಲೂಎನ್ಜಾ ತರಹದ ಅನಾರೋಗ್ಯ ಪ್ರಕರಣಗಳನ್ನು ವಿಶ್ಲೇಷಿಸುವುದು.

ಆಪ್ತಮಿತ್ರ ಸಹಾಯವಾಣಿ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಕಾರ್ಯ ನಿರ್ವಹಿಸುತ್ತದೆ. ಬೆಂಗಳೂರಿನ 4 ಕೇಂದ್ರಗಳಲ್ಲಿ, ಮೈಸೂರು ಮತ್ತು ಮಂಗಳೂರು (ಬಂಟ್ವಾಳಾ) ಸೇರಿ ಒಟ್ಟು 4 ಸ್ಥಳಗಳಲ್ಲಿ ಒಟ್ಟು 300 ಆಸನ ಸಾಮರ್ಥ್ಯ ಹೊಂದಿರುವ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದು ಎರಡು ಹಂತದ ವ್ಯವಸ್ಥೆಯಾಗಿದ್ದು, ಮೊದಲ ಹಂತವನ್ನು ಆಯುಷ್ / ನರ್ಸಿಂಗ್ / ಫಾರ್ಮಾ ಅಂತಿಮ ವರ್ಷದ ಸ್ವಯಂಸೇವಕ ವಿದ್ಯಾರ್ಥಿಗಳು ನಿರ್ವಹಿಸುತ್ತಾರೆ. ಎರಡನೇ ಹಂತವನ್ನು ಎಂಬಿಬಿಎಸ್ / ಇಂಟಿಗ್ರೇಡ್ ಮೆಡಿಸಿನ್ / ಆಯುಷ್ ಸ್ವಯಂಸೇವಕ ವೈದ್ಯರು ನಿರ್ವಹಿಸಲಿದ್ದಾರೆ.

ಆಪಾಯದ ಮೌಲ್ಯಮಾಪನ, ಸಮಾಲೋಚನೆ, ಟಿಲಿಮೆಡಿಸಿನ್ ಹಾಗೂ ವಿವರವಾದ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ತಜ್ಞ ವೈದ್ಯರಿಗೆ ಆಯಾ ಸ್ಥಳಗಳಿಂದ ಸಂಪರ್ಕಿಸುತ್ತಾರೆ. ಸಹಾಯವಾಣಿ ರಾಜ್ಯದ ಎಲ್ಲಾ ಭಾಗಗಳ ನಿವಾಸಿಗಳನ್ನು ಒಳಗೊಳ್ಳುತ್ತದೆ.

“ಆಪ್ತಮಿತ್ರ” ಆಫ್ ವೈದ್ಯರಿಂದ ನೇರವಾಗಿ ಟೆಲಿಮೆಡಿಸಿನ್ ಸಲಹೆ ಪಡೆಯಲು ಸ್ಮಾರ್ಟ್ ಪೋನ್ ಹೊಂದಿರುವವರಿಗಾಗಿ ಇರುತ್ತದೆ.

ರಾಜ್ಯದ ಎಲ್ಲಾ ನಿವಾಸಿಗಳನ್ನು ತಲುಪಲು ಎಸ್.ಎಂ.ಎಸ್., ಸೋಷಿಯಲ್ ಮೀಡಿಯಾ., ಎಲೆಕ್ಟ್ರಾನಿಕ್ ಮತ್ತು ಪ್ರಿಂಟ್ ಮೀಡಿಯಾ ಹಾಗೂ ಹೊರಹೋಗುವ ಕರೆಗಳ ಮೂಲಕ ಸಮಗ್ರ ಬಹು-ಮಾಧ್ಯಮ ಅಭಿಯಾನವನ್ನು ಕೈಗೊಳ್ಳಲಾಗುವುದು.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...