ಬೀಜಿಂಗ್: ವಿಶ್ವಮಾರಿ ಕೊರೊನಾ ಸೋಂಕ್ ಮೊದಮೊದಲು ಕಾಣಿಸಿಕೊಂಡಿದ್ ಚೀನಾದ ವುಹಾನ್ ನಗರದಲ್ಲಿ ಅಲ್ಲಿನ ನಿವಾಸಿಗಳು ಹೇಳುವ ಪ್ರಕಾರ 40 ಸಾವಿರಕ್ಕೂ ಹೆಚ್ಚುಮಂದಿ ವೈರಸ್‌ನಿಂದ ಮೃತಪಟ್ಟಿದ್ದಾರೆ ಎಂಬುವುದು ಬಹಿರಂಗವಾಗಿದೆ.
ಅಷ್ಟೇ ಅಲ್ಲ ಇಟಲಿ, ಸ್ಪೇನ್ ಮತ್ತು ಅಮೆರಿಕದಲ್ಲಿ ಹೆಚ್ಚು ಜನರನ್ನು ಈ ಯಮಸೊರೂಪಿ ವೈರಸ್ ಬಲಿ ಪಡೆದಿದೆ. ಇನ್ನೂ ಪಡೆಯುತ್ತಿದೆ. ಚೀನಾ ಸರ್ಕಾರ ಹೇಳುವ ಪ್ರಕಾರ ಇಲ್ಲಿಯವರೆಗೂ ಕೊರೊನಾದಿಂದ 3315ಮಂದಿ ಮೃತಪಟ್ಟಿದ್ದಾರೆ. ಸ್ಪೇನ್ ನಲ್ಲಿ 7716, ಇಟಲಿಯಲ್ಲಿ 11,591 ಮತ್ತು ಅಮೆರಿಕದಲ್ಲಿ 3165 ಜನರು ಸಾವನ್ನಪ್ಪಿದ್ದಾರೆ.
ಇನ್ನು ಕೊರೊನಾ ಹುಟ್ಟಿದ ಚೀನಾದ ವುಹಾನ್‌ನಲ್ಲಿ ಸುಮಾರು 2500 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಚೀನಾ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ.
ಆದರೆ ಸಾವಿನ ಸಂಖ್ಯೆ ಬಗ್ಗೆ ವುಹಾನ್ ನಿವಾಸಿಗಳು ಹೇಳುವುದೇ ಬೇರೆ ! ಸರ್ಕಾರ ನೀಡಿರುವ ಅಧಿಕೃತ ಮೃತರ ಪ್ರಮಾಣವನ್ನು ತಳ್ಳಿ ಹಾಕುವ ಅಲ್ಲಿನ ನಿವಾಸಿಗಳು ಬೆಚ್ಚಿಬೀಳಿಸುವ ಭಯಾನಕ ಸತ್ಯವನ್ನು ಹೇಳಿದ್ದಾರೆ. ಅವರ ಪ್ರಕಾರ, ವುಹಾನ್ ನಗರ ಒಂದರಲ್ಲೇ 42 ಸಾವಿರ ಜನರು ಕೊರೊನಾಕೆ ಬಲಿಯಾಗಿದ್ದಾರೆ.
ಮೃತರ ಸಂಖ್ಯೆಯಲ್ಲಿ ಏರಿಕೆ
ವುಹಾನ್ ನಲ್ಲಿ ಅಂದಾಜು 2500 ಮಂದಿ ಅಸುನೀಗಿದ್ದಾರೆ ಎಂದು ಸರ್ಕಾರ ಹೇಳಬಹುದು. ಆದರೆ ನಿವಾಸಿಗಳ ಪ್ರಕಾರ ಸಾವಿಗೀಡಾವರ ಸಂಖ್ಯೆ ವರದಿಯಾಗಿದ್ದಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ. ಅಂದರೆ ಈ ನಗರದಲ್ಲಿ 7 ಪ್ರತ್ಯೇಕ ಸ್ಮಶಾನಗಳಿದ್ದು, ಪ್ರತಿ ಸ್ಮಶಾನದಿಂದ ಪ್ರತಿ ದಿನ 500 ಚಿತಾಭಸ್ಮವನ್ನು ಮೃತ ಕುಟುಂಬದವರಿಗೆ ಕೊಡಲಾಗುತ್ತಿದೆ. ಅಂದಮೇಲೆ ನಿತ್ಯ 3500 ಮಂದಿ ಮೃತಪಟ್ಟಿದ್ದಾರೆ. ಇನ್ನು ಹಾಂಕಾವ್, ವುಚಾಂಗ್ ಮತ್ತು ಹಾನ್ಯಾಂಗ್ ನಿವಾಸಿಗಳಿಗೆ ಏ. 5ರ ಒಳಗೆ ಚಿತಾಭಸ್ಮವನ್ನು ನೀಡುವುದಾಗಿ ತಿಳಿಸಲಾಗಿದೆ. ಅಂದರೆ ಲೆಕ್ಕಾಚಾರದ ಪ್ರಕಾರ ಕೇವಲ 12 ದಿನಗಳಲ್ಲೇ 42,000 ಮಂದಿ ಮೃತಪಟ್ಟಿದ್ದು, ಕುಟುಂಬದವರಿಗೆ ಚಿತಾಭಸ್ಮವನ್ನು ಹಸ್ತಾಂತರಿಸಿದ ಹಾಗೆ ಆಗುತ್ತದೆ. ಇದು ಅಲ್ಲಿನ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ.
ಭಯಾನಕ ಸತ್ಯ ಬಾಯ್ಬಿಟ್ಟ ನಿವಾಸಿಗಳು
ವುಹಾನ್ ನಗರದ ಚಿತಾಗಾರದಲ್ಲಿ ಬಿಡುವಿಲ್ಲದೆ ಅಲ್ಲಿನ ಸಿಬ್ಬಂದಿ ಬಿಡುವಿಲ್ಲದೆ ಮೃತರಿಗೆ ಮುಕ್ತಿ ನೀಡುತ್ತಿದ್ದು, ಈ ಪ್ರಕಾರ ಇಲ್ಲಿ ಕಡಿಮೆ ಜನ ಸತ್ತಿದ್ದಾರೆ ಅಂತ ಹೇಳಲು ಸಾಧ್ಯವೇ ಇಲ್ಲ ಎಂದು ವುಹಾನ್ ನಿವಾಸಿ ಒಬ್ಬರು ಹೇಳಿದರೆ, ಮತ್ತೊಬ್ಬ ಒಂದು ತಿಂಗಳಿನಲ್ಲಿ ಏನಿಲ್ಲ ಎಂದರೂ 28 ಸಾವಿರ ಮಂದಿಯ ಅಂತ್ಯ ಸಂಸ್ಕಾರ ನಡೆದಿದೆ ಎಂಬ ಭಯಾನಕ ಮಾಹಿತಿಯನ್ನು ಹೊರಹಾಕಿದ್ದಾನೆ.
ಚಿಕಿತ್ಸೆ ಪಡೆಯದೇ ಮನಯಲ್ಲೆ ಹಲವರು ಮೃಥ
ಮತ್ತೊಂದು ಕಳವಳಕಾರಿ ವಿಚಾರ ಅಂದರೆ ಕೊರೊನಾ ವೈಸ್‌ಗೆ ಸೋಂಕಿಗೆ ಸೂಕ್ತ ಚಿಕಿತ್ಸೆ ಪಡೆಯದೆ ಎಷ್ಟೋ ಮಂದಿ ಮನೆಯಲ್ಲೇ ಮೃತಪ್ಟಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅಂಥವರನ್ನು ಸರ್ಕಾರ ‘ಅಧಿಕೃತ ಲೆಕ್ಕಾಚಾರದಿಂದ ಹೊರಗಿಟ್ಟಿದೆ.
ಚೀನಾ ಸರ್ಕಾರದ ಕಣ್ಣಾಮುಚ್ಚಾಲೆ
ವುಹಾನ್ ನಲ್ಲಿ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂದು ಚೀನಾ ಸರ್ಕಾರ ಹೇಳಿಕೊಂಡಿದೆ. ಆದರೆ ಪಾಸಿಟಿವ್ ಇದ್ದರೂ ರೋಗ ಲಕ್ಷಣ ಇಲ್ಲದವರನ್ನು ಸರ್ಕಾರ ಸೋಂಕಿತರ ಪಟ್ಟಿಯಲ್ಲಿ ಸೇರಿಸುತ್ತಿಲ್ಲ ಎಂಬುದು ಮತ್ತೊಂದು ಆತಂಕಕಾರಿ ವಿಚಾರ. ಹೀಗಾಗಿ ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು ದಾಖಲಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ವಿವಿಧ ದೇಶಗಳಲಿ ಮೃತಪಟ್ಟವರು
ವಿಶ್ವದ ವಿವಿಧ ದೇಶಗಳಲ್ಲಿ ಈವರೆಗೆ 7,85,777 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಅದರಲ್ಲಿ ಈಗಾಗಲೇ 37,815 ಮಂದಿ ಮೃತಟ್ಟಿದ್ದಾರೆ. ಇನ್ನು 1,65,607 ರೋಗಿಗಳು ಗುಣಮುಖರಾಗಿದ್ದಾರೆ. 29,488 ಸೋಂಕಿತರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಜತೆಗೆ ಭಾರತದಲ್ಲೂ ಸೋಂಕಿತರ ಸಂಖ್ಯೆ ದಿನದಿ<ದ ದಿನಕ್ಕೆ ಏರಿಕೆ ಆಗುತ್ತಿದ್ದು, ಮೃತರ ಸಂಖ್ಯೆಯೂ ಸ್ಥಿರವಾಗಿಲ್ಲ.