NEWSವಿಡಿಯೋ

ಪ್ರತೀ ರಸ್ತೆಗಳಿಗೂ ಜನಸ್ನೇಹಿ ಹೈಡ್ರೋಜನ್ ಸಿಂಪಡಣೆ : ಗುರುದತ್ ಹೆಗಡೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಮಾ.28ರಿಂದ ನಗರದಲ್ಲಿರುವ 65 ವಾರ್ಡ್ ಗಳ ಪ್ರತೀ ರಸ್ತೆಗಳಿಗೂ ಜನಸ್ನೇಹಿ ಹೈಡ್ರೋಜನ್  ಸಿಂಪಡಿಸಲಾಗುತ್ತದೆ. ಈಗಾಗಲೇ ಪೌರಕಾರ್ಮಿಕರಿಗೆ  ಪಾಲಿಕೆ ವತಿಯಿಂದ ಅಗತ್ಯವಿರುವ ಸೇಪ್ಟಿ ಕಿಟ್ಟ್ ಗಳನ್ನು ನೀಡಲಾಗಿದೆ ಎಂದು ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಆದೇಶದಂತೆ ಎಂ.ಜಿ ರಸ್ತೆಯಲ್ಲಿರುವ  ಮಾರುಕಟ್ಟೆಯನ್ನು ವಸ್ತು ಪ್ರದರ್ಶನ ಆವರಣಕ್ಕೆ ಸ್ಥಳಾಂತರಿಸಿದ್ದು, ಇದಕ್ಕೆ ವ್ಯಾಪಾರಿಗಳು, ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳವ ಮೂಲಕ ಸಹಕರಿಸಿಬೇಕು ಎಂದು ಮನವಿ ಮಾಡಿದರು.

ನಗರದಲ್ಲಿರುವ ನಿರ್ಗತಿಕರ ರಕ್ಷಣೆಗೆ ನೀಡುವ ಸಲುವಾಗಿ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ ಉದ್ಯೋಗವಿಲ್ಲದೆ ಹಣಕಾಸಿನ ತೊಂದರೆ ಉಂಟಾಗಿರುವ ಜನರಿಗೆ ನಗರ ಪಾಲಿಕೆ ವತಿಯಿಂದ 17 ಕಡೆ ಸಾಂತ್ವನ ಕೇಂದ್ರವನ್ನು ಆರಂಭಿಸಲಾಗುವುದು ಎಂದರು.

ನಗರದೆಲ್ಲಡೆ ತಳ್ಳುವ ಗಾಡಿಯವರಿಗೆ ತರಕಾರಿ ಮಾರಲು ಪಾಸ್ ವಿತರಿಸಲಾಗಿದೆ. ನಗರದಲ್ಲಿರುವ ಎಲ್ಲಾ ಸೂಪರ್ ಮಾರ್ಕೆಟ್ ನಿಂದ  ಅಗತ್ಯವಿರುವ ವಸ್ತುಗಳನ್ನು ಹೋಂ ಡೆಲವರಿ ಮಾಡಲು ನಗರ ಪಾಲಿಕೆ ಸೂಚಿಸಲಾಗಿದೆ ಎಂದು ತಿಳಿಸಿದರು.

 

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ