ನ್ಯೂಡೆಲ್ಲಿ: ಕೋವಿಡ್-19 ಸೋಂಕಿಗೆ ತುತ್ತಾಗುವವರ ಸಂಖ್ಯೆ ಭಾರತದಲ್ಲಿ ಹೆಚ್ಚಾಗುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 18 ಮಂದಿ ಮೃತಪಟ್ಟಿದ್ದು ದೇಶದಲ್ಲಿ ಸಾವಿನ ಸಂಖ್ಯೆ 166ಕ್ಕೇರಿದೆ.
ಸೋಂಕಿತರ ಸಂಖ್ಯೆ ದೇಶದಲ್ಲಿ 5734ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರದ ಆರೋಗ್ಯ ಸಚಿವಾಲಯದ ಅಂಕಿಅಂಶ ತಿಳಿಸಿದೆ. ಇಲ್ಲಿಯವರೆಗೆ ದೇಶದಲ್ಲಿ 473 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.
ಇನ್ನು ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 18ನ್ನು ಮೀರಿದ್ದು ಇನ್ನು ಏರಿಕೆಯ ಹಾದಿಯಲ್ಲೇ ಸಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರವೂ ಸೋಂಕು ನಿಯಂತ್ರಿಸುವಲ್ಲಿ ಹರಸಹಾಸ ಪಡುತ್ತಿದೆ.
ಒಡಿಶಾ, ಪಂಜಾಬ್‌ನಲ್ಲೂ ಲಾಕ್‌ಡೌನ್ ಮುಂದುವರಿಕೆ
ದೇಶದಲ್ಲಿ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೊದಲಿಗೆ ಪಂಜಾಬ್ ಸರ್ಕಾರ ಏಪ್ರಿಲ್ 14ರ ನಂತರವು ರಾಜ್ಯದಲ್ಲಿ ಲಾಕ್‌ಡೌನ್ ಮುಂದುರಿಸುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ.
ಇದನ್ನೂ ಓದಿರಿ ಕೊರೊನಾಗೆ ಆರನೇ ಬಲಿ
ಅದರಂತೆ ಒಡಿಶಾ ಸರ್ಕಾರವು ಕೂಡ ಏ.30ರವರೆಗೂ ಲಾಕ್‌ಡೌನ್ ತೆರವುಗೊಳಿಸದಿರಲು ತೀರ್ಮಾನಿಸಿ ಈಗಾಗಲೇ ಘೋಷಣೆ ಮಾಡಿದೆ. ಇನ್ನು ಆಂದ್ರಪ್ರದೇಶ, ತೆಲಂಗಣ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಲಾಕ್‌ಡೌನ್ ಮುಂದುವರಿಯಲಿದೆ.