NEWSನಮ್ಮಜಿಲ್ಲೆ

ಮಿಮ್ಸ್ ಬೋಧಕ  ಆಸ್ಪತ್ರೆಗೆ 50 ಲಕ್ಷ ರೂ. ತುರ್ತು ಬಿಡುಗಡೆಗೆ ಆದೇಶ

ನಾಲ್ಕು ತಿಂಗಳ ವೇತನವನ್ನು ದೇಣಿಗೆ ನೀಡಿದ  ಮಂಡ್ಯ ಸಂಸದೆ ಸುಮತಾ ಅಂಬರೀಶ್‌

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ:  ನಗರದ ಮಿಮ್ಸ್ ಬೋಧಕ  ಆಸ್ಪತ್ರೆಗೆ  ಅತ್ಯವಶ್ಯಕವಾಗಿರುವ ವೆಂಟಿಲೇಟರ್ ಯಂತ್ರಗಳನ್ನು  ಒದಗಿಸಲು 2019-20 ನೇ ಸಾಲಿನ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ  ಮೊದಲನೇ ಕಂತಿನ ಅನುದಾನದಡಿ 50 ಲಕ್ಷ ರೂಗಳನ್ನು ಆಸ್ಪತ್ರೆಗೆ  ಬಿಡುಗಡೆಗೊಳಿಸಲು ತುರ್ತು ಅನುಮೋದನೆ ನೀಡುವಂತೆ ಸಂಸದೆ ಸುಮಲತಾ ಅಂಬರೀಶ್  ಮಂಡ್ಯ ಜಿಲ್ಲಾಧಿಕಾರಿ ಡಾ.ಕೆ. ವೆಂಕಟೇಸ್‌ ಅವರಿಗೆ ಸೂಚಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಕಾಣಿಸಿಕೊಂಡಿರುವ ಮಹಾಮಾರಿ ಕೊರೋನಾ (COVID-19) ಸೋಂಕಿಗೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಸಂಶಯಾಸ್ಪದ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಚಿಕಿತ್ಸೆಗೆ ಸಂಬಂಧಿಸಿದಂತೆ ತುರ್ತು ವೈದ್ಯಕೀಯ ಸೇವೆಯನ್ನು ನೀಡುವ ಸಲುವಾಗಿ ಈ ಹಣವನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ

COVID- 19 ಎಂಬ ವೈರಾಣುವಿನಿಂದ ಹರಡುತ್ತಿರುವ ಸಾಂಕ್ರಾಮಿಕ ರೋಗಗಳ ಪರಿಸ್ಥಿತಿಯನ್ನು  ನಿಯಂತ್ರಿಸಲು ಪ್ರಧಾನಮಂತ್ರಿಯವರ ನಿರ್ದೇಶನ / ನಿರ್ಧಾರಗಳಿಂದ ಸದರಿ ರೋಗದಿಂದ ಬಳಲುತ್ತಿರುವ ಸಾರ್ವಜನಿಕರಿಗೆ ಸರ್ಕಾರದ ವತಿಯಿಂದ ವೈರಾಣು ತಡೆಗಟ್ಟಲು ಪ್ರಯೋಗಾಲಯಗಳ ಸ್ಥಾಪನೆ ಕಾರ್ಯತಂತ್ರ ರೂಪಿಸಿ  ಅಳವಡಿಸಲು ಆಯಾ ರಾಜ್ಯಗಳ ಜವಾಬ್ದಾರಿಯೂ ಹೆಚ್ಚಿನದಿದೆ ಎಂದು ಹೇಳಿದ್ದಾರೆ.

ಸಾರ್ವಜನಿಕ  ಕಾಣಿಕೆಗಳು ಅವಶ್ಯವಿದ್ದು, ಈ ನಿಟ್ಟಿನಲ್ಲಿ ಚುನಾವಣಾ ಪ್ರತಿನಿಧಿಗಳ ಕೈಜೋಡಣೆಯು ಅವಶ್ಯವಿರುವುದರಿಂದ, ದೇಣಿಗೆಯಾಗಿ ಸುಮಲತಾ ಅಂಬರೀಶ್ ಅವರು  ನಾಲ್ಕು ತಿಂಗಳ ಮಾಸಿಕ  ವೇತನವನ್ನು ನೀಡುತ್ತಿದ್ದಾರೆ.

ಅದರಲ್ಲಿ ಎರಡು ತಿಂಗಳ ಮಾಸಿಕ ವೇತನ 2 ಲಕ್ಷ ರೂ.ಗಳನ್ನು   ಪ್ರಧಾನಮಂತ್ರಿ ಪರಿಹಾರ  ನಿಧಿಗೆ

ಮತ್ತು ಇನ್ನೆರಡು ತಿಂಗಳ ವೇತನ 2 ಲಕ್ಷ ರೂ.ಗಳನ್ನು ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿ -COVID-19  ಖಾತೆಗೆ  ಬ್ಯಾಂಕ್‌ ಮುಖಾಂತರ ನೀಡುತ್ತಿರುವುದಾಗಿ ಹೇಳಿದ್ದಾರೆ.

 

 

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ