ಮೈಸೂರು: ಕೋವಿಡ್-19 ತಟೆಗಟ್ಟುವ ಹಿನ್ನೆಲೆ ಜಿಲ್ಲಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವ ಸಂಬಂಧ ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ಮೈಸೂರು ನಗರ ಮತ್ತು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಯಾರು ಸಹ ಹಸುವಿನಿಂದ ಬಳಲಬಾರದು ಎಂದು ಪ್ರತಿ ನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಬಡವರಿಗೆ, ನಿರ್ಗತಿಕರಿಗೆ, ವಲಸೆ ಬಂದವರಿಗೆ ಹಾಗೂ ಅಗತ್ಯ ಸೇವೆಯ ಸರ್ಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಆಹಾರವನ್ನು ವಿತರಿಸಲಾಗುತ್ತದೆ.
ಮೈಸೂರಿನಲ್ಲಿ ಕಂಡುಬರುವ ಇತರೆ ಸಂಘ-ಸಂಸ್ಥೆಗಳು ಗುರುತಿಸದ ಅಥವಾ ಆಹಾರ ಪೂರೈಕೆ ಆಗದೆ ಇರುವ ಸ್ಥಳಗಳಿಗೆ ತೆರಳಿ ಊಟವನ್ನು ವಿತರಿಸಲಾಗುತ್ತದೆ. ಅನ್ವೇಷಣಾ ಸೇವಾ ಟ್ರಸ್ ಪ್ರತಿನಿತ್ಯ ಒಂದು ಸಾವಿರಕ್ಕೂ ಹೆಚ್ಚು ಜನರ ಹಸಿವನ್ನು ನಿಗಿಸುತ್ತಿರುವುದು ವಿಶೇಷವಾಗಿದೆ. ಈ ಸಂಬಂಧ ಹಲವಾರು ಸ್ವಯಂಪ್ರೇರಿತರಾಗಿ ಟ್ರಸ್ಟ್ಗೆ ಧನಸಹಾಯ, ತರಕಾರಿ, ಫುಡ್ಬಾಕ್ಸ್ ಮತ್ತು ಅಕ್ಕಿ ಸೇರಿದಂತೆ ಇತರೆ ಅಗತ್ಯ ಸಾಮಗ್ರಿಗಳನ್ನು ದಾನವಾಗಿ ನೀಡುತ್ತಿದ್ದಾರೆ.
ಅನ್ವೇಷಣಾ ಸೇವಾ ಟ್ರಸ್ಟ್ ಊಟದ ಜೂತೆ ಹೋಂ ಕ್ವಾರಂಟೈನ್ನಲ್ಲಿರುವವರಿಗೆ ದಿನಸಿ ಪದಾರ್ಥಗಳ ಕಿಟ್ನ್ನು ಒದಗಿಸಲಾಗುತ್ತದೆ. ಮೈಸೂರಿನ ಬಿ.ಎಂ.ಆಸ್ಪತ್ರೆ, ಪೊಲೀಸ್ ಆಯುಕ್ತರ ಕಚೇರಿ, ಎ.ಸಿ.ಪಿ. ಕಚೇರಿ ಸೇರಿದಂತೆ ಆರು ಸ್ಥಳಗಳಲ್ಲಿ ಡಿಸ್ಇನ್ಫೆಕ್ಷನ್ ನಿರ್ಮಾಣ ಮಾಡಲಾಗಿದೆ.
ಅಮರ್ನಾಥ್ ರಾಜೇ ಅರಸ್ರವರ ಟ್ರಸ್ಟ್ನ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದು, ಟ್ರಸ್ಟ್ನ ಅಧ್ಯಕ್ಷರಾಗಿ ಡಾ.ಎಂ.ಜಿ.ಆರ್.ಆರಸ್, ಉಪಾಧ್ಯಕ್ಷರಾಗಿ ಲಿಂಗರಾಜೇಅರಸ್, ಅಶ್ವಿನ್ಕುಮಾರ್, ಖಜಾಂಚಿಯಾಗಿ ಕೆ.ಕೆ.ಭಾಸ್ಕರ್, ಸಹಕಾರ್ಯದರ್ಶಿಯಾಗಿ ಪ್ರಸನ್ನಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ.
ಟ್ರಸ್ಟ್ನ ಸಂಚಾಲಕರಾಗಿ ದಿನೇಶ್ ಅರಸ್, ಕೊರೊನಾ ಕಾಲದ ಸ್ವಯಂ ಸೇವಕರಾಗಿ ಹರೀಶ್ ಅರಸ್, ಅಭಿನಂದನ್ ಅರಸ್, ಸಂತೋಷ್, ಅನಿತ್, ಶರತ್ ಅರಸ್, ರಾಮಕೃಷ್ಣ ಹೆಗಡೆ, ಸತೀಶ್, ದೇವಪ್ಪ, ಸೋಮು ಚಂದ್ರಶೇಖರ್, ಫಣೀಂದ್ರ, ಬಾನುಕುಮಾರ್ರವರು ಕಾರ್ಯನಿರ್ವಹಿಸುತ್ತಿದ್ದಾರೆ. ಧರ್ಮದರ್ಶಿಗಳು ಮತ್ತು ಇತರೆ ದಾನಿಗಳ ಸಹಕಾರದೊಂದಿಗೆ, ಅನ್ವೇಷಣಾ ಸೇವಾ ಟ್ರಸ್ಟ್ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.