ಬೆಂಗಳೂರು: ರಂಗಭೂಮಿ ಸೇರಿದಂತೆ ಕಲೆಗಾಗಿ ದುಡಿಯುವ ಕಲಾವಿದರು ಕೊರೊನಾದಂತದ ವಿಷಮ ಪರಿಸ್ಥಿಯಿಂದ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು ಅವರಿಗೆ ಸರ್ಕಾರ ನೆರವಾಗಬೇಕು ಎಂದು ರಂಗನಟದ ಮಾಜಿ ಸದಸ್ಯ ಆರ್. ವೆಂಕಟರಾಜು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದಾರೆ.
ಕಲೆಗಾಗಿ ದುಡಿಯುವ ಜನ ಹವ್ಯಾಸಿ, ವೃತ್ತಿ-ಅರೆ ವೃತ್ತಿ, ಪೌರಾಣಿಕ, ಸೇರಿದಂತೆ ಚಲನಚಿತ್ರಗಳಲ್ಲಿನ ಪೋಷಕ ಕಲಾವಿದ, ಬರಹಗಾರ ಇವರೆಲ್ಲರೂ ಒಂದೇ ರಂಗ ಬಳ್ಳಿಯ ಹೂಗಳು. ಈ ಜನರ ಸಾಂಸ್ಕೃತಿಕ ಸಂಪನ್ನತೆ ನಾಡಿಗೆ ದೇಶಕ್ಕೆ ಗುರುತರ ಕೊಡುಗೆ ನೀಡಿದೆ. ಆದರೆ ಈಗ ಕರೋನವೈರಸ್ ಭೀಕರ ಮಾರಿಯ ಕಾರಣಕ್ಕೆ ಕಲಾವಿದರು ತಮ್ಮ ಕುತ್ತಿಗೆ, ಕಾಲುಗಳಿಗೆ, ಸರಪಳಿ ಕಟ್ಟಿಸಿಕೊಂಡು ಗೃಹ ಬಂಧಿಯಾಗಿದ್ದಾರೆ.
ಬೆಂಕಿಯ ಕುಲುಮೆಯಲ್ಲಿ ಬೆಂದು ಹೋಗುವ ಹೇಳಿಕೊಳ್ಳಲಾರದ ಸ್ವಾಭಿಮಾನಿಗಳು ಅವರು . ಇಂತಹ ವಿಷಮ ಪರಿಸ್ಥಿತಿಯಲ್ಲಿ ಅವರ ಕುಟುಂಬಗಳಿಗೆ ಆಹಾರ ಪೂರೈಕೆಯ ಜೊತೆಗೆ, ಒಂದಿಷ್ಟು ಹಣಕಾಸಿನ ನೆರವು ಬೇಕು ಎಂದು ಕೋರಿದ್ದಾರೆ.
ಕಲಾವಿದರ ಅಗತ್ಯ ಮಾಹಿತಿಯನ್ನು ಪಡೆದು, ದಿನವೊಂದಕ್ಕೆ ಕನಿಷ್ಠ 500ರೂಪಾಯಿಯ ಗರಿಷ್ಠ ಸರ್ಕಾರದ ವಿವೇಚನೆಗೆ ಸಂಬಂಧಿಸಿದ ಹಾಗೆ, “ಜೀವನಭತ್ಯೆ” ನೀಡುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಇದು ಅವರ ಕುಟುಂಬಕ್ಕೆ ಸಹಕಾರಿ ಆಗುವುದರ ಜೊತೆಗೆ ಮುಂದಿನ ಕಲಾಸೇವೆಗೆ ಮನೋಬಲ ದೊರಕಿಸಿ ಕೊಟ್ಟಂತಾಗುತ್ತದೆ. ಕೃಷಿಕರ ಜೀವನವನ್ನು ಸುಭದ್ರಗೊಳಿಸಲು ತಾವು ಮಾಡಿದ ನಿರಂತರ ಹೋರಾಟವನ್ನು ಸ್ಮರಿಸುತ್ತಾ, ಕಲೆಗಾಗಿ ದುಡಿಯುವವರ ಕೈಯನ್ನು ಬಲಪಡಿಸಬೇಕೆಂದು ಮನವಿ ಮಾಡಿದ್ದಾರೆ.