ನ್ಯೂಡೆಲ್ಲಿ: ರಾಷ್ಟ್ರಪತಿ ಭವನಕ್ಕೂ ಕೊರೊನಾ ಮಹಾಮಾರಿ ದಾಳಿ ಇಟ್ಟಿದ್ದು, ಒಬ್ಬರಲ್ಲಿ ಸೋಂಕು ಪಾಸಿಟಿವ್ ಇರುವುದು ತಿಳಿದು ಬಂದಿದೆ.
ಇದರಿಂದ ರಾಷ್ಟ್ರಪತಿ ಭವನದಲ್ಲಿ ಕೆಲಸ ಮಾಡುತ್ತಿದ್ದ 125 ಕುಟುಂಬಗಳನ್ನು ಕ್ವಾರಂಟೈನ್ ಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ರಾಷ್ಟ್ರಪತಿ ಭವನದಲ್ಲಿ ಸ್ವಚ್ಛತೆ ನೌಕರನಾಗಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ ಎಂದು ಮೂಲಗಳು ತಿಳಿಸಿವೆ. ಈ ವ್ಯಕ್ತಿಯ ತಾಯಿ ಈ ಹಿಂದೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಹೀಗಾಗಿ ಅವರ ಮನೆಯನ್ನು ಕಳೆದ ಶನಿವಾರದಿಂದ ಸೀಲ್ ಮಾಡಲಾಗಿದ್ದು, ಇಡೀ ಕುಟುಂಬವನ್ನು ಕ್ವಾರಂಟೈನ್ ನಲ್ಲಿಡಲಾಗಿದೆ.
ಅದೇ ದಿನ ಆ ಸಿಬ್ಬಂದಿಯ ಅಕ್ಕಪಕ್ಕದ 30 ಮನೆಗಳ ನಿವಾಸಿಗಳನ್ನು ತೀವ್ರ ಕ್ವಾರಂಟೈನ್ ನಲ್ಲಿರಿಸಿ ಸರ್ಕಾರದಿಂದಲೇ ಆಹಾರ ಪೂರೈಸಲಾಗುತ್ತಿದೆ. ಇತ್ತೀಚಿನ ಬೆಳವಣಿಗೆಯ ನಂತರ ಮತ್ತೆ 95 ಕುಟುಂಬಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಯಾರೊಬ್ಬರನ್ನೂ ಮನೆಯಿಂದ ಹೊರಬರದಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.
ನೌಕರನ ಮನೆಯ ಅಕ್ಕಪಕ್ಕದಲ್ಲಿರುವ ನಿವಾಸಿಗಳಷ್ಟೇ ಅಲ್ಲದೇ ರಾಷ್ಟ್ರಪತಿ ಭವನದಲ್ಲಿರುವ 125 ಕುಟುಂಬಗಳ ಸುಮಾರು 500 ಮಂದಿಯೂ ಕೂಡ ಈಗ ಸ್ವ ನಿರ್ಬಂಧದಲ್ಲಿದ್ದಾರೆ. ಆದರೆ ಈ ಕುರಿತು ರಾಷ್ಟ್ರಪತಿ ಭವನದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.