ನ್ಯೂಡೆಲ್ಲಿ: ಲಾಕ್ ಡೌನ್ ಅವಧಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಕಾಲ್ ಬಳಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಾಟ್ಸ್ಆಪ್ ಕೂಡ ವಿಡಿಯೋ ಕಾಲ್ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿರುವುದಾಗಿ ಹೇಳಿಕೆ ನೀಡಿದೆ.
ಪ್ರಸ್ತುತ ವಾಟ್ಸ್ ಆಪ್ನಲ್ಲಿ ನಾಲ್ವರು ಮಾತ್ರ ವಿಡಿಯೋ ಕಾಲ್ ನಲ್ಲಿ ಏಕಕಾಲದಲ್ಲಿ ಭಾಗವಹಿಸಲು ಅವಕಾಶವಿದೆ. ಮುಂದಿನ ಆವೃತ್ತಿಯಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ, ಆದರೆ, ಎಷ್ಟು ಸಂಖ್ಯೆ ಎಂಬುದನ್ನು ಹೇಳಿಲ್ಲ.
ಈನಡುವೆ ಜಗತ್ತಿನಲ್ಲಿ ವಿಡಿಯೋ ಕಾನ್ಫರೆನ್ಸ್ ಕಾಲ್ಗೆ ಜನಪ್ರಿಯವಾಗಿರುವ ಝೂಮ್ ಆಪ್ ವಿರುದ್ಧ ಕೇಂದ್ರ ಸರ್ಕಾರ ಆಕ್ಷೇಪವೆತ್ತಿರುವ ಇದರ ಮಧ್ಯೆಯೇ ವಾಟ್ಸ್ಆಪ್ನ ಈ ನಿರ್ಧಾರ ಗ್ರಾಹಕರಲ್ಲಿ ಕುತೂಹಲ ಹೆಚ್ಚಿಸಿದೆ.
ಗ್ರೂಪ್ ವಿಡಿಯೋ ಕಾಲ್ ಬಳಸಬೇಕಾದರೆ ಪ್ರತಿಯೊಬ್ಬರೂ ತಮ್ಮಆಪ್ ಅನ್ನು ಅಪ್ಡೇಟ್ ಮಾಡಿಕೊಳ್ಳಬೇಕಾಗಿದೆ. ಶೀಘ್ರವೇ ಈ ಸೇವೆ ಸಿಗಲಿದೆ ಉಚಿತವಾಗಿ ಈ ಸೇವೆ ಸಿಗುವುದೋ ಅಥವಾ ಶುಲ್ಕ ವಿಧಿಸಲಾಗುತ್ತದಯೇ ಎಂಬುದನ್ನು ವಾಟ್ಸ್ ಆಪ್ ಕಂಪನಿ ತಿಳಿಸಿಲ್ಲ.
ಅದೇನೇ ಇರಲಿ ಈ ಕಂಪನಿಯು ಗ್ರಾಹಕರಿಗೆ ಸಿಹಿಸುದ್ದಿ ನೀಡಲು ಮುಂದಾಗಿರುವುದು ಹಲವು ಮಂದಿಗೆ ಖುಷಿ ತಂದಿದೆಯಂತೆ. ಜತೆಗೆ ಯಾವಾಗ ಹೊಸ ಸುದ್ದಿ ಹೊರ ಬೀಳಲಿದೆ ಎಂದು ಎದುರು ನೋಡುತ್ತಿರುವುದಾಗಿಯೂ ಹೇಳಿಕೊಳ್ಳುತ್ತಾರೆ.