ಧಾರವಾಡ: ಜಗತ್ತಿನಾದ್ಯಂತ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿನಿಯರಿಗೆ ಮಾಸ್ಕ್ ವಿತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್.ಆರ್ . ಪುರುಷೋತ್ತಮ ತಿಳಿಸಿದ್ದಾರೆ.
ನವಲಗುಂದದ ರಾಣಿ ಚನ್ನಮ್ಮ ವಸತಿ ಶಾಲೆಯ 40 ವಿದ್ಯಾರ್ಥಿನಿಯರಿಗೆ ಮಾಸ್ಕ್ ಹಾಗೂ ಬಿಸಿನೀರು ಪೂರೈಕೆ ವ್ಯವಸ್ಥೆ ಕಲ್ಪಿಸಲಾಗಿದೆ ಕೊರೊನಾ ವೈರಸ್ ಹರಡದಂತೆ ಕಾಳಜಿ ವಜಿಸಲಾಗಿದೆ ಎಂದು ಹೇಳಿದರು.
ಕೈಗಳನ್ನು ಆಗಾಗ ಸಾಬೂನಿನಿಂದ, ಹ್ಯಾಂಡ್ ವಾಶ್‍ನಿಂದ ತೊಳೆದುಕೊಳ್ಳಬೇಕು. ಕುದಿಸಿ ಆರಿಸಿದ ನೀರನ್ನು ಮಾತ್ರ ಕುಡಿಯಬೇಕು. ಸರಿಯಾಗಿ ಬೇಯಿಸಿದ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದ್ದಾರೆ.
ಬೇಯಿಸದೇ, ಶುಚಿತ್ವ ಇಲ್ಲದಿರುವ ಪದಾರ್ಥವನ್ನು ಸೇವಿಸದೇ ಹಾಗೂ ಪರಸ್ಪರ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿರುವಂತೆ ತಿಳುವಳಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.