NEWSಆರೋಗ್ಯ

ಸಂಡೂರು ತಾಲೂಕಿನಲ್ಲಿ ಮೂವರು ನಕಲಿ ವೈದ್ಯರ ವಶ

ಸಂಡೂರು ತಹಸೀಲ್ದಾರ್ ರಶ್ಮೀ ನೇತೃತ್ವ l ದಿಢೀರ್ ಕಾರ್ಯಾಚರಣೆ

ವಿಜಯಪಥ ಸಮಗ್ರ ಸುದ್ದಿ

ಬಳ್ಳಾರಿ:  ಸಂಡೂರು ತಾಲೂಕಿನ ವಿವಿಧೆಡೆ ಮಂಗಳವಾರ ಕಾರ್ಯಾಚರಣೆ ನಡೆಸಿದ ಸಂಡೂರು ತಹಸೀಲ್ದಾರ್ ರಶ್ಮಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ಮೂರು ಜನ ನಕಲಿ ವೈದ್ಯರನ್ನು ಪತ್ತೆ ಹಚ್ಚಿ, ಅವರು ನಡೆಸುತ್ತಿದ್ದ ಕ್ಲಿನಿಕ್ ಸೀಜ್ ಮಾಡಿದ್ದಾರೆ.

ಇವರ ಮೇಲೆ ಪ್ರಕರಣ ದಾಖಲಿಸುವಂತೆ ಕೂಡ್ಲಿಗಿ ಪೊಲೀಸರ ವಶಕ್ಕೆ ನೀಡಲಾಗಿದೆ. ಕಾಳಿಂಗೇರಿಯಲ್ಲಿ ಅವಿಷೇಕ್ ಎನ್ನುವ ಆರ್.ಎಂ.ಪಿ ಡಾಕ್ಟರ್ ಪಶ್ಚಿಮ ಬಂಗಾಳದ ನಕಲಿ ಪ್ರಮಾಣಪತ್ರ ಮತ್ತು ನಕಲಿ ಐಡಿ ಕಾರ್ಡ್ ಇಟ್ಟುಕೊಂಡು ‌ಜನರಿಗೆ‌ ಚಿಕಿತ್ಸೆ ನೀಡುತ್ತಿದ್ದ,ಸ್ಟೀರಾಯ್ಡ್ ಬಳಸುತ್ತಿದ್ದ ಮತ್ತು ಓವರ್ ಡೋಸ್ ಕೋಡ್ತಾ ಇರುವುದು ತನಿಖೆ ವೇಳೆ ಕಂಡುಬಂದಿದೆ ಎಂದು ತಹಸೀಲ್ದಾರ್ ರಶ್ಮಿ ತಿಳಿಸಿದರು.

ಚೋರನೂರು ಹೋಬಳಿ ವ್ಯಾಪ್ತಿಯ ಅಂಕಮ್ಮನಾಳದಲ್ಲಿ ಇಬ್ಬರು ಇದೇ ರೀತಿ ಕ್ಲಿನಿಕ್ ಇಟ್ಟುಕೊಂಡು‌ ನಕಲಿ ಪ್ರಮಾಣಪತ್ರ ಮತ್ತು ನಕಲಿ ಐಡಿ ಇಟ್ಟುಕೊಂಡು ಜನರಿಗೆ ಚಿಕಿತ್ಸೆ ನೀಡುತ್ತಿದ್ದರು. ಬಸವರಾಜ ಮತ್ತು ಜಾಫರ್ ಅಲಿ ಎನ್ನುವವರಲ್ಲಿ ಕರ್ನಾಟಕ ಮೆಡಿಕಲ್ ಅಸೋಸಿಯೇಶನ್ ಸಂಬಂಧಿಸಿದ ಯಾವುದೇ ಪ್ರಮಾಣಪತ್ರ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಲಭ್ಯವಿರಲಿಲ್ಲ. ಇವರು ಕೂಡ ಸ್ಟೀರಾಯ್ಡ್ ಬಳಸುತ್ತಿರುವುದು ಮತ್ತು ಓವರ್ ಡೋಸ್ ಕೋಡ್ತಾ ಇರುವುದು ಕಂಡುಬಂದಿದೆ ಎಂದರು.

ಈ ಕಾರ್ಯಾಚರಣೆ ಸಂದರ್ಭದಲ್ಲಿ ಕೂಡ್ಲಿಗಿ ಪೊಲೀಸರ ವಶಕ್ಕೆ ಇವರನ್ನು ನೀಡುವ ಸಂದರ್ಭದಲ್ಲಿ ಜಾಫರ್ ಅಲಿ ಎನ್ನುವವರು ತಪ್ಪಿಸಿಕೊಂಡಿದ್ದು, ಪೊಲೀಸರು ಬಂಧನಕ್ಕೆ ‌ಜಾಲ‌ ಬಿಸಿದ್ದಾರೆ. ಉಳಿದ ಇಬ್ಬರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಕೂಡ್ಲಿಗಿ ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ‌ ಡಾ.ಗೋಪಾಲಕೃಷ್ಣ,ಡಾ.ಕಿರಣ ಹಾಗೂ ಕಂದಾಯ ಇಲಾಖೆಯ ಆರ್ ಐಗಳು ಮತ್ತು ವಿಎಗಳು ಇದ್ದರು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ