ಬೆಂಗಳೂರು: ಕಾಲರಾ ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ವತಿಯಿಂದ ತೀವ್ರ ನಿಗವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಜಲಮಂಡಳಿಯು ನೀರು ಸರಬರಾಜು ಕೊಳವೆಯಲ್ಲಿ ಸೋರುವಿಕೆಯನ್ನು ಸಾರ್ವಜನಿಕರಿಂದ ಅಥವಾ ಮಂಡಳಿಯ ಸಿಬ್ಬಂದಿ ಗುರುತಿಸಿದ ತಕ್ಷಣ ಸೋರುವಿಕೆ ತಡೆಗಟ್ಟಲು ಕ್ರಮವಹಿದೆ. ಇದಲ್ಲದೆ ಕಲುಷಿತ ನೀರು ಸರಬರಾಜಾಗುತ್ತಿದ್ದಲ್ಲಿ ತಕ್ಷಣ ಕ್ರಮವಹಿಸಿ ಕಲುಷಿತ ನೀರು ಸರಬರಾಜು ಕೊಳವೆಗೆ ಸೇರದಂತೆ ಕೂಡಲೇ ಕಾರ್ಯ ಪ್ರವೃತವಾಗುತ್ತಿದೆ ಎಂದು ಹೇಳಿದ್ದಾರೆ.
ಕಾಲರಾ ಮತ್ತು ಜಿ.ಇ. ಗೆ ಸಂಬಂಧಿಸಿದ ಮಾಹಿತಿಯನ್ನು ಸಾಂಕ್ರಾಮಿಕ ರೋಗಗಳ ಆಸ್ಪತ್ರೆ(Health & Family WelfareDepartment, Government Epidemic Disease Hospital, Bangalore) ಯಿಂದ ಮಾ.18, 19 ರಂದು ನೋಂದಣಿಯಾದ ಪ್ರಕರಣಗಳ ವಿಳಾಸವನ್ನು ಪಡೆದು ಅಂತಹ ಸ್ಥಳಗಳಿಂದ ನೀರಿನ ಮಾದರಿಯನ್ನು ಸಂಗ್ರಹಿ, ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಾ.18, 19 ರವರೆಗೆ ದಾಖಲುಗೊಂಡ ಒಟ್ಟು 10 ಪ್ರಕರಣಗಳಲ್ಲಿ 4 ಪ್ರಕರಣಗಳಿಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಅಂದು ನೀರು ಸರಬರಾಜು ಇಲ್ಲದ ಕಾರಣ ನೀರಿನ ಮಾದರಿಯನ್ನು ಸಂಗ್ರಹಿಸಿಲ್ಲ. 2 ಪ್ರಕರಣಗಳಿಗೆ ಸಂಬಂಧಿಸಿದ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ನೀಡಲಾಗಿದ್ದು, ಫಲಿತಾಂಶ ನಿರೀಕ್ಷಣೆಯಲ್ಲಿದೆ. ಉಳಿದ 4 ಪ್ರಕರಣಗಳು ಜಲ ಮಂಡಳಿಯ ವ್ಯಾಪ್ತಿಗೆ ಒಳಪಟ್ಟಿ ಎಂದು ಸ್ಪಷ್ಟಪಡಿಸಿದರು.