ಬೆಂಗಳೂರು: ರಾಜ್ಯದ 16ನೇ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದವರಲ್ಲಿ 517 ಅಭ್ಯರ್ಥಿಗಳು ನಿನ್ನೆ ಸೋಮವಾರ (ಏ.24) ವಾಪಸ್ ಪಡೆದಿದ್ದು ಈಗ ರಣಕಣದಲ್ಲಿ ಅಂತಿಮವಾಗಿ 2,613 ಅಭ್ಯರ್ಥಿಗಳು ಉಳಿದಿದ್ದಾರೆ.
ಉಮೇದುವಾರಿಕೆ ವಾಪಸ್ ಪಡೆದುಕೊಳ್ಳಲು ಸೋಮವಾರ ಕೊನೇ ದಿನವಾಗಿತ್ತು. ಅದರಂತೆ ಒಟ್ಟು 517 ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಈಗ 2,427 ಪುರುಷ, 184 ಮಹಿಳಾ ಹಾಗೂ ಇಬ್ಬರು ಇತರರು ಸೇರಿ ಒಟ್ಟು 2,613 ಅಖಾಡದಲ್ಲಿದ್ದಾರೆ.
ಬಿಜೆಪಿಯಿಂದ 224, ಕಾಂಗ್ರೆಸ್‌ನಿಂದ 223, ಆಮ್ ಆದ್ಮಿ ಪಕ್ಷದಿಂದ 209, ಜೆಡಿಎಸ್‌ನಿಂದ 207, ಬಿಎಸ್‌ಪಿಯಿಂದ 133, ಸಿಪಿಎಂ 1, ಜೆಡಿಯು 8, ಎನ್‌ಪಿಪಿ 2, ನೊಂದಾಯಿತ ಮಾನ್ಯತೆ ಹೊಂದಿಲ್ಲದ ಪಕ್ಷಗಳಿಂದ 685 ಹಾಗೂ ಪಕ್ಷೇತರರು 918 ಅಭ್ಯರ್ಥಿಗಳು ಈ ಬಾರಿಯ ಚುನಾವಣಾ ಕಣದಲ್ಲಿದ್ದಾರೆ.
ಈ ಪೈಕಿ ಅತಿ ಹೆಚ್ಚು 24 ಅಭ್ಯರ್ಥಿಗಳು ಬಳ್ಳಾರಿ ನಗರ ಕ್ಷೇತ್ರದಲ್ಲಿ ಇದ್ದರೆ, ಅತಿ ಕಡಿಮೆ ಯಮಕನಮರಡಿ ಕ್ಷೇತ್ರ ಸೇರಿ ಏಳು ಕ್ಷೇತ್ರಗಳಲ್ಲಿ ತಲಾ 5ರಂತೆ ಅತಿ ಕಡಿಮೆ ಅಭ್ಯರ್ಥಿಗಳು ಇದ್ದಾರೆ. ಒಟ್ಟು 14 ಕ್ಷೇತ್ರಗಳಲ್ಲಿ ಹೆಚ್ಚು ಮಹಿಳಾ ಅಭ್ಯರ್ಥಿಗಳು ಮೂರು ಕ್ಷೇತ್ರಗಳಲ್ಲಿ 6 ಮಂದಿ ಇದ್ದಾರೆ.
ಉಳಿದಂತೆ ನಾಲ್ಕು ಕ್ಷೇತ್ರಗಳಲ್ಲಿ ತಲಾ 5 ಮಹಿಳಾ ಅಭ್ಯರ್ಥಿಗಳು, 7 ಕ್ಷೇತ್ರಗಳಲ್ಲಿ ತಲಾ 4 ಮಹಿಳಾ ಅಭ್ಯರ್ಥಿಗಳು ಇದ್ದಾರೆ. ಅತಿಹೆಚ್ಚು ಪಕ್ಷೇತರರು 15 ಅಭ್ಯರ್ಥಿಗಳು ಹೊಸಕೋಟೆ ಕ್ಷೇತ್ರದಲ್ಲಿ ಇದ್ದಾರೆ. ಅತಿ ಕಡಿಮೆ ಪಕ್ಷೇತರರು ಇರುವ ಕ್ಷೇತ್ರ – ಗುರುಮಿಠಕಲ್, ಮಾನ್ವಿ, ಲಿಂಗಸಗೂರು, ಬ್ಯಾಡಗಿ, ಉಡುಪಿ, ಕಾಪು, ತೀರ್ಥಹಳ್ಳಿ, ಕಂಪ್ಲಿ, ಬಂಟ್ವಾಳ, ಮುದ್ದೆಬಿಹಾಳ.
ಐದೇ ಮಂದಿ ಸ್ಪರ್ಧಾ ಕಣ!: ಅತಿ ಕಡಿಮೆ ಯಮಕನಮರಡಿ, ದೇವದುರ್ಗ, ತೀರ್ಥಹಳ್ಳಿ, ಕುಂದಾಪುರ, ಕಾಪು, ಮಂಗಳೂರು, ಬಂಟ್ವಾಳ.
ಮಹಿಳೆಯರಿಗೆ ಮಹಿಳೆಯರೇ ಸವಾಲು: ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಪ್ರಮುಖ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಪಕ್ಷೇತರ ಮಹಿಳೆಯರೇ ಸವಾಲು ಹಾಕಿದ್ದಾರೆ.
ರಾಜರಾಜೇಶ್ವರಿನಗರದಿಂದ ಕಾಂಗ್ರೆಸ್ ಅಭ್ಯರ್ಥಿ ಎಚ್. ಕುಸುಮಾ ಸ್ಪರ್ಧಿಸಿದ್ದರೆ ಅಲ್ಲಿ 6 ಮಂದಿ ಪಕ್ಷೇತರು ಮಹಿಳೆಯರು ಕಣದಲ್ಲಿದ್ದಾರೆ. ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಕಣದಲ್ಲಿರುವ ಜಯನಗರ ಕ್ಷೇತ್ರದಿಂದ ಸಹ 6 ಪಕ್ಷೇತರ ಮಹಿಳೆಯರು ಇದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ ಸ್ಪರ್ಧಿಸಿರುವ ನಿಪ್ಪಾಣಿ ಕ್ಷೇತ್ರದಲ್ಲಿ 6 ಮಂದಿ ಮಹಿಳೆಯರು ಪಕ್ಷೇತರರು ಇದ್ದಾರೆ.
ಕಾಂಗ್ರೆಸ್‌ನ ರೂಪಕಲಾ ಶಶಿಧರ ಹಾಗೂ ಬಿಜೆಪಿಯ ಅಶ್ವಿನಿ ಸಂಪಗಿ ಸ್ಪರ್ಧಿಸಿರುವ ಕೆಜಿಎಫ್ ಕ್ಷೇತ್ರದಲ್ಲಿ 6 ಮಹಿಳೆಯರು ಪಕ್ಷೇತರರು ಇದ್ದಾರೆ. ಕಾಂಗ್ರೆಸ್ ಲಕ್ಷ್ಮೀ ಹೆಬ್ಟಾಳ್ಕರ್ ಅವರು ಸ್ಪರ್ಧಿಸಿರುವ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲೂ ನಾಲ್ವರು ಪಕ್ಷೇತರ ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಎರಡು ಬಿಯು ಬಳಕೆ: ಅಂತಿಮ ಕಣದಲ್ಲಿ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇರುವ ರಾಜ್ಯದ 16 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನಕ್ಕೆ 2 ಬ್ಯಾಲೆಟ್ ಯೂನಿಟ್ (ಬಿಯು) ಬಳಕೆ ಮಾಡಲಾಗುತ್ತದೆ ಎಂದು ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.
ರಾಜಾಜಿನಗರ, ಹೊಸಕೋಟೆ, ಯಲಹಂಕ, ಬ್ಯಾಟರಾಯನಪುರ, ಬಳ್ಳಾರಿ ನಗರ, ಹನೂರು, ಗೌರಿಬಿದನೂರು, ಚಿಕ್ಕಮಗಳೂರು, ಚಿತ್ರದುರ್ಗ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಕೋಲಾರ, ಗಂಗಾವತಿ, ಶ್ರೀರಂಗಪಟ್ಟಣ, ಕೃಷ್ಣರಾಜ, ನರಸಿಂಹರಾಜ, ರಾಯಚೂರು ಕ್ಷೇತ್ರಗಳಲ್ಲಿ ಈ ಬಾರಿ ಎರಡು ಬ್ಯಾಲೆಟ್ ಯೂನಿಟ್ ಬಳಸಲಾಗುತ್ತದೆ.
ಹೆಚ್ಚು ಮಹಿಳಾ ಅಭ್ಯರ್ಥಿಗಳು
ರಾಜಾರಾಜೇಶ್ವರಿನಗರ-6
ಜಯನಗರ-6
ಕೆಜಿಎಫ್-6
ನಿಪ್ಪಾಣಿ-5
ಹರಪನಹಳ್ಳಿ-5
ಮಾಲೂರು-5
ಚಿಕ್ಕಪೇಟೆ-5
ಬೆಳಗಾವಿ ಗ್ರಾಮಾಂತರ-4
ಬಸವನಬಾಗೇವಾಡಿ-4
ನಾಗಠಾಣ-4
ಗಾಂಧಿನಗರ-4
ಮಹಾಲಕ್ಷ್ಮೀಲೇಔಟ್-4
ಹೆಬ್ಬಾಳ-4
ವರುಣಾ-4
ಅತಿ ಹೆಚ್ಚು ಅಭ್ಯರ್ಥಿಗಳು
ಬಳ್ಳಾರಿ ನಗರ-24
ಆನೇಕಲ್-23
ಹೊಸಕೋಟೆ-23
ಚಿತ್ರದುರ್ಗ-21
ಯಲಹಂಕ-20
ಗಂಗಾವತಿ-19
ರಾಯಚೂರು-18
ಗೌರಿಬಿದನೂರು-18
ಕೋಲಾರ-18
ಹನೂರು-18
ರಾಜಾಜಿನಗರ-18
ಕೃಷ್ಣರಾಜ-17
ನರಸಿಂಹರಾಜ-17
ಶ್ರೀರಂಗಪಟ್ಟಣ-17
ಹುಬ್ಬಳ್ಳಿ ಧಾರವಾಡ -ಸೆಂಟ್ರಲ್-16
ಚಿಕ್ಕಮಗಳೂರು-16
ಹೆಚ್ಚು ಪಕ್ಷೇತರರು
ಹೊಸಕೋಟೆ-15
ಬಳ್ಳಾರಿ ನಗರ-12
ಶ್ರೀರಂಗಪಟ್ಟಣ-12
ಚಿತ್ರದುರ್ಗ-11
ಗೌರಿಬಿದನೂರು-10
ಕೋಲಾರ-10
ಯಲಹಂಕ-10
ಅಂತಿಮ ಕಣದಲ್ಲಿ ಬಂಡಾಯಗಾರರು: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರ ಮನವೊಲಿಕೆಗೂ ಬಗ್ಗದೆ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯ ಅಭ್ಯರ್ಥಿ (ಪಕ್ಷೇತರ) ಗಳಾಗಿ ಕಣದಲ್ಲಿ ಉಳಿದಿರುವ ಬಂಡುಕೋರರು…
ಬಿಜೆಪಿ ಬಂಡಾಯ
ಅಫಜಲಪುರ: ನಿತೀನ್ ಗುತ್ತೇದಾರ
ಕುಂದಗೋಳ: ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ
ರಾಣಿಬೆನ್ನೂರು: ಸಂತೋಷಕುಮಾರ ಪಾಟೀಲ
ಬೈಲಹೊಂಗಲ- ಮಾಜಿ ಶಾಸಕ ವಿಶ್ವನಾಥ ಪಾಟೀಲ
ಚನ್ನಗಿರಿ: ಮಾಡಾಳು ಮಲ್ಲಿಕಾರ್ಜುನ್
ಕಾರವಾರ: ಮಾಜಿ ಶಾಸಕ ಗಂಗಾಧರ ಭಟ್
ಗಾಂಧಿನಗರ- ಕೃಷ್ಣಯ್ಯ ಶೆಟ್ಟಿ
ಮಾಲೂರು-ಹೂಡಿ ವಿಜಯಕುಮಾರ್
ತುಮಕೂರು-ಸೊಗಡು ಶಿವಣ್ಣ,
ಪುತ್ತೂರು- ಅರುಣ್‌ಕುಮಾರ್ ಪುತ್ತಿಲ
ಕೊರಟಗೆರೆ- ಮುನಿಯಪ್ಪ
ಹೊಸದುರ್ಗ: ಗೂಳಿಹಟ್ಟಿ ಶೇಖರ
ಹೊಳಲ್ಕೆರೆ: ಡಾ|ಜಯಸಿಂಹ
ಬಾಗಲಕೋಟೆ: ಮಲ್ಲಿಕಾರ್ಜುನ ಚರಂತಿಮಠ
ನಾಗಮಂಗಲ- ಫೈಟರ್ ರವಿ
ಕೊಳ್ಳೇಗಾಲ- ಕಿನಕಹಳ್ಳಿ ರಾಚಯ್ಯ
ಕಾಂಗ್ರೆಸ್ ಬಂಡಾಯ
ಶ್ರೀರಂಗಪಟ್ಟಣ- ಪಾಲಹಳ್ಳಿ ಚಂದ್ರಶೇಖರ್
ಮಾಯಕೊಂಡ; ಡಾ. ಸವಿತಾಬಾಯಿ ಮಲ್ಲೇಶ ನಾಯ್ಕ
ತೇರದಾಳ-ಡಾ.ಪದ್ಮಜಿತ್ ನಾಡಗೌಡ ಪಾಟೀಲ
ಕುಣಿಗಲ್-ರಾಮಸ್ವಾಮಿಗೌಡ
ಶಿಡ್ಲಘಟ್ಟ-ಪುಟ್ಟುಆಂಜಿನಪ್ಪ
ಅರಭಾವಿ- ಭೀಮಪ್ಪ ಗಡಾದ
ರಾಯಬಾಗ- ಶಂಭು ಕೃಷ್ಣಾ ಕಲ್ಲೋಳಿಕರ
ಬೀದರ ದಕ್ಷಿಣ- ಚಂದ್ರಾ ಸಿಂಗ್
ಶಿರಹಟ್ಟಿ: ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ
ಜಗಳೂರು: ಮಾಜಿ ಶಾಸಕ ಎಚ್.ಪಿ.ರಾಜೇಶ
ಶಿವಮೊಗ್ಗ ಗ್ರಾಮಾಂತರ: ಭೀಮಪ್ಪ
ಶಿಕಾರಿಪುರ: ನಾಗರಾಜ ಗೌಡ
ಚಿತ್ರದುರ್ಗ: ಸೌಭಾಗ್ಯ ಬಸವರಾಜನ್
ಮುಧೋಳ: ಸತೀಶ ಬಂಡಿವಡ್ಡರ
ಜಮಖಂಡಿ: ಸುಶೀಲಕುಮಾರ ಬೆಳಗಲಿ
ತರೀಕೆರೆ: ಎಚ್.ಎಂ.ಗೋಪಿಕೃಷ್ಣ
ಹರಪನಹಳ್ಳಿ: ಎಂ.ಪಿ.ಲತಾ
ಅರಕಲಗೂಡು-ಎಂ.ಟಿ.ಕೃಷ್ಣೇಗೌಡ
ಜೆಡಿಎಸ್
ಯಾದಗಿರಿ: ಹನುಮೇಗೌಡ ಬೀರನಕಲ್
ಮಂಡ್ಯ- ಕೆ.ಎಸ್.ವಿಜಯ್ ಆನಂದ
ಶ್ರೀರಂಗಪಟ್ಟಣ- ತಗ್ಗಹಳ್ಳಿ ವೆಂಕಟೇಶ್
ತುಮಕೂರು-ನರಸೇಗೌಡ