NEWSನಮ್ಮರಾಜ್ಯಲೇಖನಗಳು

ನಾಳೆ ಮಂಡಿಸುವ ರಾಜ್ಯ ಬಜೆಟ್‌ನಲ್ಲಿ ಸಾರಿಗೆ ನಿಗಮಗಳಿಗೆ ತಲಾ 2-3 ಸಾವಿರ ಕೋಟಿ ರೂ. ಮೀಸಲಿಡಿ : ಸಾರಿಗೆ ಅಧಿಕಾರಿಗಳು, ನೌಕರರ ಮನವಿ

ಸಾಂದರ್ಭಿಕ ಚಿತ್ರ.
ವಿಜಯಪಥ ಸಮಗ್ರ ಸುದ್ದಿ

ರ್ನಾಟಕ ರಾಜ್ಯದ ವಿತ್ತ ಖಾತೆಯನ್ನು ತಮ್ಮಬಳಿಯೇ ಉಳಿಸಿಕೊಂಡಿರುವ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನಾಳೆ (ಫೆ.17)ರಂದು ರಾಜ್ಯ ಬಜೆಟ್‌ (State  Budget) ಮಂಡಿಸಲಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಈ ಬಜೆಟ್‌ ಗಾತ್ರ 3 ಲಕ್ಷ ಕೋಟಿ ರೂ.ಗಳದ್ದಾಗಿರಲಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಮಂಡಿಸಲಿರುವ ಬಜೆಟ್‌ನಲ್ಲಿ ರಾಜ್ಯ ಸಾರಿಗೆಯ ನಾಲ್ಕೂ ನಿಗಮಗಳಿಗೂ ತಲಾ 2-3 ಸಾವಿರ ಕೋಟಿ ರೂ.ಗಳಂತೆ ಕನಿಷ್ಠ 8 ರಿಂದ 12 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಬೇಕು ಎಂದು ನಿಗಮಗಳ ಅಧಿಕಾರಿಗಳು ಮತ್ತು ನೌಕರರು ಮನವಿ ಮಾಡಿದ್ದಾರೆ.

ಕಾರಣ ಈ ನಾಲ್ಕೂ ಸಂಸ್ಥೆಗಳು ಜನರ ಸೇವೆಗಾಗಿ ಇರುವುದು ಹೀಗಾಗಿ ಇವುಗಳಲ್ಲಿ ಆದಾಯ ನಿರೀಕ್ಷೆ ಮಾಡುವ ಬದಲಿಗೆ ಸೇವೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಅಂದು ಮೈಸೂರು ಮಹಾರಾಜರು ಆರಂಭಿಸಿದ ಸೇವೆ ಇಂದು ಏಷ್ಯಾ ಖಂಡದಲ್ಲೇ ಹೆಮ್ಮೆರವಾಗಿ ಬೆಳೆದು ನಿಂತಿದೆ ಎಂದು ಹೇಳಿಕೊಳ್ಳುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸೇವಾ ಮನೋಭಾವನೆಯಿಂದ ಆರಂಭವಾಗಿರುವ ಈ ನಿಗಮಗಳ ಮೇಲೆ ಸರ್ಕಾರ ಸರಿಯಾದ ಗಮನ ಹರಿಸುತ್ತಿಲ್ಲ. ಆದರೆ ಹಿರಿಯ ನಾಗರಿಕರು, ಅಂಗವಿಕಲರು, ವಿದ್ಯಾರ್ಥಿಗಳು, ಕಟ್ಟಡ ಕೂಲಿ ಕಾರ್ಮಿಕರು ಹೀಗೆ ಹಲವಾರು ವಿಧದಲ್ಲಿ ರಿಯಾಯಿತಿ ಮತ್ತು ಉಚಿತ ಸೇವೆಯನ್ನು ನೀಡಲಾಗುತ್ತಿದೆ.

ಈ ಉಚಿತ ಸೇವೆ ನೀಡುವುದನ್ನು ಸರ್ಕಾರವೇ ಘೋಷಣೆ ಮಾಡುತ್ತಿದೆ. ಇದು ನಾಡಿನ ಜನತೆಗೆ ಸಂತಸದ ವಿಷಯ. ಆದರೆ, ಈ ಉಚಿತ ಮತ್ತು ರಿಯಾಯಿತಿ ಘೋಷಣೆ ಮಾಡಿರುವುದಕ್ಕೆ ತಕ್ಕಂತೆ ನಿಗಮಗಳಲ್ಲಿ ಹೊಸ ಬಸ್‌ ಖರೀದಿಸಲು, ಹಳೇ ಬಸ್‌ಗಳ ರಿಪೇರಿ ಮಾಡಲು ಬಿಡಿಭಾಗಗಳನ್ನು ಕೊಳ್ಳುವುದಕ್ಕೆ ಹಾಗೂ ಪ್ರಮುಖವಾಗಿ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಾಹಿಸುತ್ತಿರುವ ಅಧಿಕಾರಿಗಳು ಮತ್ತು ನೌಕರರಿಗೆ ವೇತನ ನೀಡುವುದಕ್ಕೆ ಕಷ್ಟ ಸಾಧ್ಯವಾಗುತ್ತಿದೆ.

ಹೀಗಾಗಿ ಕಳೆದ 1-2 ದಶಕದಿಂದಲೂ ಸಾರಿಗೆ ನಿಗಮಗಳು ಅಧಿಕಾರಿಗಳು ಮತ್ತು ನೌಕರರಿಗೆ ವೇತನ ಕೊಡಲಾರದಷ್ಟು ಕೆಟ್ಟ ಸ್ಥಿತಿಯನ್ನು ಎದುರಿಸುತ್ತಿವೆ. ಈ ಎಲ್ಲವನ್ನು ಗಮನಿಸಿರುವ ತಾವು ನಾಳೆ ಮಂಡಿಸುತ್ತಿರುವ ರಾಜ್ಯ ಬಜೆಟ್‌ನಲ್ಲಿ ಸಾರಿಗೆ ನಿಗಮಗಳಿಗೆ 8ರಿಂದ 12 ಕೋಟಿ ರೂ.ಗಳನ್ನು ಮೀಸಲಿಡುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿಹಾಡಬೇಕು ಎಂದು ತಮ್ಮಲ್ಲಿ ಬೇಡಿಕೊಳ್ಳುತ್ತಿದ್ದೇವೆ.

ಇನ್ನು ವೇತನ ಸಂಬಂಧ ನೌಕರರು ಹಲವಾರು ವರ್ಷಗಳಿಂದ ಅನುಭವಿಸುಕೊಂಡು ಬರುತ್ತಿರುವ ತಾರತಮ್ಯತೆಯನ್ನು ಹೋಗಲಾಡಿಸಲು ಬಜೆಟ್‌ನಲ್ಲೇ ವೇತನ ಹೆಚ್ಚಳ ಸಂಬಂಧ ನೀವೆ ಗೃಹ ಸಚಿವರಾಗಿದ್ದಾಗ ನೀಡಿದ ಭರವಸೆಯಂತೆ ವೇತನ ಆಯೋಗ ಮಾದರಿಯಲ್ಲಿ ವೇತನ ನೀಡುತ್ತೇವೆ ಎಂದು ಘೋಷಣೆ ಮಾಡುವಂತೆ ಸಮಸ್ತ ನೌಕರರು ಮತ್ತು ನಿಗಮದ ಅಧಿಕಾರಿಗಳು ಮನವಿ ಮಾಡುತ್ತಿದ್ದೇವೆ.

Leave a Reply

error: Content is protected !!
LATEST
ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ : ಸಚಿವ ಎಚ್.ಕೆ. ಪಾಟೀಲ ಹಸಿರು ಪಟಾಕಿ ಬಳಸಿ ದೀಪಾವಳಿ ಹಬ್ಬ ಆಚರಿಸಿ- ನಿಷೇಧಿತ ಪಟಾಕಿ ಮಾರಾಟ, ಬಳಕೆ ನಿಷೇಧ: ಜಿಲ್ಲಾಧಿಕಾರಿ ಡಾ.ಶಿವಶಂಕರ ಕೆಂಗೇರಿ ಕೆರೆಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ