NEWSನಮ್ಮರಾಜ್ಯ

232ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ

ಶೂನ್ಯದಲ್ಲಿದ್ದ ವಿಜಯಪುರ ಜಿಲ್ಲೆಯಲ್ಲಿ ಒಂದೇದಿನ ಆರು ಮಂದಿಯಲ್ಲಿ ಸೋಂಕು ದೃಢ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಭಾನುವಾರ (ಏ.12) 16 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ, ಅದರಲ್ಲಿ , ಶೂನ್ಯದಲ್ಲಿದ್ದ ವಿಜಯಪುರದಲ್ಲೇ 6, ಮೈಸೂರಿನಲ್ಲಿ  ಒಂದು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 232 ಕ್ಕೆ ಏರಿದೆ.

ನ್ಯೂಡೆಲ್ಲಿಯ ನಿಜಾಮುದ್ದೀನ್ ಧರ್ಮಸಭೆಗೆ ಹೋಗಿ ಬಂದಿದ್ದ ತಬ್ಲಿಘಿಗಳು ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಸೋಂಕು ಹಬ್ಬಿಸಿದ್ದರು. 1,300 ಮಂದಿ ಪೈಕಿ ನಿನ್ನೆಯವರೆಗೂ 55 ಮಂದಿಗೆ ಸೋಂಕು ತಗುಲಿತ್ತು. ಆ ಸಂಖ್ಯೆ ಈಗ  ಹೆಚ್ಚಾಗಿದೆ.

ಇಂದು ಬೆಳಕಿಗೆ ಬಂದ 16 ಸೋಂಕಿತರ ಪೈಕಿ 6 ಮಂದಿಗೆ ಜಮಾತ್ ನಂಟಿದೆ. ಕೊರೊನಾಗೆ ಬಲಿಯಾದ ಕಲಬುರಗಿಯ ವೃದ್ಧ(ರೋಗಿ ನಂಬರ್ 177)ನ ಕುಟುಂಬದಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದೆ.

ಇದನ್ನೂ ಓದಿರಿ ಇಂದು ಮೈಸೂರಿನಲ್ಲಿ ಮತ್ತೆ 5 ದೃಢ, 214ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ

ಮೃತ ವೃದ್ಧನ ಸೊಸೆಗೆ ಕೊರೊನಾ ಪಾಸಿಟಿವ್ ಬಂದಿದೆ. ಅಲ್ಲದೇ, ಬಹಮನಿ ಆಸ್ಪತ್ರೆಯಲ್ಲಿದ್ದಾಗ ವೃದ್ಧನನ್ನು ನೋಡಿಕೊಂಡಿದ್ದ ಆಯಾಗೂ ಸೋಂಕು ವ್ಯಾಪಿಸಿದೆ. ಬೆಳಗಾವಿಯ ನಾಲ್ವರಿಗೂ ಕೂಡ ಜಮಾತ್ ನಂಟು ಇರುವುದು ಖಚಿತಪಟ್ಟಿದೆ.

ಇಂದಿನ ಪ್ರಕರಣ

* ರೋಗಿ ನಂ.220 – ಕಲಬುರಗಿಯ 24 ವರ್ಷದ ಮಹಿಳೆ – ಕೇಸ್ ನಂ.177ರ ಸೊಸೆ
* ರೋಗಿ ನಂ.222 – ಕಲಬುರಗಿಯ 38 ವರ್ಷದ ಮಹಿಳೆ – ಕೇಸ್ ನಂ.177ರ ಸಂಪರ್ಕ – ಆಸ್ಪತ್ರೆ ಆಯಾ

* ರೋಗಿ ನಂ.223 – ಬೆಳಗಾವಿಯ ರಾಯಭಾಗದ 19 ವರ್ಷದ ಯುವಕ – ಕೇಸ್ ನಂ.150ರ ಸಂಪರ್ಕ

* ರೋಗಿ ನಂ.224 – ಬೆಳಗಾವಿಯ ಹಿರೇಬಾಗೇವಾಡಿಯ 38 ವರ್ಷದ ಪುರುಷ – ಕೇಸ್ ನಂ.128ರ ಸಂಪರ್ಕ

* ರೋಗಿ ನಂ.225 – ಬೆಳಗಾವಿಯ ರಾಯಭಾಗದ 55 ವರ್ಷದ ಪುರುಷ – ಕೇಸ್ ನಂ.150ರ ಸಂಪರ್ಕ

* ರೋಗಿ ನಂ.226 – ಬೆಳಗಾವಿಯ ರಾಯಭಾಗದ 25 ವರ್ಷದ ಯುವಕ – ಕೇಸ್ ನಂ.150ರ ಸಂಪರ್ಕ

Leave a Reply

error: Content is protected !!
LATEST
KSRTC: ಏಪ್ರಿಲ್‌-ಜೂನ್‌ ಪೀಕ್‌ ಸೀಸನ್‌ ಎಂದು ಚಾಲನಾ ಸಿಬ್ಬಂದಿಗಳಿಗೆ ರಜೆ ಕೊಡದೆ ಹಿಂಸಿಸುತ್ತಿರುವ ಅಧಿಕಾರಿಗಳು..! ಬಿಜೆಪಿ ರಾಜಕೀಯ ಲಾಭಕ್ಕೆ ನೇಹಾ ಪ್ರಕರಣ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ: ಜಗದೀಶ್ ವಿ. ಸದಂ IVRS, ಬಲ್ಕ್ SMS ಮೂಲಕ ಮತದಾರರಿಗೆ ಮೊಬೈಲ್‌ ಸಂದೇಶ: ತುಷಾರ್ ಗಿರಿನಾಥ್ KSRTC: ವೇತನ ಸಮಸ್ಯೆ ಪರಿಹರಿಸದೆ ಅಸಡ್ಡೆ ತೋರಲು ಇವರು ಕಾರಣಗಳು....!? ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು ಜನರ ವಂಚಿಸುವ ಮಂತ್ರ ದಂಡಗಳು : ಕುರುಬೂರ್‌ ಶಾಂತಕುಮಾರ್‌ 'ನಮ್ಮ ನಡೆ ಮತಗಟ್ಟೆಯ ಕಡೆ' ಜಾಗೃತಿ ಜಾಥಾಗೆ ಮನೋಜ್ ಕುಮಾರ್ ಮೀನಾ, ತುಷಾರ್ ಗಿರಿನಾಥ್ ಚಾಲನೆ ಕೊಡಗು: ಹುಲಿದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ ತಾಳವಾಡಿ: ಜಮೀನಿಗೆ ನುಗ್ಗುತ್ತಿರುವ ಕಾಡಾನೆ ಹಿಮ್ಮೆಟ್ಟಿಸಿದ ರೈತರು ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ : ಬೆಚ್ಚಿಬಿದ್ದ ಜನತೆ ಇಂದು ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ: 102 ಕ್ಷೇತ್ರಗಳಲ್ಲಿ ಆರಂಭ