ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ವಾರ ಕಳೆದಿದ್ದು, ಶನಿವಾರ ಸಂಪುಟದ 24 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇಂದು (ಶನಿವಾರ) ಬೆಳಗ್ಗೆ 11:45ರ ವೇಳೆಗೆ ರಾಜಭವನದ ಗಾಜಿನ ಮನೆಯಲ್ಲಿ 24 ಸಚಿವರಿಗೆ ರಾಜ್ಯದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಘೋಷಿಸಿದ್ದಾರೆ.
ನೂತನ ಸಚಿವರು: ಶಿವಾನಂದ ಪಾಟೀಲ್ – ಲಿಂಗಾಯತ (ಬಸವನಬಾಗೇವಾಡಿ), ಎನ್‌ಎಸ್ ಮಲ್ಲಿಕಾರ್ಜುನ್- ಲಿಂಗಾಯತ (ದಾವಣಗೆರೆ ಉತ್ತರ), ಹೆಚ್.ಕೆ.ಪಾಟೀಲ್ – ರೆಡ್ಡಿ ಲಿಂಗಾಯತ (ಗದಗ), ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ – ಒಕ್ಕಲಿಗ (ಬ್ಯಾಟರಾಯನಪುರ), ಚಲುವರಾಯ ಸ್ವಾಮಿ – ಒಕ್ಕಲಿಗ (ನಾಗಮಂಗಲ), ಕೆ. ವೆಂಕಟೇಶ್ – ಒಕ್ಕಲಿಗ (ಪಿರಿಯಾಪಟ್ಟಣ), ಎಚ್‌ಸಿ ಮಹದೇವಪ್ಪ – ಎಸ್‌ಸಿ – ಬಲಗೈ (ಟಿ.ನರಸೀಪುರ).
ಈಶ್ವರ್ ಖಂಡ್ರೆ – ಲಿಂಗಾಯತ (ಭಾಲ್ಕಿ), ಕೆ.ಎನ್ ರಾಜಣ್ಣ- ಎಸ್‌ಟಿ (ಮಧುಗಿರಿ), ಶರಣ ಬಸಪ್ಪ ದರ್ಶನಾಪೂರ್, ಆರ್. ಬಿ ತಿಮ್ಮಾಪೂರ್, ಶಿವರಾಜ್ ತಂಗಡಗಿ, ಶರಣ ಪ್ರಕಾಶ್ ಪಾಟೀಲ್- ಲಿಂಗಾಯತ (ಸೇಡಂ), ಮಂಕಾಳ ವೈದ್ಯ – ಮೊಗವೀರ ( ಭಟ್ಕಳ), ಲಕ್ಷ್ಮಿ ಹೆಬ್ಬಾಳ್ಕರ್ – ಲಿಂಗಾಯತ (ಬೆಳಗಾವಿ ಗ್ರಾ.), ರಹೀಂ ಖಾನ್ – ಮುಸ್ಲಿಂ (ಬೀದರ್ ಉತ್ತರ), ಎಂ.ಸಿ ಸುಧಾಕರ್ – ಒಕ್ಕಲಿಗ (ಚಿಂತಾಮಣಿ).
ಡಿ ಸುಧಾಕರ್, ಸಂತೋಷ್ ಲಾಡ್ – ಮರಾಠ (ಕಲಘಟಗಿ), ಬೋಸರಾಜು – ಕ್ಷತ್ರೀಯ (ಮಾಜಿ ಎಂಎಲ್‌ಸಿ), ಬೈರತಿ ಸುರೇಶ್ – ಕುರುಬ (ಹೆಬ್ಬಾಳ), ಮಧು ಬಂಗಾರಪ್ಪ – ಈಡಿಗ (ಸೊರಬ) ಹಾಗೂ ಬಿ. ನಾಗೇಂದ್ರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸಂಪುಟದ ಎಲ್ಲ 34 ಸ್ಥಾನಗಳು ಭರ್ತಿಯಾಗಿದ್ದು, ಸಂಪುಟದಲ್ಲಿ 22 ಜಿಲ್ಲೆಗಳಿಗೆ ಮಂತ್ರಿ ಭಾಗ್ಯ ದೊರಕಿದೆ. 9 ಜಿಲ್ಲೆಗಳಿಗೆ ಸಂಪುಟದಲ್ಲಿ ಯಾವುದೇ ಸ್ಥಾನ ನೀಡಲಾಗಿಲ್ಲ. ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕೋಲಾರ, ವಿಜಯನಗರ, ಹಾವೇರಿ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ 22 ಜಿಲ್ಲೆಗಳಿಗೆ ಮಂತ್ರಿ ಸ್ಥಾನಗಳು ದೊರೆತಿವೆ.
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂಪುಟ ಸಹೋದ್ಯೋಗಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು. ಒಂದು ಸರ್ಕಾರವಾಗಿ ನಾವೆಲ್ಲರೂ ಜನರ ಸಮಸ್ಯೆಗಳಿಗೆ ಅಂತಃಕರಣದಿಂದ ಸ್ಪಂದಿಸುವ ಮೂಲಕ ನಮ್ಮ ಮೇಲಿನ ನಂಬಿಕೆ ಮತ್ತು ನಿರೀಕ್ಷೆಯನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡೋಣ.
ಇನ್ನು ನಿಮ್ಮ ಎಲ್ಲ ಜನಪರ, ಸಂವಿಧಾನಬದ್ಧ ಕಾರ್ಯಗಳಿಗೆ ನನ್ನ ಪೂರ್ಣ ಸಹಕಾರ ಇದೆ. ಶುಭವಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಸಚಿವರಿಗೆ ಶುಭಕೋರಿದ್ದಾರೆ.