ವಿಜಯಪುರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿ ಹುಬ್ಬಳ್ಳಿಯ ಉಪ ಮುಖ್ಯ ಗಣಕ ವ್ಯವಸ್ಥಾಪಕ ನಾರಾಯಪ್ಪ ಕುರಬರ ಎಂಬುವರು ಒಬ್ಬ ಅಧಿಕಾರಿಯಾಗಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಅಮಾನತು ಮಾಡಬೇಕು ಎಂದು ಸಾರಿಗೆ ನೌಕರರು ಒತ್ತಾಯಿಸಿದ್ದಾರೆ.
Ksrtc Officers Welfare Association (KOWA) ಎಂಬ ಗ್ರೂಪ್‌ನಲ್ಲಿ ಪರೋಕ್ಷವಾಗಿ ನಾರಾಯಣಪ್ಪ ಕುರಬರ ಅವರು ರಾಜಕೀಯ ಪ್ರೇರಿತ ಚುನಾವಣಾ ಪ್ರಚಾರ ಮಾಡಿರುವುದು ಹಾಗೂ ವಿಧಾನ ಸಭಾ ಸಾರ್ವತ್ರಿಕ ಚುನಾವಣಾ 2023 ರ ಸಂಬಂಧ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವ ಕುರಿತು ಸೂಕ್ತ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ರಾಜ್ಯ ಚುನಾವಣಾ ಆಯುಕ್ತರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಈ ಬಗ್ಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಈಗ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಪತ್ರಿಕೆ, ಮಾಧ್ಯಮ, ಸಾಮಾಜಿಕ ಜಾಲತಾಣ ಹಾಗೂ ಇನ್ನಿತರ ಮೂಲಗಳಿಂದ ಯಾವುದೇ ರಾಜಕೀಯ ಪ್ರಚಾರ ಮಾಡಬೇಕಾದಲ್ಲಿ ಮತ್ತು ರಾಜಕೀಯ ಪ್ರೇರಿತ ಹೇಳಿಕೆ ನೀಡಬೇಕಾದಲ್ಲಿ ವಿಧಾಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ನೇಮಕವಾಗಿರುವ District Media Certification and Monitiring Committe ಅವರಿಂದ ಪೂರ್ವಾನುಮತಿ ಪಡೆಯಬೇಕು.
ಆದರೆ, KOWA ಎಂಬ ಗ್ರೂಪ್‌ನಲ್ಲಿ 15/04/2023 ಮಧ್ಯಾಹ್ನ 03:23 ನಿಮಿಷಕ್ಕೆ ಮೊ.ನಂ 9481567333 ಸಂಖ್ಯೆಯಿಂದ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಶೇರ್ ಮಾಡಲಾಗಿದೆ.
ಶೇರ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪಟ್ಟಿಯನ್ನು +919448268853 ನಾರಾಯಪ್ಪ ಕುರಬರ ಅವರು ಪರೋಕ್ಷವಾಗಿ ‘ಈ ಸಲಾ ಕಪ್ಪು ನಿಮ್ಮದೆ’ ಎಂದು ಪಕ್ಷದ ಅಭ್ಯರ್ಥಿಯ ಪರವಾಗಿ ಕಾಮೆಂಟ್ ಮಾಡಿದ್ದಾರೆ. ಈ ಮೂಲಕ ಇವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ.
ಇವರು ಒಂದು ಸಂಸ್ಥೆಯ ಜವಾಬ್ದಾರಿಯುತ ಉನ್ನತ ಹುದ್ದೆಯಲ್ಲಿ ಜತೆಗೆ ವೃತ್ತಿಯಲ್ಲಿ ಮುಖ್ಯ ಕಾನೂನು ಅಧಿಕಾರಿಗಳಾಗಿದ್ದು ಸಂಸ್ಥೆಯ ನೌಕರನಲ್ಲದ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಅಲ್ಲದೆ ಭಾರತ ಚುನಾವಣಾ ಆಯೋಗದ ಪತ್ರಕಾ ಪ್ರಕಟಣೆಯಲ್ಲಿ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣಿ-2023 ರ ವೇಳಾ ಪಟ್ಟಿಯನ್ನು ನೀಡಿರುವ ಸುತ್ತೋಲೆಗಳನ್ನು ಧಿಕ್ಕರಿಸಿ ಪರೋಕ್ಷವಾಗಿ ಅಭ್ಯರ್ಥಿಯ ಪರ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಿಂದೆಯೂ ಸಹ ಇವರು ವಿಜಯಪುರ ವಿಭಾಗದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾಗ ಇವರ ವಿರುದ್ಧ ಸಾಕಷ್ಟು ದೂರುಗಳಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಜಾತಿಯತೆ ಇನ್ನುಳಿದವುಗಳ ಬಗ್ಗೆ ಇಲಾಖೆಯಲ್ಲಿ 03 ಉನ್ನತ ಮಟ್ಟದ ಅಧಿಕಾರಿಗಳಿರುವ ಒಂದು ತಂಡವನ್ನು ರಚನೆ ಮಾಡಲಾಗಿದೆ. ಈ ತಂಡದವರು ಸಾಕಷ್ಟು ತನಿಖೆ ಮಾಡಿದ್ದಾರೆ, ಇನ್ನೂ ಮಾಡುತ್ತಲೇ ಇದ್ದಾರೆ.
ಹೀಗಾಗಿ ತಾವು ಈ ವಿಷಯದಲ್ಲಿ ಸೂಕ್ತ ತನಿಖೆ ಕೈಗೊಂಡು “ನಾರಾಯಣಪ್ಪ ಕುರಬರ ಅವರನ್ನು ವಿಚಾರಣಾ ಪೂರ್ವ ಅಮಾನತು ಮಾಡಬೇಕು ಎಂದು ಎಂ.ಎನ್. ಇಳ್ಕಲ್, ಬಶೀರ್ ಅಹಮದ್ ಎಂ. ಮುರಳ, ದುಂಡಪ್ಪ ಎಂ. ಬೇನೂರ್, ಡಿ.ಎನ್. ಚಪ್ಪರ್‌ಬಂದ್ ಸೇರಿದಂತೆ 10 ಹೆಚ್ಚು ಮಂದಿ ಒತ್ತಾಯಿಸಿದ್ದಾರೆ.