ಬೆಂಗಳೂರು: ಕನ್ನಡ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿರುವ ನಟ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಸಿನಿಮಾಗೆ ಒಂದು ಹಾಗೂ ನಟ ರಿಶಬ್ ಶೆಟ್ಟಿ ಅವರ ಕಾಂತಾರಾ ಸಿನಿಮಾ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿವೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಶುಕ್ರವಾರ 70ನೇ ರಾಷ್ಟ್ರೀಯ ಪಶಸ್ತಿ 2022ರ ಪಟ್ಟಿಯನ್ನು ದೆಹಲಿಯಲ್ಲಿ (70th National Award) ಪ್ರಕಟಿಸಿದ್ದು, ಅದರಲ್ಲಿ ರಿಷಭ್ ಶೆಟ್ಟಿ ಅಭಿನಯದ, ಹೊಂಬಾಳೆ ಸಂಸ್ಥೆ ನಿರ್ಮಾಣದ ಅತ್ಯುತ್ತಮ ಮನರಂಜನಾ ಚಿತ್ರ ಎಂದು ‘ಕಾಂತಾರ’ಗೆ ಮತ್ತು ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ರಿಷಬ್ ಶೆಟ್ಟಿಗೆ ಸಿಕ್ಕಿದೆ.
ಅಂದಹಾಗೆ, 2020ನೇ ವರ್ಷದಲ್ಲಿ ಸೆನ್ಸಾರ್ ಆದ ಸಿನಿಮಾಗಳಿಗೆ ಇಂದು (ಆ.16) ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಆಗಿದ್ದು, ಈ ಮೂಲಕ ಕನ್ನಡಿಗರು, ಕನ್ನಡ ಚಿತ್ರರಂಗ, ಕಲಾವಿದರು ಹೆಮ್ಮೆ ಪಡುವಂತೆ ಈ ಸಿನಿಮಾಗಳು ಮಾಡಿವೆ. ಪ್ರಶಾಂತ್ ನೀಲ್ ನಿರ್ದೇಶನದ ನಟ ‘ಯಶ್’ ಅಭಿನಯದ ‘ಕೆಜಿಎಫ್ ಸರಣಿ’ ಸಿನಿಮಾಗಳ ಪೈಕಿ ‘ಕೆಜಿಎಫ್ 2 ‘ಗೆ ‘ಅತ್ಯುತ್ತಮ ಸಾಹಸ ಸಿನಿಮಾ’ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಆಗಿದೆ.
ಇನ್ನೂ ‘ಮಧ್ಯಂತರ’ ಸಿನಿಮಾಗಾಗಿ ಬೆಸ್ಟ್ ಡೆಬ್ಯೂ ನಿರ್ದೇಶಕ ಬಸ್ತಿ ದಿನೇಶ್ ಶೆಣೈಗೆ ಸಿಕ್ಕಿದೆ. ಅತ್ಯುತ್ತಮ ಸಂಕಲನಕ್ಕಾಗಿ ಸುರೇಶ್ ಅರಸ್‌ಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ಒಟ್ಟು ಕನ್ನಡಕ್ಕೆ 6 ಪ್ರಶಸ್ತಿಗಳು ಸಿಕ್ಕಿವೆ.