NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಅಧಿಕಾರಿಗಳು/ನೌಕರರ ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿ ಸಂಬಂಧ ಕುಟುಂಬ ಸದಸ್ಯರಿಂದ ಅಹೋರಾತ್ರಿ ಧರಣಿ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ
  • ಫ್ರೀಡಂ ಪಾರ್ಕ್‌ನಲ್ಲಿ ಮಾರ್ಚ್‌ ಮೊದಲವಾರದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಸಿದ್ಧತೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಎಲ್ಲ ನಾಲ್ಕೂ ನಿಗಮಗಳ ಅಧಿಕಾರಿಗಳು/ನೌಕರರ ವೇತನ ಹೆಚ್ಚಳ, ಹಿಂಬಾಕಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2026ರ ಮಾರ್ಚ್‌ ಮೊದಲ ವಾರದಿಂದ ಫ್ರೀಡಂಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರು ನಗರದ ಫ್ರೀಡಂಪಾರ್ಕ್‌ನಲ್ಲಿ ಈ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಅಧಿಕಾರಿಗಳು/ನೌಕರರ ಕುಟುಂಬ ಸದಸ್ಯರಿಂದ ಹಮ್ಮಿಕೊಳ್ಳಲಾಗುತ್ತಿದ್ದು, ಸಮಸ್ತ ಸಾರಿಗೆ ಅಧಿಕಾರಿಗಳು/ನೌಕರರ ಕುಟುಂಬದಿಂದ ತಲಾ ಒಬ್ಬದಂತೆ ಆಗಮಿಸಿ ಬೇಡಿಕೆ ಈಡೇರಿಸಿಕೊಳ್ಳಲು ಸಿದ್ಧರಾಗಬೇಕು ಎಂದು ಕರೆ ನೀಡಲಾಗಿದೆ.

ಈ ಸಂಬಂಧ ಈಗಾಗಲೇ ಸಾರಿಗೆ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ನಂಜುಂಡೇಗೌಡ ಅವರು ಸೇರಿದಂತೆ ಸಾರಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಂಘಟನೆಗಳ ಪದಾಧಿಕಾರಿಗಳು ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಮಸ್ತ ಸಾರಿಗೆ ಅಧಿಕಾರಿಗಳು/ನೌಕರರ ಕುಟುಂಬ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಈ ಸಂಬಂಧ ನಿಮಗೆ ಮಾರ್ಚ್‌ 1ರಂದು ಅಧಿಕೃತವಾಗಿ ತಿಳಿಸಲಾಗುವುದು. ಅಲ್ಲದೆ ಸರ್ಕಾರ ಸಾರಿಗೆ ನೌಕರರ ವೇತನ ವಿಷಯದಲ್ಲಿ ತೋರುತ್ತಿರುವ ತಾರತಮ್ಯ ಧೋರಣೆಯನ್ನು ಖಂಡಿಸಿ ಕಾನೂನು ಬದ್ಧವಾಗಿ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಪಡೆಯಲು ಹೋರಾಟ ಮಾಡದಂತೆ ಎಸ್ಮಾ ಜಾರಿ ಮಾಡಿದೆ.

ಹೀಗಾಗಿ ಅಧಿಕಾರಿಗಳು/ನೌಕರರ ಬಿಟ್ಟು ಅವರ ಕುಟುಂಬ ಸದಸ್ಯರು ಅನಿವಾರ್ಯವಾಗಿ ಧರಣಿ ಸತ್ಯಾಗ್ರಹಕ್ಕೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಸರ್ಕಾರ ಮಾರ್ಚ್‌ ಮೊದಲ ವಾರದೊಳಗೆ ಸ್ಪಂದಿಸಿ ನೌಕರರಿಗೆ ಬರಬೇಕಿರುವ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಬಿಡುಗಡೆ ಮಾಡಬೇಕು. ಜತೆಗೆ 2024ರ ಜ.1ರಿಂದ ಆಗಬೇಕಿರುವ ವೇತನ ಹೆಚ್ಚಳ ಮಾಡಿ ಅಧಿಕೃತವಾಗಿ ಘೋಷಣೆಮ ಮಾಡಬೇಕು.

ಒಂದು ವೇಳೆ ಈ ಮಾರ್ಚ್‌ ಮೊದಲ ವಾರದೊಳಗೆ ಈ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳದೆ ಹೋದರೆ ಅಧಿಕಾರಿಗಳು/ನೌಕರರ ಕುಟುಂಬ ಸದಸ್ಯರು ಹಾಗೂ 2020ರ ನಂತರ ನಿವೃತ್ತರಾದ ಎಲ್ಲ ನಿವೃತ್ತ ನೌಕರರು ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಅಧಿಕಾರಿಗಳು/ನೌಕರರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಇನ್ನು ಈ ಸಂಬಂಧ ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ಅಧಿಕಾರಿಗಳು/ನೌಕರರ ಕುಟುಂಬ ಸದಸ್ಯರು ದೂರವಾಣಿ ಸಂಖ್ಯೆ: 080-43022463 ಸಂಪರ್ಕಿಸಲು ಕೋರಲಾಗಿದೆ.

ವಿಜಯಪಥ - vijayapatha.in
Deva
the authorDeva

Leave a Reply

error: Content is protected !!