ರಾಯಚೂರು: ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೆ ಉಕ ಭಾಗದ ಮುಖಂಡರು ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಜತೆಗೆ ರಾಯಚೂರು ಜಿಲ್ಲೆಯ ಜೆಡಿಎಸ್ ಮುಖಂಡರು ನನ್ನನ್ನು ಭೇಟಿಯಾಗಿ ಉತ್ತರ ಕರ್ನಾಟಕದಲ್ಲಿ ಪಕ್ಷದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.
ಭೇಟಿಯಾದ ಉಕ ಮುಖಂಡರು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಕೂಡ ಚರ್ಚಿಸಿದರು. ನಾನು ಸದ್ಯದಲ್ಲೇ ಆ ಭಾಗದಲ್ಲಿ ಪ್ರವಾಸ ಮಾಡಿ ಸ್ಥಳೀಯ ನಾಯಕರೊಡನೆ ಸೇರಿ ಪಕ್ಷವನ್ನು ಸಂಘಟಿಸಲು ಶ್ರಮಿಸುತ್ತೇನೆ ಎಂದು ಈ ವೇಳೆ ಭರವಸೆ ನೀಡಿದ್ದಾಗಿ ಟ್ವೀಟ್ ಮಾಡಿದ್ದಾರೆ.
ಇನ್ನು ಜೆಡಿಸ್ ಪಕ್ಷದ ನಿಷ್ಠಾವಂತ ಸಾಮಾನ್ಯ ಕಾರ್ಯಕರ್ತ ಚಿದಾನಂದ ಕೆ. ಎಂಬವರು ಈ ಬಗ್ಗೆ ಖುಷಿಪಟ್ಟುಇದ್ದು, ಈ ಹಿಂದೆ ನಮ್ಮ ರಾಯಚೂರು ಭಾಗದ ಸಿಂಧನೂರು, ಲಿಂಗಸಗುರು, ಮಾನ್ವಿ ದೇವದುರ್ಗದ ಕಡೆಗಳಲ್ಲಿ ಜೆಡಿಸ್ ಪಕ್ಷದ ಕಟ್ಟಾ ಬೆಂಬಲಿಗರು (ಕಾರ್ಯಕರ್ತರು) ತುಂಬಾ ಇದ್ದಾರೆ ಸರ್.. ನೀವು ಆ ಕಡೆ ಬರೋದೆ ಇಲ್ಲ ನಮ್ಮ ಕುಮಾರಣ್ಣ ಅವರು ನಾರಾಯಣಪುರ ಎಡದಂಡೆ ಕಾಲುವೆ ಉದ್ಘಾಟನಾ ಸಮಾರಂಭದ ಸಮಯದಲ್ಲಿ ನಮ್ಮೂರಿಗೆ ಬಂದಿದ್ದರು ಎಂದು ನೆನಪಿಸಿಕೊಂಡು ಸಂಭ್ರಮಿಸಿದ್ದಾರೆ.
ರಾಯಚೂರು ಜಿಲ್ಲೆಯ ಜೆಡಿಎಸ್ ಮುಖಂಡರು ಭೇಟಿಯಾಗಿ ಉತ್ತರ ಕರ್ನಾಟಕದಲ್ಲಿ ಪಕ್ಷದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಕೂಡ ಚರ್ಚಿಸಲಾಯಿತು, ನಾನು ಸದ್ಯದಲ್ಲೇ ಆ ಭಾಗದಲ್ಲಿ ಪ್ರವಾಸ ಮಾಡಿ ಸ್ಥಳೀಯ ನಾಯಕರೊಡನೆ ಸೇರಿ ಪಕ್ಷವನ್ನು ಸಂಘಟಿಸಲು ಶ್ರಮಿಸುವುದಾಗಿ ಭರವಸೆ ನೀಡಿದ್ದೇನೆ. pic.twitter.com/tK1HF4MZC1
— Prajwal Revanna (@iPrajwalRevanna) September 7, 2020
Super