NEWSನಮ್ಮಜಿಲ್ಲೆ

ವಿಜಯಪುರ: KSRTC ನೌಕರರ ಪತ್ತಿನ ಸಹಕಾರ ಸಂಘ ಚುನಾವಣೆ- ರಾಜಶೇಖರ್ ಕೊಣ್ಣೂರಗೆ ಪ್ರಚಂಡ ಬಹುಮತ ನೀಡಲು ಮನವಿ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: KSRTC ನೌಕರರ ಪತ್ತಿನ ಸಹಕಾರ ಸಂಘ ವಿಜಯಪುರ ವಿಭಾಗ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ -2026 ಇದೇ ಮಾ.15ರಂದು ನಡೆಯಲಿದೆ.

ಈ ಸಂಘದ ಆಡಳಿತ ಮಂಡಳಿಯ ಚುನಾವಣೆ 5 ವರ್ಷಗಳ ಅವಧಿಗೆ ನಡೆಯುತ್ತಿದ್ದು ಭ್ರಷ್ಟಾಚಾರ ವಿರುದ್ಧ, ನ್ಯಾಯ, ನೀತಿ ಧರ್ಮ, ಸಮಾನತೆ ಹಾಗೂ ಸತ್ಯದ ಉಳಿವಿಗಾಗಿ ಸದಾ ಕಾರ್ಮಿಕರ ಸಮಸ್ಯೆಗಳಿಗೆ ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನೇರವಾಗಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪಣತೊಟ್ಟು ಏಕೈಕ ವ್ಯಕ್ತಿಯಾದ ರಾಜಶೇಖರ್ ಕೊಣ್ಣೂರ್ ಅವರಿಗೆ ಪ್ರಚಂಡ ಬಹುಮತ ನೀಡಿ ಆಶೀರ್ವದಿಸಬೇಕೆಂದು ಬೆಂಬಲಿಗರು ಮನವಿ ಮಾಡಿದ್ದಾರೆ.

ಯಾಕೂಬ ನಾಟಿಕಾರ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಹಾಗೂ ಗೌರವ ಅಧ್ಯಕ್ಷರು ಸಾರಿಗೆ ನೌಕರರ ಕೂಟವಿಜಯಪುರ ವಿಭಾಗ, ವಾಯ್ ಸಿ.ಮಯೂರ್ ಡಿಎಸ್ಎಸ್ ಜಿಲ್ಲಾ ಸಂಚಾಲಕರು, ಜಯರಾಮ್ ರಾಠೋಡ ರಾಜ್ಯ ನಾಯಕರು ಕಲಬುರಗಿ, ಸನ್ಮಾನ್ಯ ಶ್ರೀ ಸೂರ್ಯಕಾಂತ ಟೈಗರ್ ವಲಯ ಅಧ್ಯಕ್ಷರು ಬೀದರ, ಡಿ.ಎಂ.ಬೇನೂರ ವಿಭಾಗೀಯ ನಾಯಕರು ವಿಜಯಪುರ ವಿಭಾಗ, ಎಂ.ಎನ್.ಇಲಕಲ್ ರಾಜ್ಯ ನಾಯಕರು ವಿಜಯಪುರ, ಬಶೀರಅಹ್ಮದ ಮುರಾಳ ವಿಭಾಗೀಯ ನಾಯಕರು ವಿಜಯಪುರ ವಿಭಾಗ ಹಾಗೂ ಎಂ.ಎಲ್.ಚೌಧರಿ ವಿಭಾಗೀಯ ನಾಯಕರು ವಿಜಯಪುರ ವಿಭಾಗ ಇವರು ರಾಜಶೇಖರ್ ಕೊಣ್ಣೂರ್ ಅವರಿಗೆ ಮತ ನೀಡುವಂತೆ ವಿನಂತಿಸಿಕೊಂಡಿದ್ದಾರೆ.

ದಿನಾಂಕ್ 15-03-2026 ರಂದು ಶ್ರೀರಾಜ ರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಕೆ.ಎಸ್.ಆರ್.ಟಿ.ಸಿ ನೌಕರರ ಪತ್ತಿನ ಸಹಕಾರಿ ಸಂಘನಿ, ವಿಜಯಪುರ ವಿಭಾಗ ಚುನಾವಣೆಗೆ ನಾನು ಸ್ಪರ್ಧಿಸಿದ್ದು ನನ್ನ ಚಿನ್ನೆ ಬಕೆಟ್‌ಗೆ ತಮ್ಮ ಅತ್ಯಮೂಲ್ಯವಾದ ಮತವನ್ನು ಕೊಟ್ಟು ಪ್ರಚಂಡ ಬಹುಮತದಿಂದ ಆರಿಸಿ ತರಬೇಕಾಗಿ ವಿಜಯಪುರ ವಿಭಾಗದ ಪತ್ತಿನ ಸಂಘದ ಸದಸ್ಯರುಗಳಿಗೆ ಕಳಕಳಿಯಿಂದ ರಾಜಶೇಖರ್ ಕೊಣ್ಣೂರು ಆದ ನಾನು ಮನವಿ ಮಾಡುತ್ತಿದ್ದೇವೆ.

Deva
the authorDeva

Leave a Reply

error: Content is protected !!