NWKRTC-ತಾಂತ್ರಿಕ ಸಿಬ್ಬಂದಿಗೂ ಪ್ರೋತ್ಸಾಹ ಧನ ಕೊಡಿ, ಚಾಲನಾ ಸಿಬ್ಬಂದಿಗೆ ಭದ್ರತೆ ಒದಗಿಸಿ: ಎಂಡಿ ಅಧ್ಯಕ್ಷತೇಲಿ ನಡೆದ ಸಭೆಯಲ್ಲಿ ಕೂಟ ಒತ್ತಾಯ

ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ವತಿಯಿಂದ ಉತ್ಪಾದನೆ ಮತ್ತು ಕುಂದುಕೊರೆತೆಯ ಸಭೆಗೆ ಸಲಹೆಗಳ ಮತ್ತು ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಲಾಯಿತು.

ಮಾ.13ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಈ ರೀತಿಯಲ್ಲಿ ಕಾಲಕಾಲಕ್ಕೆ ಸಭೆಗಳು ನಡೆದು ನೌಕರರ ಸಮಸ್ಯೆಗಳು ಬಗೆ ಹರಿಸುವ ಮೂಲಕ ಆಧಿಕಾರಿಗಳ ಮತ್ತು ನೌಕರರ ಮಧ್ಯ ಸೌಹಾರ್ದ ಸಂಬಂಧಗಳು ಉತ್ತಮವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬಾವಿಸುತ್ತಾ ಕೇಲವು ಸಲಹೆಗಳು, ಬೇಡಿಕೆಗಳನ್ನು ಮತ್ತು ನೌಕರರ ಸಮಸ್ಯೆಗಳನ್ನು ಎಂಡಿ ಅವರಿಗೆ ಸಲ್ಲಿಸಸಿದರು.
ಸಲಹೆ ಏನು? ಅ) ಈಗಾಗಲೇ ಸರ್ಕಾರ ಸಾರಿಗೆ ಸಂಸ್ಥೆಗಳಲ್ಲಿ “ದರ ಪರಿಷ್ಕರಣಾ ಸಮಿತಿ” ರಚನೆಗೆ ಆದೇಶ ಹೊರಡಿಸಿರುವುದು ಸರಿಯಷ್ಟೇ. ಆದರೆ ಇದುವರೆಗೂ ಸಮಿತಿಯ ಸದಸ್ಯರನ್ನು ನೇಮಕ ಮಾಡದಿರುವುದರಿಂದ ಸಾರಿಗೆ ಸಂಸ್ಥೆಗಳಿಗೆ ಆರ್ಥಿಕವಾಗಿ ನಷ್ಟವಾಗುತ್ತಿರುವುದರಿಂದ, ಸರ್ಕಾರವನ್ನು ಕೂಡಲೇ ಸಮಿತಿಯ ಸದಸ್ಯರ ನೇಮಕಕ್ಕಾಗಿ
ಕ್ರಮ ವಹಿಸಬೇಕೆಂದು ಒತ್ತಾಯಿಸಬೇಕು ಎಂದು ಕೂಡದ ಪದಾಧಿಕಾರಿಗಳು ಎಂಡಿ ಅವರಲ್ಲಿ ಮನವಿ ಮಾಡಿದರು.
ಸಾರಿಗೆ ನೌಕರರು ತುರ್ತು ಸಂಧರ್ಭದಲ್ಲಿ ಕಾರಣಾಂತರಗಳಿಂದ ವಾರದಲ್ಲಿ ಒಂದು ದಿನ ಗೈರು ಹಾಜರಿ ಆದರೆ, ವಾರದ ರಜೆಯನ್ನು ಕಡಿತ ಮಾಡುವ ಪದ್ಧತಿಯನ್ನು ರದ್ದು ಮಾಡಬೇಕು. ಎಲ್.ಎಂ.ಎಸ್ ನಲ್ಲಿ ಚಾಲಕ ಮತ್ತು ನಿರ್ವಾಹಕರಿಗೆ ಇರುವ ಆಟೋ ಸ್ಯಾಂಕ್ಷನ್ ರೀತಿಯಲ್ಲಿ ತಾಂತ್ರಿಕ ಸಿಬ್ಬಂದಿಗಳಿಗೂ ಎಲ್ಲ ರೀತಿಯ ರಜೆ ಪಡೆಯುವ ಅವಕಾಶ ಕಲ್ಪಿಸಬೇಕು.
ಸಂಸ್ಥೆಯಲ್ಲಿ ಕರ್ತವ್ಯ ನಿರ್ವಾಹಿಸುತ್ತಿರುವ ನೌಕರರು ಅನಾರೋಗ್ಯ ಪೀಡಿತರಾಗಿ ಲಘು ಕರ್ತವ್ಯಕ್ಕಾಗಿ ತಿಂಗಳುಗಳ ಕಾಲ ಕೇಂದ್ರ ಕಚೇರಿ ಅಲೆದಾಡುವ ಪರಿಸ್ಥಿತಿಯನ್ನು ಹೋಗಲಾಡಿಸಬೇಕು. ಅನುಕಂಪದ ಆಧಾರದ ಕರ್ತವ್ಯಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಳಿಗೆ ಆದಷ್ಟು ಶೀಘ್ರವಾಗಿ ಕೆಲಸ ನೀಡುವುದು ಮತ್ತು ಸರ್ಕಾರದ ಆದೇಶ ಪತ್ರ ಸಂಖ್ಯೆ: ಟಿಡಿ 77 ಟಿಸಿಎಸ್ 2025 ರಂತೆ ಅನುಕಂಪದ ಆಧಾರದ ಹುದ್ದೆಗಳಿಗೆ ಗ್ರೂಫ್-ಡಿ ಸಿಬ್ಬಂದಿಗಳನ್ನ ನೇಮಕಾತಿ ಮಾಡಿಕೊಳ್ಳುವುದನ್ನು ನಿಲ್ಲಿಸಿರುವ ಪ್ರಕ್ರಿಯೆಯನ್ನು ಸರ್ಕಾರದ ಅನುಮತಿ ಪಡೆದುಮತ್ತೆ ನೇಮಕಾತಿ ಆರಂಭಿಸಬೇಕು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳಿಗೆ ಘಟಕ ಮತ್ತು ವಿಭಾಗ ಮಟ್ಟದ ಉತ್ಪಾದನೆ ಮತ್ತು ಕುಂದುಕೊರೆತೆಯ ಸಭೆಗೆ ಆಧಿಕೃತವಾಗಿ ಆಹ್ವಾನ ನೀಡಬೇಕು. ಎಲ್.ಎಂ.ಎಸ್ ತಂತ್ರಾಂಶಕ್ಕೆ ಅವತಾರ್ ಮಾದರಿಯನ್ನು ಅಳವಡಿಸಬೇಕು.
ಚಾಲಕ ಕಂ ನಿರ್ವಾಹಿಕರಿಗೂ ಮುಂಬಡ್ತಿಗೆ ಅವಕಾಶ ನೀಡಬೇಕು. ಸಮಾನ ತಪ್ಪಿಗೆ, ಸಮಾನ ಶಿಕ್ಷೆ ಪದ್ಧತಿ ಜಾರಿಗೆ ತರಬೇಕು. ರಾತ್ರಿ ತಂಗುವ ಸ್ಥಳಗಳಲ್ಲಿ ಚಾಲನಾ ಸಿಬ್ಬಂದಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಖು ಹಾಗೂ ರಾತ್ರಿ ಪಾಳಿಯ ವೇಗದೂತ ಬಸ್ಸುಗಳಲ್ಲಿ ಚಾಲಕ ಮತ್ತು ನಿರ್ವಾಹಕರು ವಿಶ್ರಾಂತಿ ಪಡೆಯಲು ಸ್ಥಳಾವಕಾಶ ಮಾಡಿಕೊಡಬೇಕು.
ಬಿ.ಎಂ.ಟಿ.ಸಿ ಮಾದರಿಯಲ್ಲಿ ಎಲ್ಲ ಘಟಕಗಳಲ್ಲಿ ಮಹಿಳಾ ಸಿಬ್ಬಂದಿಗಳಿಗೆ ಅವರ ಅನುಕೂಲಕ್ಕೆ ತಕ್ಕಂತೆ ಮೊದಲ ಪಾಳಿ ಹಾಗೂ ಎರಡನೇ ಪಾಳಿ ಕರ್ತವ್ಯ ನೀಡಬೇಕು. ಘಟಕ ಮತ್ತು ನಿಲ್ದಾಣಗಳಲ್ಲಿ ಮಹಿಳಾ ಸಿಬ್ಬಂದಿಗಳಿಗೆ ಶುಚಿಯಾಗಿರುವ ವಿಶ್ರಾಂತಿ ಕೊಠಡಿಗಳನ್ನು ಒದಗಿಸಬೇಕು.ಪಾರಂ-4 ನ್ನು ಈಗಿನ ಸಂಚಾರಿ ದಟ್ಟಣೆಗೆ ತಕ್ಕಂತೆ ವೈಜ್ಞಾನಿಕವಾಗಿ ಪರಿಷ್ಕರಿಸಬೇಕು.

ಕೋವಿಡ್-19 ಸಂಧರ್ಭದಲ್ಲಿ ರದ್ದು ಮಾಡಿರುವ ರಾತ್ರಿ ಪಾಳಿ ಕರ್ತವ್ಯಗಳನ್ನು ಪುನರ್ ಚಾಲನೆ ಮಾಡುವುದು ಮತ್ತು ಶಕ್ತಿ ಯೋಜನೆ ಕಾರಣದಿಂದ ಮಾಡಿರುವ ಹೆಚ್ಚುವರಿ ಸುತ್ತುವಳಿಗಳಿಗೆ ವೈಜ್ಞಾನಿಕವಾಗಿ ಒಟಿ ನಿಗದಿ ಮಾಡಬೇಕು. ಎಲ್ಲ ಘಟಕಗಳಲ್ಲಿ ಶುದ್ಧ ನೀರಿನ ಘಟಕಗಳು ಇಲ್ಲದೆ, ಇದ್ದರೂ ಅವು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸದ ಕಾರಣ ಸಿಬ್ಬಂದಿಗಳು ಶುದ್ಧ ನೀರಿಗಾಗಿ ಪರದಾಡುತ್ತಿದ್ದಾರೆ. ಎಲ್ಲ ಘಟಕಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಒದಗಿಸಬೇಕು.
ಅಂತರ್ ನಿಗಮ ವರ್ಗಾವಣೆಯನ್ನು ಶೈಕ್ಷಣಿಕ ವರ್ಷಗಳಿಗೆ ಅನುಗುಣವಾಗಿ ಪ್ರತಿ ವರ್ಷ ವರ್ಗಾವಣೆ ಮಾಡಬೇಕು. ತಾಂತ್ರಿಕ ಸಿಬ್ಬಂದಿಗಳಿಗೆ ಆಧುನಿಕ ಮಾದರಿಯ ಸಲಕರಣೆಗಳು ಒದಗಿಸಬೇಕು. ಹಳೆಯ ಮಾದರಿಯ ಸಲಕರಣೆಗಳನ್ನು ಉಪಯೋಗಿಸುತ್ತಿರುವ ಕಾರಣ ಸಮಯ ಮತ್ತು ಶಕ್ತಿ ವ್ಯಯವಾಗುತ್ತಿರುವುದನ್ನು ತಡೆಗಟ್ಟುವುದು ಮತ್ತು ಸುರಕ್ಷತಾ ಸಲಕರಣೆಗಳನ್ನು ಒದಗಿಸಬೇಕು. ತಾಂತ್ರಿಕ ಸಿಬ್ಬಂದಿಗಳ ಕೊರತೆಯಿಂದ, ಇರುವ ತಾಂತ್ರಿಕ ಸಿಬ್ಬಂದಿಗಳ ಮೇಲೆ ಕೆಲಸದ ಒತ್ತಡ ಹೆಚ್ಚಗುತ್ತಿದ್ದು ಕೂಡಲೆ ತಾಂತ್ರಿಕ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳುವುದಕ್ಕೆ ಕ್ರಮ ಕೈಗೊಳ್ಳಬೇಕು.
ತಾಂತ್ರಿಕ ಸಿಬ್ಬಂದಿಗಳಿಗೆ, ಚಾಲನಾ ಸಿಬ್ಬಂದಿಗಳಂತೆ ಪ್ರೋತ್ಸಾಹ ಧನ ನೀಡಬೇಕು. ನಿವೃತ್ತಿಗೊಂಡ ನೌಕರರಿಗೆ ಅವರಿಗೆ ಸಿಗಬೇಕಿರುವ ಆರ್ಥಿಕ ಸೌಲಭ್ಯಗಳನ್ನು ಕಾಲ ವಿಳಂಬವಿಲ್ಲದೆ ಒದಗಿಸಬೇಕು. ಚಾಲನಾ ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಪ್ರಯಾಣಿಕರು ಹಾಗೂ ಸಾರ್ವಜನಿಕರ ವಿರುದ್ದ ಸಂಸ್ಥೆಯ ವತಿಯಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಮತ್ತು ಸಾರ್ವಜನಿಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಬಸ್ಸುಗಳಲ್ಲಿ ಹಾಗೂ ನಿಲ್ದಾಣಗಳಲ್ಲಿ ಹಲ್ಲೆ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದರ ಬಗೆ ಸೂಚನಾ ಪಲಕಗಳನ್ನು (ಆಸ್ಪತ್ರೆಗಳ ಮಾದರಿಯಲ್ಲಿ) ಹಾಕಬೇಕು.
ಸಾರಿಗೆ ಸಂಸ್ಥೆಯಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಖಾಸಗಿ ಚಾಲಕರನ್ನು ಮತ್ತು ನಿರ್ವಹಣೆಯನ್ನು ನೀಡಿ ಸಂಸ್ಥೆಯನ್ನು ಖಾಸಗೀಕಾರಣ ಮಾಡುವುದನ್ನು ತಡೆಯುವುದು ಹಾಗೂ ಸಂಸ್ಥೆಯ ವಾಹನಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಹಾಗೂ ಇತರೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವ ಪದ್ಧತಿಯನ್ನು ಈ ಕೂಡಲೇ ನಿಲ್ಲಿಸಿ, ಸಂಸ್ಥೆಯ ವತಿಯಿಂದ ನೇರ ನೇಮಕಾತಿ ಮಾಡಿಕೊಳ್ಳಬೇಕು.
2021 ಸಾರಿಗೆ ಮುಷ್ಕರದ ಸಮಯದಲ್ಲಿ ಶಿಕ್ಷಾದೇಶಗಳಿಗೆ ಗುರಿಯಾದ ನೌಕರರನ್ನು ಚಿನ್ನ ಹಾಗೂ ಬೆಳ್ಳಿ ಪದಕಗಳ ಪ್ರಶಸ್ತಿಗಳಿಗೆ ಪರಿಗಣಿಸುವುದು ಹಾಗೂ ಮುಷ್ಕರದ ಕಾರಣ ಸಂಸ್ಥೆಯವತಿಯಿಂದ ಸಿಬ್ಬಂದಿಗಳಿಗೆ ವಿಧಿಸಿರುವ ಶಿಕ್ಷಾದೇಶಗಳನ್ನು ಹಿಂಪಡೆಯಬೇಕು. 05/08/2025 ರಂದು ಮುಷ್ಕರದ ಕಾರಣ ಸಾರಿಗೆ ಸಿಬ್ಬಂದಿಗಳಿಗೆ
ನೀಡಿರುವ ಆರೋಪಣಾ ಪತ್ರಗಳನ್ನು ಹಿಂಪಡೆಯಬೇಕು.
ನೌಕರರ ಗುಂಪು ವಿಮೆ ಯೋಜನೆ ಅಡಿಯಲ್ಲಿ ಮೃತಪಟ್ಟ ಸಿಬ್ಬಂದಿಗಳ ಅವಲಂಬಿತರಿಗೆ ನೀಡುತ್ತಿರುವ ಮೊತ್ತ ಕೆ.ಎಸ್.ಆರ್.ಟಿ.ಸಿ ನಿಗಮದಲ್ಲಿ 14 ಲಕ್ಷ, ಕೆ.ಕೆ.ಆರ್.ಟಿ.ಸಿ ನಿಗಮದಲ್ಲಿ 12.50 ಲಕ್ಷ, ಬಿ.ಎಂ.ಟಿ.ಸಿ ನಿಗಮದಲ್ಲಿ 12 ಲಕ್ಷ ರೂ.ಗಳನ್ನು ನೀಡುತ್ತಿದ್ದು, ವಾಯುವ್ಯ ಸಾರಿಗೆ ನಿಗಮದಲ್ಲಿ ಮಾತ್ರ 7 ಲಕ್ಷ ರೂ. ನೀಡುತ್ತಿರುವುದು ಬಹಳ ಕಡಿಮೆಯಾಗಿದೆ. ಬಾಕಿ ಮೂರು ನಿಗಮಗಳಂತೆ ಕನಿಷ್ಠ 12 ಲಕ್ಷ ರೂಪಾಯಿಗಳನ್ನು ನೀಡಬೇಕು.
ತೆರಿಗೆ ವಿನಾಯಿತಿ, ಟೋಲ್ ಶುಲ್ಕ ಮುಕ್ತ, ಇಂಧನ ಮೇಲೆ ರಾಜ್ಯ ಸರ್ಕಾರ ವಿಧಿಸುವ ತೆರಿಗೆ ವಿನಾಯ್ತಿ. ಅನುಸೂಚಿಗಳನ್ನು ವೈಜ್ಞಾನಿಕವಾಗಿ, ಆದಾಯ ಬರಬಹುದಾದ ಮಾರ್ಗ ಮತ್ತು ಸುತ್ತುವಳಿಗಳನ್ನು ಪರಿಷ್ಕರಿಸುವುದು ಮತ್ತು ಸಮಾನಾಂತರ ಕಾರ್ಯಾಚರಣೆಯನ್ನು ತಡೆಯಲು ಕ್ರಮ ವಹಿಸಬೇಕು.
ಶಕ್ತಿ ಯೋಜನೆಯ ಹಿಂದಿನ ಆರ್ಥಿಕ ವರ್ಷಗಳ ಬಾಕಿ ಮೊತ್ತವನ್ನು ಅದಷ್ಟು ಶೀಘ್ರವಾಗಿ ಸರ್ಕಾರವನ್ನು ಮರು ಪಾವತಿ ಮಾಡುವಂತೆ ಆಗ್ರಹಿಸುವುದರ ಜೊತೆಗೆ 2026- 2027 ಸಾಲಿನ ಬಜೆಟ್ ನಲ್ಲಿ ಶಕ್ತಿ ಯೋಜನೆಗೆ ಮೀಸಲಿಟ್ಟಿರುವ 5300 ಕೋಟಿ ರೂ.ಗಳು ಕಡಿಮೆ ಇದ್ದು, ನೈಜ ಪ್ರಯಾಣಿಕರ ಮೊತ್ತವನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಬೇಕು.
ಆದಷ್ಟು ಹೊಸ ಬಸ್ಸುಗಳ ಖರೀದಿಯಲ್ಲಿ ಅಶೋಕ ಲೇಲ್ಯಾಂಡ್ ಕಂಪನಿಯ ಬಸ್ಸುಗಳನ್ನು ಖರೀದಿಸುವುದು ಮತ್ತು ಗುಣಮಟ್ಟದ ಬಿಡಿ ಭಾಗಗಳನ್ನು ಖರೀದಿಸುವುದು. ನಗರ, ಮಹಾನಗರ ಮತ್ತು ಬೃಹತ್ ಮಹಾನಗರಗಳಲ್ಲಿ ಒದಗಿಸುವ ಬಸ್ ಸೌಲಭ್ಯಕ್ಕೆ ಪಾಲಿಕೆಗಳಿಂದ ವಿಧಿಸುವ ತೆರಿಗೆಯಲ್ಲಿ “ನಗರ ಸಾರಿಗೆ ಸೌಲಭ್ಯ ಕರ” ವನ್ನು ವಿಧಿಸಿ ಸಂಗ್ರಹವಾಗುವ ತೆರಿಗೆ ಮೊತ್ತವನ್ನು ಸಾರಿಗೆ ಸಂಸ್ಥೆಗಳಿಗೆ ಒದಗಿಸಬೇಖು.
ರಾಜ್ಯದಲ್ಲಿ ಮಾರಾಟವಾಗುವ ಇಂಧನದ ಮೇಲೆ “ಸಾರಿಗೆ ಸೌಕರ್ಯ ಪುನಶ್ಚತನ ಕರ” ವಿಧಿಸಿ ಆದಾಯ ಸಂಗ್ರಹಿಸಿ ಸಾರಿಗೆ ಸಂಸ್ಥೆಗಳಿಗೆ ನೀಡುವುದು. ನೌಕರರ ಸೇವಾ ವಿವರ & ಸೌಲಭ್ಯಗಳನ್ನು ತಂತ್ರಾಂಶ ಆಧಾರಿತವಾಗಿ ನಿರ್ವಹಿಸದೆ ಇರುವುದರಿಂದ ಕಡತಗಳ ನಿರ್ವಾಹಣೆಗೆ ವೆಚ್ಚ ಹೆಚ್ಚಾಗಲು ಕಾರಣವಾಗಿರುತ್ತದೆ ಮತ್ತು ಮಾನವ ಲೋಪದೋಷಗಳಿಂದ ಆಗುವ ನಷ್ಟಗಳನ್ನು ತಡೆಯಬಹುದಾಗಿದೆ.
ಬೆಳಗಾವಿ ಬಸ್ ನಿಲ್ದಾಣ ವಿಶ್ರಾಂತಿ ಗೃಹ ನೌಕರರ ಉಪಯೋಗಕ್ಕೆ ಬಳಸಲು ಅನುಮತಿ ನೀಡುವುದು. ನಿರ್ವಾಹಕರಿಗೆ ಹಾಗೂ ತಾಂತ್ರಿಕ ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ಮುಂಬಡ್ತಿ ನೀಡಲು ಕ್ರಮ ಕೈಗೊಳ್ಳುವುದು.ಕೆ.ಎಸ್.ಆರ್.ಟಿ.ಸಿ ಮತ್ತು ಕೆ.ಕೆ.ಆರ್.ಟಿ.ಸಿ ನಿಗಮದಲ್ಲಿ ತಿಂಗಳ ಒಂದನೇ ತಾರೀಖು ನಿಗಮದ ಎಲ್ಲ ಸಿಬ್ಬಂದಿಗಳಿಗೆ ವೇತನ ನೀಡುತ್ತಿರುವಣತೆ ವಾಯುವ್ಯ ಸಾರಿಗೆ ನಿಗಮದಲ್ಲೂ ತಿಂಗಳ ಒಂದನೇ ತಾರೀಖು ವೇತನ ನೀಡಲು ಕ್ರಮ ಕೈಗೊಳ್ಳಬೇಕು.
ಚಾಲಕ ಕಂ-ನಿರ್ವಾಹಕರಂತೆ ನಿರ್ವಾಹಕ ಹಾಗೂ ಕಿರಿಯ ಸಹಾಯಕರಿಗೂ ಕೂಡ ಯಾವುದೆ 3 ವರ್ಷದ ಹಾಜರಾತಿ ಪರಿಗಣಿಸದೇ 15 ವರ್ಷಕ್ಕೆ ಸರಿಯಾಗಿ ವಿಶೇಷ ವೇತನ ಬಡ್ತಿ ನೀಡಬೇಕು. ತಾಂತ್ರಿಕ ಸಹಾಯಕ ಹುದ್ದೆಯ ವೇತನ ನಿಗದಿ ಕುರಿತು ಇರುವ ಗೊಂದಲ ನಿವಾರಣೆಗೆ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ಸುತ್ತೋಲೆಗಳನ್ನು ಆಳವಡಿಸಿಕೊಳ್ಳಬೇಕು.
ಬೇಡಿಕೆಗಳು: ಸರ್ಕಾರ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ, ಸರ್ಕಾರಿ ನೌಕರರಂತೆ ಸರಿಸಮಾನ ವೇತನ (7 ನೇ ವೇತನ ಆಯೋಗದ ಮಾದರಿಯಲ್ಲಿ 01/01/2024 ರಿಂದ ಜಾರಿಗೆ ತರಬೇಕು. 01/01/2020 ರಿಂದ ಅನ್ವಯವಾಗುವಚಿತೆ ವೇತನ ಪರಿಷ್ಕರಣೆ ಮಾಡಲಾಗಿದ್ದು, ಈ ವೇತನ ಪರಿಷ್ಟರಣೆಯ 38 ತಿಂಗಳ ಹಿಂಬಾಕಿಯನ್ನು ನೀಡಬೇಖು. (ನಿವೃತ್ತ ನೌಕರರಿಗೆ ಮೊದಲ ಅದ್ಯತೆಯಲ್ಲಿ ಅವರ ಹಿಂಬಾಕಿ ಮತ್ತು ಇತರೆ ಸೇವ ಆರ್ಥಿಕ ಸೌಲಭ್ಯಗಳನ್ನು ನೀಡಬೇಕು) ( ಈಗಾಗಲೇ ಸರ್ಕಾರ 26 ತಿಂಗಳ ವೇತನ ಹಿಂಬಾಕಿ ನೀಡುವ ಸುತ್ತೋಲೆ ಹೊರಡಿಸಿದ್ದು ಬಾಕಿ 12 ತಿಂಗಳ ವೇತನ ಹಿಂಬಾಕಿಯನ್ನು ಸರ್ಕಾರ ಅಥವಾ ಸಂಸ್ಥೆ ಭರಿಸಬೇಕು.
ಸಾರಿಗೆ ಸಂಸ್ಥೆಗಳಲ್ಲಿ ಸಂಘಗಳ ಮಾನ್ಯತೆ ಪ್ರಶ್ನೆ ಈಡೇರಿಸಲು ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ಈ ಕೂಡಲೆ ಘೋಷಿಸಬೇಕು. ವಾಯವ್ಯ ಸಾರಿಗೆ ನೌಕರರಿಗೆ ಮತ್ತು ಅವಲಂಬಿತರಿಗೆ ನಗದು ರಹಿತ ಉಚಿತ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರಬೇಕು. ಅದಷ್ಟು ಎಲ್ಲ ತಾಲೂಕು ಮಟ್ಟದ ಮುಖ್ಯ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದರ ಮೂಲಕ ನೌಕರರು ಮತ್ತು ಅವಲಂಬಿತರು ಸ್ಥಳೀಯವಾಗಿ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡಬೇಕು.
ಶಕ್ತಿ ಯೋಜನೆಯಿಂದ ನಿರ್ವಾಹಕರಿಗೆ ಆಗುತ್ತಿರುವ ಸಮಸ್ಯೆಗಳ ನಿವಾರಣೆ ಮಾಡುವುದು ಮತ್ತು ಶಕ್ತಿ ಯೋಜನೆ ಕಾರಣದಿಂದ ಆಮಾನತು ಮಾಡಿ ಬೇರೆ ಬೇರೆ ವಿಭಾಗಗಳು ಮತ್ತು ಘಟಕಗಳಿಗೆ ವರ್ಗಾವಣೆ ಮಾಡುವ ಪೂರ್ವ ಮಾನವೀಯತೆ ದೃಷ್ಟಿಯಲ್ಲಿ ಹಾಗೂ ಅವರ ಕುಟುಂಬ ಸದಸ್ಯರ ಹಿತದೃಷ್ಟಿಯಿಂದ ನಿರ್ವಾಹಕರ ಹಿತ
ಕಾಪಾಡಬೇಕು.
ಈ ಎಲ್ಲ ವಿಷಯಗಳ ಬಗ್ಗೆ ಎಂಡಿ ಅವರೊಂದಿಗೆ ಚರ್ಚಿಸಿದ್ದು ಅವರು ಆದಷ್ಟು ಶೀಘ್ರದಲ್ಲಿ ನಿಮ್ಮ ಬೇಡಿಗಳನ್ನು ಕಾನೂನಾತ್ಮಕವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ನಮಗೂ ಎಲ್ಲವು ಸಕರಾತ್ಮವಾಗಿ ಈಡೇರಲಿವೆ ಎಂಬ ಭರವಸೆ ಇದೆ ಎಂದು ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.
Related









