ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಮಾಸ್ಕ್ (ಮುಸುಕು) ಧರಿಸದವರ ವಿರುದ್ಧ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಧಿಸುತ್ತಿದ್ದ ದಂಡದ ಪ್ರಮಾಣವನ್ನು ಭಾರಿ ಕಡಿತಗೊಳಿಸಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ವೈರಸ್ ಹೆಚ್ಚುತ್ತಿದೆ ಎಂಬ ಕಾರಣಕ್ಕೆ ಸಾಮಾನ್ಯ ಜನರು ಮಾಸ್ಕ್ ಧರಿಸಿಲ್ಲ ಎಂದು 1000 ರೂ. ದಂಡ ವಿಧಿಸುತ್ತಿತ್ತು. ಅದರ ವಿರುದ್ಧ ಜನರು ತಿರುಗಿ ಬಿದ್ದ ಹಿನ್ನೆಲೆಯಲ್ಲಿ ನಗರ ಪ್ರದೇಶದಲ್ಲಿ ವಿಧಿಸುತ್ತಿದ್ದ 1000 ರೂ. ಬದಲಿಗೆ 250 ರೂ. ಗ್ರಾಮೀಣ ಭಾಗದಲ್ಲಿ ವಿಧಿಸುತ್ತಿದ್ದ 500 ರೂ. ಬದಲಿಗೆ 100 ರೂ. ವಿಧಿಸುವಂತೆ ಮುಖ್ಯಮಂತ್ರಿಗಳು ಇಂದು ಹೊಸ ಆದೇಶ ಹೊರಡಿಸಿದ್ದಾರೆ.
ಇನ್ನು ಆರ್ಥಿಕವಾಗಿ ಸಬಲರಾಗಿರುವವರಿಗೆ ಒಂದು ರೂಪಾಯಿಯನ್ನು ವಿಧಿಸದ ಸರ್ಕಾರ ಕೊರೊನಾದಿಂದಾಗಿ ಒಪ್ಪತ್ತಿನ ಊಟಕ್ಕೂ ಪರದಾಡುವ ಜನರನ್ನೇ ಗುರಿಯಾಗಿಸಿಕೊಂಡಂತೆ ದಂಡ ವಸೂಲಿಗೆ ಇಳಿದಿತ್ತು. ಇದನ್ನು ಸ್ವತಃ ಜವರೇ ವಿರೋಧಿಸಿದ್ದರಿಂದ ಮತ್ತು ಕೆಲ ದೃಶ್ಯ ಮಾಧ್ಯಮಗಳಲ್ಲಿ ವಿರೋಧದ ಬಗ್ಗೆ ವರದಿ ಬಿತ್ತರವಾದ್ದರಿಂದ ಸರ್ಕಾರ ಈ ಹೊಸ ಆದೇಶ ಹೊರಡಿಸಿದೆ.