ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ- ನಾಲ್ಕನೇ ದಿನಕ್ಕೆ ಕಾಲಿಟ್ಟ ಪಾದಯಾತ್ರೆ: ಇಂದು ಶಿರಾದಲ್ಲಿ ವಾಸ್ತವ್ಯ

ಜೆ.ಜೆ.ಹಳ್ಳಿ: ರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಹಾಗೂ ಒಕ್ಕೂಟ ಹಮ್ಮಿಕೊಂಡಿರುವ ಪಾದಯಾತ್ರೆ ಶುಕ್ರವಾರ ಮೂರನೇ ದಿನ 18-20 ಕಿಮೀ ಕ್ರಮಿಸುವ ಮೂಲಕ ಯಶಸ್ವಿಗೊಳಿಸಿದೆ.

ಹವದು! ಕಳೆದ ಬುಧವಾರ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭಗೊಂಡ ಸಾರಿಗೆ ನೌಕರರ ಪಾದಯಾತ್ರೆ ಾಂದು 18 ಕಿಲೋ ಮೀಟರ್ ಕ್ರಮಿಸುವ ಮೂಲಕ ಮೊದಲ ದಿನ ಭಾರಿ ಯಶಸ್ವಿಗೊಂಡಿತ್ತು.
ಆ ಬಳಿಕ ರಾತ್ರಿ ಬುರುಜನರೊಪ್ಪ ಗ್ರಾಮದ ಶ್ರೀ ರಕ್ಷಾ ಗಣಪತಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿತ್ತು. ಗುರುವಾರ ಏ.9ರಂದು ಬೆಳಗ್ಗೆ 6 ಗಂಟೆಗೆ ಎರಡನೇ ದಿನದ ಜಾಥಾ ದೇವಸ್ಥಾನದಿಂದ ಆರಂಭವಾಗಿ ಸುಮಾರು 30 ಕಿಮೀ ಕ್ರಮಿಸಿದರು.
ಗುರುವಾರ ರಾತ್ರಿ ಹಿರಿಯೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಶುಕ್ರವಾರ ಏ.10ರಂದು ಬೆಳಗ್ಗೆ ಹಿರಿಯೂರಿಂದ ಪಾದಯಾತ್ರೆ ಶುರುಮಾಡಿ 18-20 ಕಿಮೀ ಕ್ರಮಿಸಿದ ಜೆಜೆ ಹಳ್ಳಿಯಲ್ಲಿ ರಾತ್ರಿ ಪಾದಯಾತ್ರೆ ತಂಡ ತಂಗಿತ್ತು. ಇಂದು ಅಂದರೆ ಶನಿವಾರ ಏ.11ರಂದು ಬೆಳಗ್ಗೆ ಜೆಜೆ ಹಳ್ಳಿಯಿಂದ ಪಾದಯಾತ್ರೆ ಆರಂಭವಾಗಿದ್ದು ತುಮಕೂರು ಜಿಲ್ಲೆಯ ಶಿರಾ ತಲುಪಲಿದೆ.
ಶಿರಾದಲ್ಲಿ ರಾತ್ರಿ ತಂಗಲಿದ್ದು ಭಾನುವಾರ ಬೆಳಗ್ಗೆ ಶಿರಾದಿಂದ ಪಾದಯಾತ್ರೆ ಮುಂದುವರಿಯಲಿದೆ. ಒಟ್ಟಾರೆ ಇಂದು ನಾಲ್ಕನೇ ದಿನದ ಪಾದಯಾತ್ರೆ ಮುಂದುವರಿದಿದೆ.
ಪಾದಯಾತ್ರೆ ಸಾಗಿದ ವಿವರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಹಾಗೂ ಒಕ್ಕೂಟ ವತಿಯಿಂದ ಬುಧವಾರ ಚಿತ್ರದುರ್ಗದಿಂದ ಬೆಂಗಳೂರಿನವರೆಗೆ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ. ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ನೌಕರರು ಮತ್ತು ಅವರ ಕುಟುಂಬ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕೆಲಹೊತ್ತು ಪ್ರತಿಭಟನೆ ನಡೆಸಿದರು. ಬಳಿಕ ಬೆಂಗಳೂರಿನತ್ತ ಪಾದಯಾತ್ರೆ ಆರಂಭಿಸಿದರು.
ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್ ಮಾತನಾಡಿ, ನಾಲ್ಕು ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳ ಕುರಿತು ಈಗಾಗಲೇ ಹಲವು ಬಾರಿ ಶಾಂತಿಯುತ ಹೋರಾಟಗಳನ್ನು ನಡೆಸಲಾಗಿದೆ. ಸರ್ಕಾರಕ್ಕೆ ಮನವಿ ಪತ್ರಗಳನ್ನು ಸಲ್ಲಿಸಿ, ಮುಖ್ಯಮಂತ್ರಿ, ಸಾರಿಗೆ ಸಚಿವರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಹಲವು ಸುತ್ತಿನ ಸಭೆಗಳು ನಡೆದಿದ್ದರೂ ಯಾವುದೇ ಸ್ಪಷ್ಟ ಪರಿಹಾರ ದೊರಕಿಲ್ಲ’ ಹೀಗಾಗಿ ನಾವು ಪಾದಯಾತ್ರೆ ಹಮ್ಮಿಕೊಂಡಿದ್ದು 2ನೇ ದಿನವಾದ ಇಂದು ಹಿರಿಯೂರಿನಲ್ಲಿ ವಾಸ್ತವ್ಯ ಹೂಡಿದ್ದರು.
ಮೇಟಿಕುರ್ಕಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಸೇರಿ ಗ್ರಾಮಸ್ಥರೇ ಪಾದಯಾತ್ರೆ ಆಮಾಡುತ್ತಿರುವ ನೌಕರರ ಬಳಿ ಬಂದು ಅವರಿಗೆ ಕಾಫಿ ಟೀ ವ್ಯವಸ್ಥೆ ಮಾಡಿಕೊಟ್ಟಿ ಹೋರಾಟಕ್ಕೆ ಶುಭಕೋರಿದರು. ಇನ್ನು ಇದಕ್ಕೂ ಮೊದಲು, ಟೋಲ್ ಬಳಿ ಸಾರ್ವಜನಿಕರು ನೋವು ನಿವಾರಕ ಪರಿಕರಗಳು ಸೇರಿ ಇತರೆ ತಿನಿಸುಗಳನ್ನು ಕೊಡುವ ಮೂಲಕ ಔದಾರ್ಯ ತೋರಿದ್ದು ಅಲ್ಲದೆ ನೌಕರರು ಬಿರುಬಿಸಿಲನ್ನು ಲೆಕ್ಕಿಸದೆ ಮಾಡುತ್ತಿರುವ ಪಾದಯಾತ್ರೆ ನೋಡಿ ಸರ್ಕಾರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು 2ನೇ ದಿನ ಸುಮಾರು 30 ಕಿಲೋ ಮೀಟರ್ ಪಾದಯಾತ್ರೆ ಸಾಗಿದ್ದು, ಒಟ್ಟಾರೆ 48 ಕಿಮೀ ಈಗಾಗಲೇ ಪಾದಯಾತ್ರೆ ಮಾಡಿದ್ದಾರೆ. ಇನ್ನು ರಾತ್ರಿ ಮಲಗುವ ವೇಳೆ ಈ ಪಾದಯಾತ್ರಿಗಳಿಗೆ ಎಷ್ಟು ಕಾಲು ನೋವು ಬಂದಿರುತ್ತದೋ ಗೊತ್ತಿಲ್ಲ. ಆದರೆ ಇವರ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸರ್ಕಾರ ಸ್ಪಂದಿಸಿ ಬೇಡಿಕೆ ಈಡೇರಿಸಲಿ ಎಂದು ನಾವು ಕೂಡ ಆಗ್ರಹಿಸುತ್ತೇವೆ ಎಂದು ಮೇಟಿಕುರ್ಕಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರು ಶುಭಕೋರಿದರು.
ಇನ್ನು ಮೂರನೇ ದಿನವಾದ ಶುಕ್ರವಾರವೂ ಪಾದಯಾತ್ರೆಯಲ್ಲಿ ಸ್ಥಳೀಯ ನೌಕರರ ಒಂದಷ್ಟುದೂರ ಹೆಜ್ಜೆಹಾಕಿ ಬೆಂಬಲ ಸೂಚಿಸಿದರು. ಇಂದು ಕೂಡ ಹಲವು ನೌಕರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ನೀಡಬೇಕು ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಜಟಾಪಟಿ ಗೋಜು ಗೊಂದಲಗಳಿಗೆ ಮುಕ್ತಿಯಾಡಬೇಕು. ಅಲ್ಲದೆ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಸಾರಿಗೆ ನೌಕರರಿಗೆ ಕೊಟ್ಟಿರುವ ಪ್ರಣಾಳಿಕೆ ಭರವಸೆಯನ್ನು ಈಡೇರಿಸಬೇಕು ಹಾಗೂ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಡಲೇ ಬೇಕು ಜತೆಗೆ ಸಂಘಟನೆಗಳ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ ಈ ಜಾಥಾ ಹಮ್ಮಿಕೊಳ್ಳಲಾಗಿದೆ.
Related









