NEWSನಮ್ಮಜಿಲ್ಲೆನಮ್ಮರಾಜ್ಯ

ನಡದು ಹೋಗುತ್ತಿರುವ ನಮ್ಮ ನೌಕರರಿಗೆ ಕೃತಜ್ಞತೆ ಸಲ್ಲಿಸಿ: ಸಾರಿಗೆ ನೌಕರ ಮನವಿ

ವಿಜಯಪಥ ಸಮಗ್ರ ಸುದ್ದಿ

ಹಿರಿಯೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಹಾಗೂ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಭಾಗವಹಿಸಿರುವ ಎಲ್ಲ ನಮ್ಮ ಸಹೋದ್ಯೋಗಿ ಮಿತ್ರರಿಗೆ ಈ ಮಾರ್ಗದಲ್ಲಿ ಡ್ಯೂಟಿ ಮಾಡುತ್ತಿರುವವರು ಔದಾರ್ಯ ಮೆರೆಯಬೇಕು ಎಂದು ನೌಕರರೊಬ್ಬರು ಮನವಿ ಮಾಡಿದ್ದಾರೆ,

ಎಲ್ಲ ನನ್ನ ಆತ್ಮೀಯ ಸಾರಿಗೆ ಮಿತ್ರರಲ್ಲಿ ವಿನಂತಿ, ಚಿತ್ರದುರ್ಗ – ಬೆಂಗಳೂರು ಮಾರ್ಗ ಮಧ್ಯೆ ಕಾರ್ಯಾಚರಣೆ ಮಾಡುತ್ತಿರುವ ಚಾಲಕ – ನಿರ್ವಾಹಕರಲ್ಲಿ ನನ್ನ ಮನವಿ ಏನಂದರೆ ಕೂಟದ ವತಿಯಿಂದ ಪಾದಯಾತ್ರೆ ಹೊರಟಿದ್ದು ಹೆಚ್ಚಿನ ಜನರ ಗಮನ ಸೆಳೆಯುವುದಗೋಸ್ಕರ ಆ ಮಾರ್ಗದಲ್ಲಿ ಸಂಚರಿಸುವ ಚಾಲಕರಿರುವವರು ತಾವು ಹೊರಡುವ ಬಸ್ ನಿಲ್ದಾಣದಲ್ಲಿ ಇವೊಂದಿಷ್ಟು ಖರೀದಿಸಿ.

ಅವೇನೆಂದರೆ ಒಂದ್ 10 ಪ್ಯಾಕೆಟ್ ಬಿಸ್ಕತ್‌, ಒಂದ್‌ ಅರ್ಧ ಲೀಟರ್‌ನ ಬಾಟಲ್ ನೀರು ಮತ್ತೊಂದು ಸ್ವಲ್ಪ ಬಾಳೆಹಣ್ಣು. ಇವೆಲ್ಲವನ್ನು ಜತೆಗೆ ಇಟ್ಕೊಂಡು ಹೋಗಿ ಆ ನಡದುಕೊಂಡು ಹೋಗುತ್ತಿರುವ ನಮ್ಮ ನೌಕರರಿಗೆ ಕೃತಜ್ಞತೆ ಸಲ್ಲಿಸಿ. ಅವುಗಳನ್ನು ಕೊಟ್ಟು ಅವರನ್ನು ಮಾತನಾಡಿಸಿ ಹೋಗುವುದರಿಂದ ಅವರಲ್ಲಿ ಆತ್ಮಸ್ಥೈರ್ಯ ತುಂಬುತ್ತದೆ.

ಅಲ್ಲದೆ ನಮ್ಮ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ಜನರ ಗಮನ ಕೂಡ ಸೆಳೆಯುತ್ತದೆ ಇದು ನನ್ನ ಅಭಿಪ್ರಾಯ ಅನಿಸಿಕೆ ನಾನು ಒಬ್ಬ ನೌಕರ. ಹೀಗೆ ಮಾಡಿದರೆ ನಮಗಾಗಿ ಈ ಬೇಸಿಗೆ ಬಿಸಿಲನ್ನು ಲೆಕ್ಕಿಸದೆ ಪಾದಯಾತ್ರೆ ಮಾಡುತ್ತಿರುವವರಿಗೆ ಕೃತಜ್ಞತೆ ಸಲ್ಲಿಸಿದಂತಾಗುತ್ತದೆ ಎಂದು ಮನವಿ ಮಾಡಿದ್ದಾರೆ.

Megha
the authorMegha

Leave a Reply

error: Content is protected !!
Latest news
ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ- ನಾಲ್ಕನೇ ದಿನಕ್ಕೆ ಕಾಲಿಟ್ಟ ಪಾದಯಾತ್ರೆ: ಇಂದು ಶಿರಾದಲ್ಲಿ ವಾಸ್ತವ್ಯ ಸಾರಿಗೆ ನೌಕರರ ಒಕ್ಕೂಟದ ಪಾದಯಾತ್ರೆಗೆ ಸಂಪೂರ್ಣ ಬೆಂಬಲ: ಮಹಾಮಂಡಳದ ಅಧ್ಯಕ್ಷ ಆರ್‌.ಪಿ.ಕೊಪರ್ಡೆ ನಡದು ಹೋಗುತ್ತಿರುವ ನಮ್ಮ ನೌಕರರಿಗೆ ಕೃತಜ್ಞತೆ ಸಲ್ಲಿಸಿ: ಸಾರಿಗೆ ನೌಕರ ಮನವಿ ಸಾರಿಗೆ ನೌಕರರ 2ನೇ ದಿನದ ಪಾದಯಾತ್ರೆ: 30 ಕಿಮೀ ನಡಿಗೆ ಯಶಸ್ವಿ- ಹಿರಿಯೂರಿನಲ್ಲಿ ವಾಸ್ತವ್ಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ- ಯಾವ ಜಿಲ್ಲೆಗೆ ಯಾವ ಸ್ಥಾನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ: ಶೇ.84ರಷ್ಟು ವಿದ್ಯಾರ್ಥಿಗಳು ಪಾಸ್‌ ಮೊದಲ ದಿನದ ಸಾರಿಗೆ ನೌಕರರ ಪಾದಯಾತ್ರೆ ಯಶಸ್ವಿ, ನಾಳೆ ಬೆಳಗ್ಗೆ 6 ಗಂಟೆಯಿಂದ ಮುಂದುವರಿಕೆ KSRTC: ಇಂದು ಸಾರಿಗೆ ಸಚಿವರ ಭೇಟಿಯಾದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು KSRTC: ಸಾರಿಗೆ ನೌಕರರ ಪಾದಯಾತ್ರೆ ಯಶಸ್ವಿಗಾಗಿ ಬೇರೆ ಸಂಘಟನೆಗಳೂ ಸಾಥ್‌! ಆಟೋ ಗ್ಯಾಸ್ ಕೊರತೆ - ವದಂತಿಗಳಿಗೆ ಕಿವಿಗೊಡಬೇಡಿ - ಸಾರ್ವಜನಿಕರಿಗೆ ಕರೆ