CRIMENEWSನಮ್ಮಜಿಲ್ಲೆ

BMTC: ಕರ್ತವ್ಯದಲಿದ್ದಾಗಲೇ ಚಾಲಕನಿಗೆ ಹೃದಯಾಘಾತ ಸಾವು- ಪರಿಹಾರಕ್ಕೆ ಆಗ್ರಹಿಸಿ ಚಾಲಕರಿಂದ ಡಿಪೋ ಬಳಿ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಆನೇಕಲ್‌: ಕರ್ತವ್ಯದಲಿದ್ದಾಗಲೇ ಬಿಎಂಟಿಸಿ ಬಸ್ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯ ಬೆನ್ನಲ್ಲೇ ಬಿಎಂಟಿಸಿ ಡಿಪೋದಲ್ಲಿ ಸಹೋದ್ಯೋಗಿಗಳು ಬಸ್‌ಗಳನ್ನು ನಿಲ್ಲಿಸಿ ಪ್ರತಿಭಟನೆಗೆ ಇಳಿದಿದ್ದು, ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

32 ವರ್ಷದ ಚಾಲಕ ರಮೇಶ್ ಸಾವನ್ನಪ್ಪಿದ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್ ಚಾಲಕನಾಗಿದ್ದು ಎದೆ ನೋವು ಬರುತ್ತಿದ್ದಾಗಲೇ ಬಸ್ಸನ್ನು ನಿಲ್ಲಿಸಿ ಕುಸಿದು ಬಿದ್ದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಬಸ್ ಜಿಗಣಿಯಿಂದ ಬೊಮ್ಮಸಂದ್ರಕ್ಕೆ ಹೋಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಘಟನೆಯಿಂದ ಬೇಸತ್ತ ಬಿಎಂಟಿಸಿ ಜಿಗಣಿ ಡಿಪೋದ ಸಹೋದ್ಯೋಗಿಗಳು ಸಂಜೆಯಾಗುತ್ತಲೇ ಬಸ್ ಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡಿದ್ದಾರೆ. ಮೃತನ ಕುಟುಂಬಕ್ಕೆ ಕೂಡಲೇ ಸೂಕ್ತ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ತಡರಾತ್ರಿವರೆಗೂ ಧರಣಿ ನಡೆಸಿದ್ದಾರೆ. ಈ ಹಿಂದೆ ಒಬ್ಬ ಚಾಲಕ ಇದೇ ರೀತಿ ಮೃತಪಟ್ಟಿದ್ದು ಬಿಎಂಟಿಸಿ ಪರಿಹಾರ ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಪೋ ಮ್ಯಾನೇಜರ್ ಕೌಸರ್ ಬಾನು ಮೇಲೆ ಆಕ್ರೋಶ ವ್ಯಕ್ತಪಡಿಸಿದ ಚಾಲಕರು ತಿರುಗಿದ್ದು ಕಳೆದ ಬಾರಿ ಇದೇ ರೀತಿ ಮಲ್ಲಿಕಾರ್ಜುನ ಎಂಬುವರು ಮೃತಪಟ್ಟಾಗಲೂ ಅವರ ಕುಟುಂಬಕ್ಕೆ ಪರಿಹಾರ ನೀಡಿಲ್ಲ, ಅಲ್ಲದೆ ಕನಿಷ್ಠ ಇನ್ಸುರೆನ್ಸ್ ಸಹ ಬಂದಿಲ್ಲ.

ಇದೀಗ ರಮೇಶ್ ಕುಟುಂಬಕ್ಕು ಅದೇ ರೀತಿ ಅನ್ಯಾಯವಾಗುವ ಸಾಧ್ಯತೆ ಇದೆ. ಕೂಡಲೇ ಪರಿಹಾರ ಘೋಷಣೆ ಮಾಡಿ ಅವರಿಗೆ ನ್ಯಾಯ ಕೊಡಿಸುವಂತೆ ಸಿಬ್ಬಂದಿ ಒತ್ತಾಯಿಸಿದ್ದಾರೆ. ‌

ಆದರೆ ಪ್ರತಿಭಟನೆ ನಡೆಸಿ ನ್ಯಾಯ ಕೇಳಿದ್ದಕ್ಕೆ ಸಿಬ್ಬಂದಿಗೆ ಗೇಟ್‌ಪಾಸ್ ನೀಡಲು ಕೌಸರ್ ಬಾನು ಪ್ಲಾನ್‌ ಮಾಡಿದ್ದಾರೆ ಎಂಬ ಭಾವನೆಯಲ್ಲಿ ರಾತ್ರಿ ವರೆಗೂ ಧಿಕ್ಕಾರ ಕೂಗುತ್ತಾ ಧರಣಿ ನಡೆಸಿದರು ಚಾಲಕರು.

Megha
the authorMegha

Leave a Reply

error: Content is protected !!
Latest news
ಬೇಕಾಬಿಟ್ಟಿ ಗ್ಯಾರಂಟಿಗಳ ಕೊಡುವುದರಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ: ಸರ್ಕಾರಗಳಿಗೆ ಎಚ್ಚರಿಕೆ ನೀಡಿ ವಿತ್ತ... ಲಾರಿ ಓವರ್‌ಟೇಕ್‌ ಮಾಡುವ ವೇಳೆ ಚಾಲಕನ ನಿಯಂತ್ರ ಕಳೆದುಕೊಂಡ ಕಾರು ಪಲ್ಟಿ: ದಂಪತಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ, ಆತಂಕಬೇಡ: ಸಿಎಂ ಶಿವಕುಮಾರ್‌ ಭರವಸೆ KSRTC ಕನಕಪುರ ಘಟಕದಲ್ಲಿ ಚಾಲಕನ ಮೇಲೆ ಹಲ್ಲೆ ಮಾಡಿದ ನಾಲ್ವರ ಅಮಾನತು ಸಿಎಂ ತವರಲ್ಲೇ KSRTC ಚಾಲನಕನ ಮೇಲೆ ಹಲ್ಲೆ, ಗೂಂಡಾ ವರ್ತನೆ: ಡಿಎಂ ಎದುರೇ ಘಟಕದಲ್ಲಿ ರೌಡಿಸಂ ನೌಕರನ ವಿರುದ್ಧ ಸಾಬೀತಾಗಿರುವ ದುರ್ನಡತೆಗೆ ಹೋಲಿಸಿದರೆ ಆತನ ವಜಾ ಮಾಡಿರುವುದು ಕಾನೂನುಬಾಹಿರ,ಅತ್ಯಂತ ಕಠಿಣ ಶಿಕ್ಷೆ: ಸು... ತಜ್ಞರ ಸಲಹೆ ಪಡೆದು ಪಾಲಿಕೆ ಆಯವ್ಯಯ ಅನುದಾನ ಬಳಕೆ : GBA ದಕ್ಷಿಣ ಆಯುಕ್ತ BMTC: ಜೂನ್‌ 18ರೊಳಗೆ ನಿವೃತ್ತ ನೌಕರರು ಏ-2018 ರಿಂದ ಜು-2018ರವರೆಗಿನ ತುಟ್ಟಿಭತ್ಯೆ ಪಡೆಯಲು ಬ್ಯಾಂಕ್‌ ಖಾತೆ ವಿವರ ... ಕುಡಿಯುವ ನೀರು ಸಮಸ್ಯೆ ಉಂಟಾದಲ್ಲಿ ಅಧಿಕಾರಿಗಳೇ ಹೊಣೆ: ಸಚಿವ ಖಂಡ್ರೆ ಎಚ್ಚರಿಕೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಿಕ್ಷಣವೊಂದೇ ಆಯುಧ: ನ್ಯಾ. ಶ್ರೀಶೈಲ್ ಭೀಮಸೇನ ಬಾಗಡಿ