KKRTC ವಿಜಯಪುರ: ಪ್ರತಿಷ್ಠಿತ ಸಾರಿಗೆ ಕಲ್ಯಾಣ ರಥ ಸ್ವಂತಕ್ಕೆ ಬಳಸುತ್ತಿರುವ ಕೆಲ ಅಧಿಕಾರಿಗಳು- ಮೌನವಾಗಿರುವ ಡಿಸಿ ಅಮಾನತಿಗೆ ಯಾಕೂಬ್ ಆಗ್ರಹ
ನಾರಾಯಣಪ್ಪ ಕುರಬರ, ಯಾಕೂಬ ನಾಟಿಕಾರವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಪ್ರತಿಷ್ಠಿತ ಸಾರಿಗೆ ಕಲ್ಯಾಣ ರಥವನ್ನು ನಿಗಮದ ಕೆಲ ಅಧಿಕಾರಿಗಳು ಹಾಗೂ ನಿಗಮಕ್ಕೆ ಸಂಬಂಧ ಇಲ್ಲದ ಕೆಲ ಅಧಿಕಾರಿಗಳು ತನ್ನ ಮನೆಯ ಸ್ವತ್ತು ಎಂಬಂತೆ ಬೆಂಗಳೂರಿಗೆ ಹೋಗಿ ಬರಲು ಖಾಸಗಿಯಾಗಿ ನಮ್ಮ ಕಲ್ಯಾಣ ರಥವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಅಲ್ಪ ಸಂಖ್ಯಾತರ ಘಟಕದ ಯಾಕೂಬ ನಾಟಿಕಾರ ಹಾಗೂ STE ಯೂನಿಯನ್ ವಿಜಯಪುರ ವಿಭಾಗದ ಗೌರವ ಸಲಹೆಗಾರ ಗೋಪಾಲ ಎಂ.ಬಿರಾದಾರ ಆರೋಪಿಸಿದ್ದಾರೆ.

ಹೀಗೆ ಅಧಿಕಾರಿಗಳು ಸಾರಿಗೆ ಕಲ್ಯಾಣ ರಥವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದರು ಅದನ್ನು ಕಂಡು ಕಾಣದದಂತೆ ಮೌನವಾಗಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಾರಾಯಣಪ್ಪ ಕುರಬರ ಅವರು ಕತ್ಯವ್ಯ ಲೋಪ ಎಸಗಿರುವುದು ಸ್ಪಷ್ಟವಾಗಿದ್ದು ಡಿಸಿಯನ್ನು ಕೂಡಲೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ ಈ ಎಲ್ಲ ಅಧಿಕಾರಿಗಳನ್ನು ಚಾಲ್ತಿ ಸುತ್ತೋಲೆಗಳನ್ವಯ ತುರ್ತಾಗಿ ಅಮಾನತು ಮಾಡಿ ವಿಚಾರಣೆ ಕೈಗೊಂಡು ಸೇವೆಯಿಂದ ವಜಾ ಮಾಡಲು ಕೆಎಸ್‌ಆರ್‌ಟಿಸಿ ಎಂಡಿ ಅಕ್ರಮ್ ಪಾಷ ಅವರಿಗೆ ಆದೇಶಿಸಬೇಕು ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಸ್ ಶಾಲಿನಿ ರಜನಿಶ್ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಲ್ಲಿ ಮನವಿ ಮಾಡಿದ್ದಾರೆ.
ಇನ್ನು ಈಗ ಪ್ರಸ್ತುತ ಕೂಡ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಪ್ರತಿಷ್ಠಿತ ಈ ಸಾರಿಗೆ ಕಲ್ಯಾಣ ರಥವನ್ನು ಕೆಲವು ಅಧಿಕಾರಿಗಳು ಹಾಗೂ ನಮ್ಮ ಕಲ್ಯಾಣ ನಿಗಮಕ್ಕೆ ಸಂಬಂಧ ಇಲ್ಲದ ಕೆಲ ಅಧಿಕಾರಿಗಳು ತನ್ನ ಮನೆಯ ಸ್ವತ್ತು ಎಂಬಂತೆ ಬೆಂಗಳೂರಿಗೆ ಹೋಗಿ ಬರಲು ಖಾಸಗಿಯಾಗಿ ನಮ್ಮ ಕಲ್ಯಾಣ ರಥವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಹೀಗಾಗಿ ಇಂದಿನಿಂದಲೇ ಕಟ್ಟುನಿಟ್ಟಾದ ಆದೇಶ ಮಾಡಿ ಸ್ವಂತ ಕೆಲಸಕ್ಕೆ ಪ್ರತಿಷ್ಠಿತ ಸಾರಿಗೆ ಕಲ್ಯಾಣ ರಥವನ್ನು ಬೆಂಗಳೂರುಗೆ ಹೋಗಿ ಬರಲು ಬಳಿಸಿಕೊಳ್ಳಬಾರದರು ಎಂದು ನಿರ್ಬಂಧ ಮಾಡಬೇಕು ಹಾಗೂ ವೈಯಕ್ತಿಕ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಲು ಅವಕಾಶ ಮಾಡಿಕೊಟ್ಟ ನಿರ್ವಾಹಕರ ಮೇಲೂ ಕೂಡ ಸೂಕ್ತ ಹಾಗೂ ಕಟ್ಟುನಿಟ್ಟಾದ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ ಪ್ರತಿಷ್ಠಿತ ಸಾರಿಗೆಯನ್ನು ವೈಯಕ್ತಿಕವಾಗಿ ಬಳಕೆ ಮಾಡುವುದರಿಂದ ನಿಗಮಕ್ಕೆ ಆರ್ಥಿಕ ನಷ್ಟವಾಗುತ್ತಿರುವುದರಿಂದ ಖಾಸಗಿ ಕೆಲಸಕ್ಕೆ ಬಳಕೆ ಮಾಡಿಕೊಂಡಿರುವ ಅಧಿಕಾರಿಗಳಿಂದ ಈ ನಷ್ಟವನ್ನು ಬರಿಸಬೇಕು. ಈ ಬಗ್ಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕೂಡ ಆದೇಶ ಹೊರಡಿಸಬೇಕು ಎಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಅಲ್ಪ ಸಂಖ್ಯಾತರ ಘಟಕದ ಯಾಕೂಬ ನಾಟಿಕಾರ ಹಾಗೂ STE ಯೂನಿಯನ್ ವಿಜಯಪುರ ವಿಭಾಗದ ಗೌರವ ಸಲಹೆಗಾರ ಗೋಪಾಲ ಎಂ.ಬಿರಾದಾರ ಒತ್ತಾಯಿಸಿದ್ದಾರೆ.
ಇನ್ನು ಇದೇ ರೀತಿ ತಮ್ಮ ಅಧಿಕಾರಾವಧಿಯಲ್ಲಿ ನಾರಾಯಣಪ್ಪ ಕುರಬರ ಅವರು ವಿಭಾಗದಲ್ಲಿ ಮಾಡಿರುವ ಸಾಕಷ್ಟು ಭ್ರಷ್ಟಾಚಾರ, ಆಡಳಿತದ ದೂರುಪಯೋಗ, ಸ್ವಜನ ಪಕ್ಷಪಾತ ಹಾಗೂ ಇನ್ನಿತರರೆ ಆರೋಪಗಳ ಬಗ್ಗೆ ಈಗಾಗಲೇ ಸಿಎಂಗೆ ವಿವರಿಸಿ ಲಿಖಿತ ದೂರನ್ನು ನೀಡಲಾಗಿತ್ತು.
ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಯಂತ್ರಿ ಡಿ.ಕೆ.ಶಿವಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನಿಶ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸೇರಿದಂತೆ ಇಲಾಖೆಯ ಎಂಡಿ, ಅಧ್ಯಕ್ಷರಿಗೂ ಸಹ ದೂರು ಸಲ್ಲಿಸಿದ್ದು, ಈ ದೂರಿನ ಆಧಾರದ ಮೇಲೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ಮೂವರು ಅಧಿಕಾರಿಗಳುಳ್ಳ ಒಂದು ವಿಶೇಷ ತನಿಖಾ ತಂಡ ರಚನೆ ಮಾಡಲಾಗಿತ್ತು.
ಈ ತನಿಖಾ ತಂಡ ಸುಮಾರು 11 ತಿಂಗಳುಗಳ ವರೆಗೆ ತನಿಖೆ ಮಾಡಿ ಆರೋಪಗಳು ರುಜುವಾತು ಆಗಿರುವ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ನಾರಾಯಣಪ್ಪ ಕುರಬರ ವಿರುದ್ಧ ಸೂಕ್ತ ಕ್ರಮಕ್ಕಾಗಿ ವರದಿಯನ್ನೂ ಸಲ್ಲಿಸಿರುವ ಬಗ್ಗೆ ಹಾಗೂ ಈ ವರದಿಯನ್ನು ವ್ಯವಸ್ಥಾಪಕ ನಿರ್ದೇಶಕರು ಮುಂದಿನ ಸೂಕ್ತ ಕ್ರಮಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೇಂದ್ರ ಕಚೇರಿ ಬೆಂಗಳೂನಲ್ಲಿರುವ ವ್ಯವಸ್ಥಾಪಕ ನಿರ್ದೇಶಕರಿಗೆ ಕಳುಹಿಸಿರುವ ವಿಷಯ ನಮಗೆ ತಿಳಿದು ಬಂದಿದೆ ಎಂದು ಹೇಳಿದ್ದಾರೆ.
ಹೀಗಾಗಿ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಅತಿ ಭ್ರಷ್ಟ ಅಧಿಕಾರಿಯಾಗಿದ್ದು, ತನ್ನ ಅಧಿಕಾರದ ಅವಧಿಯಲ್ಲಿ ಭಾರಿ ಭ್ರಷ್ಟಾಚಾರ ಆಡಳಿತ ಮಾಡಿ ಸಂಸ್ಥೆ ಹಾಗೂ ಸಂಸ್ಥೆ ನೌಕರರನ್ನು ದೂರುಪಯೋಗ ಪಡಿಸಿಕೊಂಡಿದ್ದಾರೆ. ಅಲ್ಲದೆ ಸ್ವಜನ ಪಕ್ಷಪಾತ ಮಾಡಿದ್ದಾರೆ.
ಇನ್ನು ಈ ಹಿಂದೆಯೂ ಇವರು ಮಾಡಿರುವ ಭ್ರಷ್ಟಾಚಾರದ ಆರೋಪದ ಮೇಲೆ ಇವರನ್ನು ಹುದ್ದೆ ತೊರಿಸದೇ ವಿಜಯಪುರ ವಿಭಾಗದಿಂದ ವರ್ಗಾವಣೆ ಮಾಡಲಾಗಿತ್ತು. ಆದರೆ, ಈಗ ಹೇಗೋ ಗೊತ್ತಿಲ್ಲ ಮತ್ತೆ ವಿಭಾಗಕ್ಕೆ ಒಕ್ಕರಿಸಿದ್ದಾರೆ. ಆದ್ದರಿಂದ, ವಿಜಯಪುರ ವಿಭಾಗದ ಭ್ರಷ್ಟ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಅವರ ಭ್ರಷ್ಟಾಚಾರ, ಅಡಳಿತದ ದೂರುಪಯೊಗ, ಸ್ವಜನ ಪಕ್ಷಪಾತ ಹಾಗೂ ಇನ್ನಿತರರೆ ಆರೋಪಗಳ ಮೇಲೆ ಯಾವುದೇ ರಾಜಕೀಯ ಹಾಗೂ ಇನ್ಯಾವುದೇ ಒತ್ತಡಕ್ಕೆ ಮಣಿಯದೇ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Related









