KKRTC ವಿಜಯಪುರ: ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಭ್ರಷ್ಟಾಚಾರ ಸಾಬೀತು- ಆದರೂ ಕ್ರಮ ತೆಗೆದುಕೊಳ್ಳದ ಎಂಡಿಗಳು
ತನಿಖಾ ತಂಡದ ಅಧಿಕಾರಿಗಳು ಸುಮಾರು 11 ತಿಂಗಳುಗಳ ವರೆಗೆ ತನಿಖೆ ನಡೆಸಿ ಆರೋಪಗಳು ರುಜುವಾತು ಆಗಿರುವ ಬಗ್ಗೆ ಕೆಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದಾರೆ ಆದರೂ ಈವರೆಗೂ ಕಾನೂನು ಕ್ರಮ ತೆಗೆದುಕೊಂಡಿಲ್ಲ. ಪೂರ್ಣ ಅಧಿಕಾರವಿರುವ ಕೆಎಸ್ಆರ್ಟಿಸಿ ಎಂಡಿ ಕೂಡ ಮೌನವಾಗಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ
ವಿಜಯಪುರ ಸಾರಿಗೆ ಡಿಸಿ ಕುರಬರವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಾರಾಯಣಪ್ಪ ಕುರಬರ ಅವರು ತಮ್ಮ ಅಧಿಕಾರಾವಧಿಯಲ್ಲಿ ವಿಜಯಪುರ ವಿಭಾಗದಲ್ಲಿ ಮಾಡಿರುವ ಸಾಕಷ್ಟು ಭ್ರಷ್ಟಾಚಾರ, ಆಡಳಿತದ ದೂರುಪಯೋಗ, ಸ್ವಜನ ಪಕ್ಷಪಾತ ದೂರಾಡಳಿತನ, ಸಂಸ್ಥೆಯ ಸುಮಾರು 2 ಕೋಟಿ ರೂ.ವರೆಗೆ ಬರುವ ಆದಾಯವನ್ನು ನಷ್ಟ ಮಾಡಿದ್ದಾರೆ.

ಇನ್ನು ಈ ಬಗ್ಗೆ ಹಾಗೂ ಇನ್ನಿತರರೆ ಆರೋಪಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಯಂತ್ರಿ ಡಿ.ಕೆ.ಶಿವಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಾರಿಗ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಇನ್ನಿತರ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದೆವು ಈ ದೂರಿನ ಆಧಾರದ ಮೇಲೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಮೂವರು ಅಧಿಕಾರಿಗಳುಳ್ಳ ಒಂದು ವಿಶೇಷ ತನಿಖಾ ತಂಡ ರಚನೆ ಆಗಿತ್ತು.
ಈ ತನಿಖಾ ತಂಡದ ಅಧಿಕಾರಿಗಳು ಸುಮಾರು 11 ತಿಂಗಳುಗಳ ವರೆಗೆ ತನಿಖೆ ನಡೆಸಿ ಆರೋಪಗಳು ರುಜುವಾತು ಆಗಿರುವ ಬಗ್ಗೆ ಕೆಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದಾರೆ.
ಈ ವರದಿಯನ್ನು ಕೆಕೆಆರ್ಟಿಸಿ ಎಂಡಿ ಅವರು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಮುಂದಿನ ಸೂಕ್ತ ಕ್ರಮಕ್ಕಾಗಿ ಸಲ್ಲಿಸಿದ್ದಾರೆ ಎಂಬ ವಿಷಯ ನನಗೆ ತಿಳಿದು ಬಂದಿದೆ. ಆದರೆ ಕೆಎಸ್ಆರ್ಟಿಸಿ ಎಂಡಿ ಅಕ್ರಮ್ ಪಾಷ ಅವರು ಕೆಲ ರಾಜಕೀಯ ವ್ಯಕ್ತಿಗಳ ಆದೇಶಕ್ಕೆ ಮಣಿದು ಅವರ ಮೇಲೆ ಕ್ರಮ ಜರುಗಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಕೇವಲ 24 ದಿನಗಳಲ್ಲಿ ನಾರಾಯಣಪ್ಪ ಕುರಬರ ಸೇವೆಯಿಂದ ನಿವೃತ್ತಿ ಆಗುತ್ತಿದ್ದು. ಇಷ್ಟೆಲ್ಲ ಭ್ರಷ್ಟಾಚಾರ ಮಾಡಿದರೂ ಇವರ ವಿರುದ್ಧ ಕ್ರಮತೆಗೆದುಕೊಳ್ಳುತ್ತಿಲ್ಲ. ಇನ್ನು ಎಂಡಿ ಮೇಲೆ ಈ ಡಿಸಿ ಯಾರಿಂದ ಒತ್ತಡ ಹೇರಿರಬಹುದು ಎಂಬುವುದು ಇದರಿಂದಲೇ ತಿಳಿಯುತ್ತಿದೆ.
ಆದ್ದರಿಂದ KKRTC ಹಾಗೂ KSRTC MD ಅವರು ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಸಂಸ್ಥೆಗೆ ಆರ್ಥಿಕ ನಷ್ಟವನ್ನುಂಟು ಮಾಡಿರುವ ಹಾಗೂ ವಿನಾಕಾರಣ ನೌಕರರಿಗೆ ಕಿರುಕುಳ ನೀಡಿರುವ ಈತನನ್ನು ಅಮಾನತು ಮಾಡಬೇಕು ಎಂದು ಯಾಕೂಬ್ ನಾಟೀಕಾರ ಒತ್ತಾಯಿಸಿದ್ದಾರೆ.
Related









