KSRTC: ಸರ್ಕಾರದ ಸಾಧನ ಸಮಾವೇಶದಲ್ಲಿ ಕಪ್ಪು ಬಾವುಟ, ಕಪ್ಪು ಪಟ್ಟಿ ಧರಿಸಿ ಸಾರಿಗೆ ನೌಕರರ ಪ್ರತಿಭಟನೆ !?
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಕೇಂದ್ರ ಕಚೇರಿ, ವಿಭಾಗ ಕಚೇರಿ, ಘಟಕಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಅಧಿಕಾರಿಗಳು, ಸಿಬ್ಬಂದಿ, ನೌಕರರು ತಮ್ಮ ಕುಟುಂಬದವರನ್ನು ಕಳುಹಿಸುವ ಮೂಲಕ ಸರ್ಕಾರಕ್ಕೆ ನಮ್ಮ ಶಕ್ತಿ ಏನು ಎಂಬುದನ್ನು ತೋರಿಸಬೇಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.

ಬೆಂಗಳೂರು: ತುಮಕೂರಿನಲ್ಲಿ ಇದೇ ಮೇ 19ರಂದು ನಡೆಯುವ ಸರ್ಕಾರದ ಸಾಧನ ಸಮಾವೇಶಕ್ಕೆ ನಿಮ್ಮ ಪತ್ನಿ/ ಪತಿ, ಮಗಳು/ ಮಕ್ಕಳನ್ನು ಕಳುಹಿಸಿ ಕಪ್ಪು ಬಾವುಟ, ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುವ ಮೂಲಕ ನಮ್ಮ ವೇತನ ಹೆಚ್ಚಳದಲ್ಲಿ ಮಾಡಿರುವ ಅನ್ಯಾಯದ ವಿರುದ್ಧ ಆಕ್ರೋಶ ಹೊರಹಾಕಿದೆ ಎಂದು ನೌಕರರು ಕರೆ ನೀಡುತ್ತಿದ್ದಾರೆ.

ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಕೇಂದ್ರ ಕಚೇರಿ, ವಿಭಾಗ ಕಚೇರಿ, ಘಟಕಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಅಧಿಕಾರಿಗಳು, ಸಿಬ್ಬಂದಿ, ನೌಕರರು ತಮ್ಮ ಕುಟುಂಬದವರನ್ನು ಕಳುಹಿಸುವ ಮೂಲಕ ಸರ್ಕಾರಕ್ಕೆ ನಮ್ಮ ಶಕ್ತಿ ಏನು ಎಂಬುದನ್ನು ತೋರಿಸಬೇಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಇತ್ತ ಅಧಿಕಾರಿಗಳು ನಮಗೆ ಯಾರೂ ಆಹ್ವಾನ ನೀಡಿಲ್ಲ, ನಾವು ದೇವರ ಮಕ್ಕಳು ಮುಷ್ಕರದಲ್ಲಿ ಭಾಗಿಯಾಗಲು ಬರುವುದಿಲ್ಲ ಎಂಬ ಕಾಲ್ಪನಿಕ ಲೋಕದಲ್ಲೇ ಅಧಿಕಾರಿಗಳು ಹಾಗೂ ಕೇಂದ್ರ ಕಚೇರಿ ಸಿಬ್ಬಂದಿಗಳು ಇದ್ದೀರಿ. ಈಗ ಸಮಯ ಬಂದಿದೆ ಸ್ವಲ್ಪ ಜ್ಞಾನೋದಯವಾಗಿ ಸರ್ಕಾರಕ್ಕೆ ನಿಮ್ಮ ಬೇಡಿಕೆಯನ್ನು ಈ ಮೂಲಕ ಸಲ್ಲಿಸಲು ಮುಂದಾಗಿ ಎಂದು ನೌಕರರು ಕರೆ ನೀಡಿದ್ದಾರೆ.
ಹೌದು! ಸಾರಿಗೆ ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಮಗೆ ಆಹ್ವಾನ ಇಲ್ಲ ಎಂಬ ಕಾರಣ ನೀಡದೆ ಮೇ 19ರಂದು ನಡೆಯುವ ಸಾಧನ ಸಮಾವೇಶಕ್ಕೆ ನಿಮ್ಮ ಪತ್ನಿ/ಪತಿ, ಮಗಳು/ಮಕ್ಕಳು ರವರನ್ನು ಕಳುಹಿಸಿ ಕಪ್ಪು ಬಾವುಟ, ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುವ ಮೂಲಕ ನಿಮ್ಮ ಆಕ್ರೋಶವನ್ನು ಹೊರಹಾಕಿ.
ನಿಮಗೆ ಇದಕ್ಕಿಂತ ಸದಾವಕಾಶ ಮತ್ತೊಮ್ಮೆ ಸಿಗುವುದಿಲ್ಲ. ಇಷ್ಟು ಮಾಡಲು ಸಾಧ್ಯವಿಲ್ಲದಿದ್ದರೆ ನಿಮ್ಮಂತಹ ಹೇಡಿಗಳು ಯಾರೂ ಇಲ್ಲ. ಸಾರಿಗೆ ನೌಕರರ ಶೋಷಣೆಗೆ ತಕ್ಕ ಪಾಠ ಕಲಿಸಲು ಸದಾವಕಾಶ. ಸದುಪಯೋಗಪಡಿಸಿಕೊಳ್ಳಿ. ಸಮಸ್ತ ಸಾರಿಗೆ ಕುಟುಂಬ ಎಂದು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಶೇರ್ ಆಗುತ್ತಿದೆ.
Related









