NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರ ತಂತ್ರ: ಬಸ್ ಸಂಚಾರ ನಿಲ್ಲಿಸಿ ಮುಷ್ಕರಕ್ಕೆ ಮುಂದಾಗಿರುವ ನೌಕರರಿಗೆ ಶಾಕ್ !

ಸಾರಿಗೆ ನೌಕರರಿಗೆ ಪರ್ಯಾಯವಾಗಿ ಖಾಸಗಿ ಬಸ್​ ಚಾಲಕ ನೇಮಕ ಸಾಧ್ಯತೆ. ಸರ್ಕಾರಿ ಬಸ್ ಬದಲಾಗಿ ಖಾಸಗಿ ಬಸ್​ಗಳ ಕಾರ್ಯಾಚರಣೆಗೆ ಪ್ಲಾನ್. ಈಗಾಗಲೇ ಖಾಸಗಿ ಬಸ್ ಮಾಲೀಕರ ಜತೆ ಚರ್ಚೆ. ಇನ್ನು ವಿವಿಧ ಬೇಡಿಕೆಗೆ ಆಗ್ರಹಿಸಿ ಮೇ 19 ರಿಂದ ಬಸ್ ನಿಲ್ಲಿಸಿ ಮುಷ್ಕರ ಮಾಡಿದ್ರೆ ಖಾಸಗಿ ಬಸ್ಸುಗಳು ರಸ್ತೆಗೆ ಇಳಿಯಲಿವೆ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರು ಹಾಗೂ ರಾಜ್ಯ ಸರ್ಕಾರ ನಡುವಿನ ಸಮರ ಮುಗಿಯೋ ಲಕ್ಷಣವೇ ಕಾಣಿಸುತ್ತಿಲ್ಲ. ಸಾರಿಗೆ ನೌಕರರ ವೇತನ ಹೆಚ್ಚಳ ಕುರಿತ ಸರಕಾರದ ಆದೇಶವನ್ನು ಕರ್ನಾಟಕ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ತಿರಸ್ಕರಿಸಿದ್ದು, ಈಗಾಗಲೇ ಘೋಷಿಸಿರುವಂತೆ ಮೇ 19 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದೆ.

ಇನ್ನು ಬಸ್ ಸಂಚಾರ ನಿಲ್ಲಿಸಿ ಮುಷ್ಕರಕ್ಕೆ ಮುಂದಾಗಿರುವ ಸಾರಿಗೆ ನೌಕರರಿಗೆ ಶಾಕ್ ಕೊಡಲು ಸರ್ಕಾರ ಕೂಡ ಮೆಗಾ ಪ್ಲಾನ್ ಮಾಡ್ತಿದೆ. ಅದು ರಾಜ್ಯ ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರ ಪ್ಲಾನ್ ಮಾಡಿದ್ದು, ಮೇ 19 ರಿಂದ ನೌಕರರು ಬಸ್ ನಿಲ್ಲಿಸಿ ಮುಷ್ಕರಕ್ಕೆ ಮುಂದಾದ್ರೆ ಸರ್ಕಾರ…?

ಸಾರಿಗೆ ನೌಕರರಿಗೆ ಪರ್ಯಾಯವಾಗಿ ಖಾಸಗಿ ಬಸ್​ ಚಾಲಕ ನೇಮಕ ಸಾಧ್ಯತೆ. ಸರ್ಕಾರಿ ಬಸ್ ಬದಲಾಗಿ ಖಾಸಗಿ ಬಸ್​ಗಳ ಕಾರ್ಯಾಚರಣೆಗೆ ಪ್ಲಾನ್. ಈಗಾಗಲೇ ಖಾಸಗಿ ಬಸ್ ಮಾಲೀಕರ ಜತೆ ಚರ್ಚೆ. ಇನ್ನು ವಿವಿಧ ಬೇಡಿಕೆಗೆ ಆಗ್ರಹಿಸಿ ಮೇ 19 ರಿಂದ ಬಸ್ ನಿಲ್ಲಿಸಿ ಮುಷ್ಕರ ಮಾಡಿದ್ರೆ ಖಾಸಗಿ ಬಸ್ಸುಗಳು ರಸ್ತೆಗೆ ಇಳಿಯಲಿವೆ.

ಈಗಾಗಲೇ 2000 ಸಾವಿರ ಬಸ್ ನೀಡುವಂತೆ ಖಾಸಗಿ ಬಸ್ ಮಾಲೀಕರ ಜತೆ ಸರಕಾರ ಮಾತುಕತೆ ನಡೆಸಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಮಾಲೀಕರು ಬಸ್ ಓಡಾಟವನ್ನೇ ನಿಲ್ಲಿಸಿದ್ದರು. ಇದೀಗ ಮತ್ತೆ ರಸ್ತೆಗಿಳಿಯಲು ಮುಂದಾಗಿವೆ.

ಆಂಧ್ರ, ತಲಂಗಾಣ ಸಾರಿಗೆ ನಿಗಮ ನೌಕರರ ಬಳಕೆ?: ಅಷ್ಟೇ ಅಲ್ಲದೇ ಆಂಧ್ರ, ತೆಲಂಗಾಣ ಸಾರಿಗೆ ನಿಗಮಗಳ ನೌಕರರ ಮೂಲಕ ಬಸ್ ಓಡಿಸಲು ಸರ್ಕಾರ ಮುಂದಾಗಿದೆ. ಸಾರಿಗೆ ನೌಕರರು ಬಸ್ ಸಂಚಾರ ಬಂದ್ ಮಾಡಲು ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆಗೆ ಇಳಿಯಲು ಸಜ್ಜಾಗುತ್ತಿದ್ದಂತೆ, ಸರ್ಕಾರ ಹೋರಾಟಕ್ಕೆ ಸೆಡ್ಡುವೊಡೆಯಲು ಮುಂದಾಗಿದೆ ಎನ್ನಲಾಗುತ್ತಿದೆ.

ಮಾತುಕತೆ ವಿಫಲ, ಮುಷ್ಕರಕ್ಕೆ ಸಜ್ಜು: ಬಿಎಂಟಿಸಿ, ಕೆಎಸ್‌ಆರ್ಟಿಸಿ ಸೇರಿ ನಾಲ್ಕೂ ಸಾರಿಗೆ ನಿಗಮ ಬಸ್ ಮೇ 19ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ನೌಕರರ ಜತೆ ಮಾತುಕತೆ ನಡೆಸಿ ಬೇಡಿಕೆ ಈಡೇರಿಸಲು ಸರ್ಕಾರ ವಿಫಲವಾಗಿದೆ. ಹೀಗಾಗಿ ಅನ್ಯ ಮಾರ್ಗವಾಗಿ ಬಸ್ ಓಡಿಸಲು ಸರ್ಕಾರ ಮುಂದಾಗಿದೆ.

ಸಾರಿಗೆ ನೌಕರರು-ಸರ್ಕಾರ: ರಾಜ್ಯದಲ್ಲಿ ಸರ್ಕಾರಿ ಬಸ್ ಬದಲಾಗಿ ಖಾಸಗಿ ಬಸ್ ಓಡಿಸಲು ಸರ್ಕಾರ ಚರ್ಚೆ ನಡೆಸಿದೆ ಎನ್ನಲಾಗುತ್ತಿದೆ. ಸರ್ಕಾರಿ ಬಸ್ ನಿಲ್ಲಿಸಿದ್ರೆ ರಾಜ್ಯದ ಜನರಿ ಸಂಚಾರಕ್ಕೆ ದೊಡ್ಡ ಪೆಟ್ಟು ಬೀಳಲಿದೆ. ಹೀಗಾಗಿ ಮೇ 19 ರಿಂದ ಖಾಸಗಿ ಬಸ್ ಕಾರ್ಯಾಚರಣೆಗೆ ಸರ್ಕಾರ ಮುಂದಾಗಿದೆ.

ನೌಕರರು ಕರ್ತವ್ಯಕ್ಕೆ ಬಾರದಿದ್ರೆ ಪರ್ಯಾಯ ಮಾರ್ಗ ಹುಡುಕಲು ಚಿಂತನೆ ನಡೆಸಿದೆ. ಶೇ.12.5 ರಷ್ಟು ಮಾತ್ರ ವೇತನ ಹೆಚ್ಚಳ ಮಾಡೋಕೆ ಸಾಧ್ಯ ಎಂದು ಸರ್ಕಾರ ಹೇಳುತ್ತಿದ್ದು, ನೌಕರರ ಸಮಿತಿ ಒಪ್ಪುತ್ತಿಲ್ಲ ಹೀಗಾಗಿ ರಾಜ್ಯ ಸರ್ಕಾರ ಹಾಗೂ ಸಾರಿಗೆ ನೌಕರರ ಸಮರ ಮುಂದುವರೆದಿದೆ.

Megha
the authorMegha

Leave a Reply

error: Content is protected !!
Latest news
ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರ ತಂತ್ರ: ಬಸ್ ಸಂಚಾರ ನಿಲ್ಲಿಸಿ ಮುಷ್ಕರಕ್ಕೆ ಮುಂದಾಗಿರುವ ನೌಕರರಿಗೆ ಶಾಕ್ ... KSRTC: ಸರ್ಕಾರದ ಸಾಧನ ಸಮಾವೇಶದಲ್ಲಿ ಕಪ್ಪು ಬಾವುಟ, ಕಪ್ಪು ಪಟ್ಟಿ ಧರಿಸಿ ಸಾರಿಗೆ ನೌಕರರ ಪ್ರತಿಭಟನೆ !? BMTC ನೌಕರರಿಗೆ ಮೇ 19ರಂದು 11 ತಿಂಗಳ ಹಿಂಬಾಕಿ ಪಾವತಿಗೆ ಕ್ರಮ- ಎಂಡಿ ಆದೇಶಕ್ಕೂ ಕಿಮ್ಮತ್ತಿಲ್ಲದರ ಪರಿಣಾಮ ಈ ವಿಳಂಬ! ಮೇ 20ರಿಂದ ಸಾರಿಗೆ ನೌಕರರ ಮುಷ್ಕರ ಮಾಡೇ ತೀರುತ್ತೇವೆ: ವಿಜಯಭಾಸ್ಕರ್ KSRTC: ಮೇ 20 ರಿಂದ ಹಮ್ಮಿಕೊಂಡಿರುವ ಮುಷ್ಕರಕ್ಕೆ ಬಿಎಂಟಿಸಿ-ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘ ಬೆಂಬಲ ವಿಜಯಪಥ ವರದಿಗೆ ಎಚ್ಚೆತ್ತ NWKRTC: ನೌಕರರಿಗೆ 11ತಿಂಗಳ ಹಿಂಬಾಕಿ ಪಾವತಿಯಾಗಿದೆ- ಸ್ಪಷ್ಟನೆ ನೀಡಿ ಸಿಬ್ಬಂದಿ ಗೊಂದಲ ನ... ಸಾರಿಗೆ ನೌಕರರಿಗೆ ಶೇ.12.5 ರಷ್ಟು ವೇತನ ಹೆಚ್ಚಳ ತೀವ್ರ ಖಂಡನೀಯ: ನೌಕರರ ಹಕ್ಕಿಗಾಗಿ ಹೋರಾಟಕ್ಕೆ ಸಿದ್ಧ: ಬೀದರ್‌ ಬಿಎಂ... ಚಿನ್ನ ಇಂದು ಬಲುಭಾರ: 1ಗ್ರಾಂ 22K ಚಿನ್ನದ ಬೆಲೆ ₹1275 ಏರಿಕೆ, ಬೆಳ್ಳಿ ₹20 ಸಾವಿರ ಏರಿಕೆ NWKRTC: ನೌಕರರಿಗೆ 11ತಿಂಗಳ ಬದಲಿಗೆ 8 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಕಿದ್ದಾರಾ? ಗೊಂದಲದಲ್ಲಿ ಸಿಬ್ಬಂದಿ! "ನಷ್ಟದ ನೆಪದಲ್ಲಿ ವೇತನ ತಡೆಹಿಡಿಯಲು" ಅವಕಾಶ ಇಲ್ಲ: ಭಾರತ ಸಂವಿಧಾನ