KSRTC ಜಂಟಿ ಸಮತಿ ಒಳೊಪ್ಪಂದ ಬಯಲು; 2.5 ಕೋಟಿ ರೂ.ಗೆ ಸೇಲಾದ ನೀಚರು, ನೌಕರರ ದಾರಿತಪ್ಪಿಸುತ್ತಿರುವುದರ ಹಿಂದಿನ ಮರ್ಮ ತಿಳಿದರೆ ನೀವು ಶಾಕ್ ಆಗ್ತೀರಾ!
ಈ ನೀಚರು ನೌಕರರಿಗೆ ಏನಾದರೂ ಆಗಲಿ ನಮ್ಮ ಒಳೊಪ್ಪಂದದಂತೆ ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಲೇ ಬೇಕು ಎಂದು ಮಧ್ಯರಾತ್ರಿಯಲ್ಲೆಲ್ಲ ಹೋಗಿ ಕದತಟ್ಟಿದ್ದಾರೆ. ಅಲ್ಲದೆ ಈ ನೌಕರರ ಪರ ಎನ್ನುವ ಇವರು 2.5ಕೋಟಿ ರೂಪಾಯಿಗೆ ಸೇಲ್ ಆಗಿದ್ದು, ಈಗ ಪ್ರಸ್ತುತ ಸರ್ಕಾರ ನೌಕರರಿಗೆ ಶೇ.12.5ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದ ಬಳಿಕ ಇವರಿಗೆ ಸೇರಬೇಕಿದ್ದ 2.5 ಕೋಟಿ ರೂಪಾಯಿ ಬಂದಿಲ್ಲ.

ಬೆಂಗಳೂರು: ಸಾರಿಗೆ ನೌಕರರನ್ನು ಕಾರ್ಮಿಕರು ಎಂದು ಬಿಂಬಿಸಿ ತಮ್ಮ ಜೇಬು ಅಲ್ಲಲ್ಲ ಬ್ಯಾಗ್ ತುಂಬಿಸಿಕೊಳ್ಳಲು ಸರ್ಕಾರ ಮತ್ತು ಸಾರಿಗೆ ಆಡಳಿತ ಮಂಡಳಿ ಜತೆಗೆ ಒಳ ಒಪ್ಪಂದ ಮಾಡಿಕೊಂಡು ಬಂದ ಜಂಟಿ ಸಂಘಟನೆಯ ನೀಚ ಮುಖಂಡ ಒಳ ಸಂಚು, ಸಾರಿಗೆ ನೌಕರರನ್ನು ಬೀದಿಪಾಲು ಮಾಡುವ ಪಿತೂರಿ ಮಾಡುತ್ತರಿವುದು ಅದೇ ಜಂಟಿಯ ಮುಖಂಡರೊಬ್ಬರಿಂದ ಬಟಾಬಯಲಾಗಿರುವುದು ನಿಜಕ್ಕೂ ಸತ್ಯ ಹೊರಬಂದಂತಾಗಿದೆ.

ಇನ್ನು ಪ್ರಮುಖವಾಗಿ ಹೇಳಬೇಕು ಎಂದರೆ ಈ ನೀಚರು ನೌಕರರಿಗೆ ಏನಾದರೂ ಆಗಲಿ ನಮ್ಮ ಒಳೊಪ್ಪಂದದಂತೆ ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಲೇ ಬೇಕು ಎಂದು ಮಧ್ಯರಾತ್ರಿಯಲ್ಲೆಲ್ಲ ಹೋಗಿ ಕದತಟ್ಟಿದ್ದಾರೆ. ಅಲ್ಲದೆ ನಾವು ನೌಕರರ ಪರ ಎನ್ನುವ ಇವರು 2.5ಕೋಟಿ ರೂಪಾಯಿಗೆ ಸೇಲ್ ಆಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ, ಈಗ ಪ್ರಸ್ತುತ ಸರ್ಕಾರ ನೌಕರರಿಗೆ ಶೇ.12.5ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದ ಬಳಿಕ ಇವರು ಸೇಲ್ ಆಗಿದ್ದರೂ ಕೂಡ ಆ ಸೇರಬೇಕಿದ್ದ 2.5 ಕೋಟಿ ರೂ. ಇನ್ನೂ ಬಂದಿಲ್ಲ…!
ಹೀಗಾಗಿ ಈಗ ನೌಕರರನ್ನು ಮುಷ್ಕರದ ನೆಪದಲ್ಲಿ ಮುಂದೆ ಬಿಟ್ಟು ನಮಗೆ ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಹಾಗೂ 2024ರ ಜನವರಿ 1ರಿಂದಲೇ ಅದು ಜಾರಿಯಾಗಬೇಕು ಜತೆಗೆ 38 ತಿಂಗಳ ಹಿಂಬಾಕಿ ಕೊಡಲೇಬೇಕು ಎಂದು ನೌಕರರನ್ನು ಯಾಮಾರಿಸಿ ಮುಷ್ಕರಕ್ಕೆ ದೂಡಿ ಅವರ ವಿರುದ್ಧ ಪೊಲೀಸ್ ಇತರೆ ಪ್ರಕರಣಗಳನ್ನು ದಾಖಲಿಸಿ ಬಳಿಕ ತಮ್ಮ ಬ್ಯಾಗ್ ತುಂಬಿಸಿಕೊಂಡು ಒಂದು ಕುಂಟು ನೆಪ ಹೇಳಿ ಮುಷ್ಕರ ಕೈ ಬಿಟ್ಟಿದ್ದೇವೆ ಎಂದು ಜಾರಿಕೊಳ್ಳುವ ಕುತಂತ್ರ ಮಾಡಿಕೊಂಡಿದ್ದಾರೆ ಈ ಜಂಟಿಯ ನೀಚರು ಎಂಬ ಬಗ್ಗೆ ಬಲವಾದ ಆರೋಪ ಅವರೊಳಗಿನ ಮುಖಂಡರಿಂದಲೇ ಬಹಿರಂಗವಾಗಿದೆ.
ಅಷ್ಟೇ ಅಲ್ಲ ಈಗ ಏನು ಮೇ 20ರಂದು ಮುಷ್ಕರ ಮಾಡಲೇಬೇಕು ಎಂದು ಡಿಪೋಗಳಿಗೆ ಹೋಗಿ ನೌಕರರನ್ನು ಕರೆಯುತ್ತಿದ್ದಾರೋ ಇವರಿಗೆ ಪ್ರಜ್ಞಾವಂತ ನೌಕರರು ಉಗಿದು ಉಪ್ಪಾಕಿ ಕಳುಹಿಸುತ್ತಿದ್ದಾರೆ. ಇಲ್ಲಿ ನೌಕರರನ್ನು ಮಾತ್ರ ಮುಷ್ಕರಕ್ಕೆ ಬನ್ನಿ ಎಂದು ಡಿಪೋ ಗೇಟ್ಗಳಲ್ಲಿ ಭಾಷಣ ಮಾಡುವ ಇವರು ಏಕೆ ಅಧಿಕಾರಿಗಳನ್ನು ಕರೆಯುವುದಿಲ್ಲ ಹೇಳಿ?
ಏಕೆಂದರೆ ಇವರಿಗೆ ಪ್ರಜ್ಞಾವಂತ ಅಧಿಕಾರಿಗಳಿಂದ ಮೂರು ಕಾಸಿನ ಪ್ರಯೋಜನವು ಇಲ್ಲ ಜತೆಗೆ ಇವರ ಬ್ಯಾಗ್ ಕೂಡ ತುಂಬುವುದಿಲ್ಲ. ಹೀಗಾಗಿ ನೌಕರರನ್ನು ಮಾತ್ರ ಅದೂ ಕೂಡ ಡಿಪೋ ಗೇಟ್ನಲ್ಲಿ ನಿಂತು ಕರೆಯುತ್ತಾರೆ ಎಂದರೆ ಇವರ ಲೇವಲ್ ಏನು ಎಂದು ತಿಳಿದುಕೊಳ್ಳಿ ಇವರು ಬೀದಿಯಲ್ಲಿ ಬಂದು ಹೋಗುವ ಸಂಸ್ಥೆಗೆ ಸಂಬಂಧವಿಲ್ಲದ ಜನರು ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಇನ್ನು ಈಗಲು ನೌಕರರು ಇವರ ರೋಷಾವೇಷದ ಮಾತಿಗೆ ಮರುಳಾಗಿ ಹೋದರೆ ನಿಮ್ಮ ಕುಟುಂಬ ಬೀದಿಗೆ ಬರುವುದು ಗ್ಯಾರಂಟಿ. ಹೀಗಾಗಿ ಯೋಚಿಸಿ ಮುಂದಿನ ಹೆಜ್ಜೆ ಇಡಬೇಕಿದೆ. ಅಲ್ಲದೆ ಅವರು ನಿಮ್ಮನ್ನು ಉದ್ಧಾರ ಮಾಡಿರುವುದಕ್ಕಿಂತಲೂ ಹೆಚ್ಚಾಗಿ ಹಾಳು ಮಾಡಿರುವುದೇ ಜಾಸ್ತಿ.
ಅಲ್ಲದೆ ಒಕ್ಕೂಟದವರು ಸರ್ಕಾರವೇ ಕೊಟ್ಟಿರುವ ಭರವಸೆಯಂತೆ ಸರಿ ಸಮಾನ ವೇತನ ಕೇಳಲು ನೀವು ಬೆಂಬಲ ನೀಡಿ ಎಂದು ಕರೆದರೆ ಉದಾಸೀನತೆಯ ಹೇಳಿಕೆ ನೀಡುತ್ತಾರೆ ಈ ನೀಚರು. ಇಂಥವರು ಸರ್ಕಾರ ಕೊಟ್ಟಿರುವ ಭರವಸೆ ಈಡೇಸಿರಿಸಲು ಸರ್ಕಾರನ್ನು ಬಿಡುತ್ತಾರೆಯೇ. ಇವರು ಒಳ ಒಪ್ಪಂದದ ಪಿತಾಮಹರು ಎಂದರೂ ತಪ್ಪಾಗಲಾರದು. ಹೀಗಾಗಿ ನೌಕರರು ಎಚ್ಚೆತ್ತುಕೊಂಡು ನಿಮ್ಮ ಪರವಾಗಿ ಏನು ಧ್ವನಿ ಎತ್ತಿ ಸರಿ ಸಮಾನ ವೇತನ ಮಾಡಲೇ ಬೇಕು ಎಂದು ಪಟ್ಟುಹಿಡಿದು ಕುಳಿತ್ತಿದ್ದಾರೋ ಆ ಒಕ್ಕೂಟದ ಮುಖಂಡರ ಜತೆ ಒಗ್ಗೂಡಿ ಸರ್ಕಾರವೇ ಕೊಟ್ಟಿರುವ ಭರವಸೆ ಈಡೇರಿಸಿಕೊಳ್ಳುವತ್ತ ಮನಸ್ಸು ಮಾಡಬೇಕಿದೆ.
ಕಾರಣ ಕೂಟದ ಸಂಘಟನೆಯಲ್ಲಿರುವವರು ಬಹುತೇಕ ನೌಕರರೇ ಆಗಿದ್ದಾರೆ. ಹೀಗಾಗಿ ಅವರು ಸರಿ ಸಮಾನ ವೇತನ ಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಹೋರಾಟ ಮಾಡುತ್ತಿದ್ದಾರೆ. ಆದರೆ, ಈ ರೀತಿ 60-70 ವರ್ಷ ತುಂಬಿದರು ನೌಕರರ ಹಾಳು ಮಾಡಬೇಕು ಎಂಬ ದುರುದ್ದೇಶವಿಟ್ಟುಕೊಂಡು ಹೋರಾಟಕ್ಕೆ ಕರೆ ನೀಡಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಇಂಥ ನೀಚರಿಂದ ದೂರವಿರಬೇಕು ಎಂಬ ಸಂದೇಶವನ್ನು ಜಂಟಿಯ ಮುಖಂಡರೆ ಸಾರಿದ್ದಾರೆ.
ಇಲ್ಲಿ ಪ್ರಮುಖವಾಗಿ 2.5 ಕೋಟಿ ರೂಪಾಯಿ ಡೀಲ್ ನಡೆದಿರುವುದಕ್ಕೆ ಮಧ್ಯವರ್ತಿಯಾಗಿ ಒಬ್ಬ ಅಧಿಕಾರಿ ನಿಂತಿದ್ದಾರೆ ಎಂಬುವುದು ವಿಜಯಪಥಕ್ಕೆ ನೌಕರರ ಮುಖಂಡರೊಬ್ಬರಿಂದ ತಿಳಿದು ಬಂದಿದೆ. ಹೀಗಾಗಿ ನೌಕರರು ಇವರನ್ನು ನಂಬಿ ಹೋರಾಟಕ್ಕೆ ಮುಂದಾಗಿ ಅವರಿಗೆ ಅವರ ಬ್ಯಾಗ್ ತುಂಬಿಸಿಕೊಟ್ಟು ಬಳಿಕ ನೀವು ಬರಿಗೈಯಲ್ಲಿ ಅದರಲ್ಲೂ ಹತ್ತಾರೂ ಕೇಸ್ ಹಾಕಿಸಿಕೊಂಡು ಬರುವ ಸ್ಥಿತಿಗೆ ಹೋಗಬೇಡಿ ಎಂದು ಇದೇ ಜಂಟಿಯ ಮುಖಂಡರೊಬ್ಬರು ಎಲ್ಲವನ್ನು ಬಯಲು ಮಾಡುವ ಮೂಲಕ ನಿಮ್ಮ ಪಾಲಿಗೆ ದೇವರಾಗಿದ್ದಾರೆ. ಹೀಗಾಗಿ ಇವರ ಬಗ್ಗೆ ಇನ್ನಾರೂ ನೌಕರರು ಅರಿತು ನಡೆಯುವುದು ಒಳ್ಳೆಯದು.
Related









