NEWSನಮ್ಮರಾಜ್ಯರಾಜಕೀಯವಿಜ್ಞಾನ

ವಿದ್ಯುತ್ ಖರೀದಿ ಭ್ರಷ್ಟಾಚಾರ: ಸಿಎಂ ಬಿಎಸ್‌ವೈಗೆ ಎಎಪಿಯ ಪೃಥ್ವಿ ರೆಡ್ಡಿ ಬಹಿರಂಗ ಸವಾಲು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಿದ್ಯುತ್ ಖರೀದಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನಡೆಸಿರುವ ಭಾರಿ ಹಗರಣವನ್ನು ಸೋಮವಾರ (ನ.23) ನಡೆದ ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಬಹಿರಂಗಪಡಿಸಿದ್ದರು.

ವಿದ್ಯುತ್ ಖರೀದಿಯಲ್ಲಿನ ಭ್ರಷ್ಟಾಚಾರ, ಅಧಿಕಾರದ ದುರ್ಬಳಕೆಯಿಂದ ಆಗಿರುವ ನಷ್ಟವನ್ನು ಕರ್ನಾಟಕದ ಜನರ ಮೂಲಕ ಹೇಗೆ ವಸೂಲಿ ಮಾಡಲಾಗುತ್ತಿದೆ ಎಂಬುದಕ್ಕೆ ಸೂಕ್ತ ದಾಖಲೆಗಳನ್ನೂ ಸಹ ಒದಗಿಸಿದ್ದರು.

ಈ ಆರೋಪಗಳಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕಚೇರಿ ಪ್ರತಿಕ್ರಿಯಿಸಿದ್ದು “ಆಮ್ ಆದ್ಮಿ ಪಕ್ಷ ನೀಡಿರುವ ಹೇಳಿಕೆಗಳು ಸುಳ್ಳು ದಾಖಲೆಗಳನ್ನು ಆಧರಿಸಿವೆ ಮತ್ತು ದಾರಿತಪ್ಪಿಸುವ ಉದ್ದೇಶವನ್ನು ಹೊಂದಿವೆ” ಎಂದು ಹೇಳಿದೆ.

ಈ ಮೇಲಿನ ಹೇಳಿಕೆಗೆ ಸರಣಿ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಪೃಥ್ವಿ ರೆಡ್ಡಿ, ಇಂಧನ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ 3 ಪ್ರಶ್ನೆಗಳನ್ನು ಕೇಳಿದ್ದು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.

1. ಅದಾನಿಯ ಉಡುಪಿ ಪವರ್‌ನಿಂದ 2018 ರಿಂದ 2020 ರವರೆಗೆ ಪ್ರತಿ ಕಿಲೋವ್ಯಾಟ್‌ಗೆ 4.78 ರೂ.ನಿಂದ 6.80 ರೂಗೆ ಬೆಲೆ ಹೆಚ್ಚಳ ಮಾಡಿ ಖರೀದಿ ಮಾಡಲು ನೀವು ಅನುಮೋದನೆ ನೀಡಿರುವುದು ನಿಜವಲ್ಲವೇ?

2. ಮಾನ್ಯ ಮುಖ್ಯಮಂತ್ರಿಗಳೇ ವಿದ್ಯುತ್ ಸುಂಕವನ್ನು ಶೇ. 6ರಷ್ಟು ಹೆಚ್ಚಿಸಿ ಅದನ್ನು ಅದಾನಿಯ ಉಡುಪಿ ಪವರ್‌ಗೆ ಪಾವತಿಸಿರುವುದು ನಿಜವಲ್ಲವೇ? ಒಬ್ಬ ವ್ಯಕ್ತಿಯ ಲಾಭಕ್ಕೆ 6 ಕೋಟಿ ಜನರ ಮೇಲೆ ಹೊರೆ ಏಕೆ?

3. ಮುಖ್ಯಮಂತ್ರಿಗಳೇ, ಈ ವರ್ಷ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಕರ್ನಾಟಕದ ನಾಗರಿಕರು ಉದ್ಯೋಗ ಮತ್ತು ಆದಾಯ ನಷ್ಟವನ್ನು ಅನುಭವಿಸುತ್ತಿರುವಾಗ, ಅದಾನಿ ಪವರ್ ಬೆಂಸ್ಕಾಂಗೆ ಸರಬರಾಜು ಮಾಡಿರುವ ವಿದ್ಯುತ್‌ನಿಂದ ಸುಮಾರು 2,260 ಕೋಟಿಯಷ್ಟು ಭಾರಿ ಲಾಭ ಗಳಿಸುವ ನಿರೀಕ್ಷೆಯಿದೆ ? ನೀವು 2 ವರ್ಷಗಳಲ್ಲಿ 42 +% ಹೆಚ್ಚು ಹಣ ನೀಡಿದ್ದೀರಿ !!! ಇದು ನಿಜವಲ್ಲವೇ?

ಕರ್ನಾಟಕದಲ್ಲಿ ನಿಮ್ಮ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದ ತಪ್ಪು ಮತ್ತು ಅನ್ಯಾಯದಿಂದ ಬಳಲುತ್ತಿರುವವರು ನಾವು ಅಂದರೆ ಕರ್ನಾಟಕದ 6 ಕೋಟಿ ಜನರು. ಈ ಜನರೆಲ್ಲರ ಪರವಾಗಿ ಈ ಪ್ರಶ್ನೆಗಳಿಗೆ ಉತ್ತರ ಕೇಳುತ್ತಿದ್ದೇವೆ. ಅಲ್ಲದೇ ಇದಕ್ಕೆ ಸೂಕ್ತ ಉತ್ತರವನ್ನು ಎದುರು ನೋಡುತ್ತಿದ್ದೇವೆ ಎಂದು ಪೃಥ್ವಿರೆಡ್ಡಿ ಹೇಳಿದ್ದಾರೆ.

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್