NEWSನಮ್ಮರಾಜ್ಯರಾಜಕೀಯ

ಸಿಎಂ ಸ್ಥಾನಕ್ಕೆ ಹೈಕಮಾಂಡ್‌ ರಾಜೀನಾಮೆ ಕೊಡಿ ಅಂತ ಹೇಳಿದ್ರೆ ಕೊಡ್ತೀನಿ ಅಂದಿದ್ದೆ, ಮೊನ್ನೆ ಹೇಳಿದರು ಇಂದು ಕೊಟ್ಟೆ: ಸಿದ್ದರಾಮಯ್ಯ

ಸಿದ್ದರಾಮಯ್ಯ ಮಾತು: ನಾನು ಹಳ್ಳಿಗಾಡಿನಿಂದ ಬಂದವನು. ನಾನು ಮುಂದೊಂದು ದಿನ ಶಾಸಕ ಆಗ್ತೇನೆ, ಮಂತ್ರಿ ಆಗ್ತೇನೆ, ಮುಖ್ಯಮಂತ್ರಿ ಆಗ್ತೇನೆ ಅಂತ ಕಸನು ಕೂಡ ಕಂಡಿರಲಿಲ್ಲ. ನಾನು ರಾಜಕಾರಣಕ್ಕೆ ಬಂದಿದ್ದು ಆಕಸ್ಮಿಕ. ನಮ್ಮ ಕುಟುಂಬದವರು ಯಾರೂ ರಾಜಕಾರಣಲ್ಲಿ ಇರಲಿಲ್ಲ ಎಂದು ಹೇಳಿದರು.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಎಲ್ಲ ನನ್ನ ಮಾಧ್ಯಮ ಮಿತ್ರರಿಗೆ ನಮಸ್ಕಾರ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಭವನಕ್ಕೆ ತೆರೆಳಿ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಂದ ಬಳಿಕ ಗೃಹಕಚೇರಿ ಕೃಷ್ಣಾದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರಿಗೆ ನಮಸ್ಕರಿಸಿದ ಪರಿ.

ಆ ಬಳಿಕ ಮಾತು ಮುಂದುವರಿಸಿದ ಸಿದ್ದರಾಮಯ್ಯ ಅವರು, ನಾನು ಮಾಧ್ಯಮದವರು ಸಾಕಷ್ಟು ಬಾರಿ ಸಿಎಂ ಸ್ಥಾನದ ಪ್ರಶ್ನೆ ಮಾಡಿದ್ದಾಗ ಹೇಳಿದ್ದು ಒಂದೇ ಮಾತು. ಹೈಕಮಾಂಡ್‌ ಏನು ಹೇಳುತ್ತೋ ಅದಕ್ಕೆ ಬದ್ಧ. ಅದರಂತೆ ಅವರು ನನಗೆ ರಾಜೀನಾಮೆ ನೀಡಲು ಸೂಚಿಸಿದ್ದರು. ಅದರಂತೆ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ನಾನು ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಭವನದಲ್ಲಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ. ಆದರೆ, ಸದ್ಯ ರಾಜ್ಯಪಾಲರು ಊರಿನಲ್ಲಿ ಇಲ್ಲ. ಅವರು ಇವತ್ತು ರಾತ್ರಿ ಬೆಂಗಳೂರಿಗೆ ವಾಪಸ್ ಬರಲಿದ್ದಾರೆ ಎಂದು ಅವರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಚೇರಿಯ ಮುಖ್ಯ ಕಾರ್ಯದರ್ಶಿಯವರಿಗೆ ಹಸ್ತಾಂತರಿಸಿ ಬಂದಿದ್ದೇನೆ ಎಂದು ಪ್ರಕ್ರಿಯೆಯ ಸಂಪೂರ್ಣ ವಿವರ ನೀಡಿದರು.

ತಮ್ಮ ರಾಜೀನಾಮೆಯ ಹಿಂದಿನ ಹೈಕಮಾಂಡ್ ರಹಸ್ಯವನ್ನು ಮುಕ್ತವಾಗಿ ಒಪ್ಪಿಕೊಂಡ ಸಿದ್ದರಾಮಯ್ಯ, “ನಾನು ಮೊದಲಿನಿಂದಲೂ ಒಂದು ಮಾತನ್ನು ಸ್ಪಷ್ಟವಾಗಿ ಹೇಳುತ್ತಾ ಬಂದಿದ್ದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರು ನನಗೆ ಯಾವಾಗ ಸೂಚನೆ ನೀಡುತ್ತಾರೋ, ಆ ತಕ್ಷಣವೇ ನಾನು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದೆ. ಅದರಂತೆ, ಮೊನ್ನೆ ಹೈಕಮಾಂಡ್‌ ಅವರಿಂದ ನನಗೆ ‘ರಾಜೀನಾಮೆ ನೀಡಿ’ ಎಂಬ ಸಂದೇಶ ಬಂತ್ತು. ಅದರ ಪ್ರಕಾರವೇ ಇಂದು (ಗುರುವಾರ) ರಾಜೀನಾಮೆ ನೀಡುವುದಾಗಿ ತಿಳಿಸಿದ್ದೆ, ಈಗ ಅದರಂತೆಯೇ ನಡೆದುಕೊಂಡು ರಾಜೀನಾಮೆ ಸಲ್ಲಿಸಿದ್ದೇನೆ ಎಂದರು.

ರಾಜ್ಯಪಾಲರು ಬಂದ ಮೇಲೆ ರಾಜೀನಾಮೆ ಪತ್ರ ಅಂಗೀಕಾರ ಮಾಡುತ್ತಾರೆ. ಸಂವಿಧಾನದ ಪ್ರಕಾರ ಅದನ್ನು ಮಾಡಲೇಬೇಕು. ಅವರ ನಿಯಮಗಳ ಪ್ರಕಾರ ಏನು ಮಾಡ್ತಾರೋ ಅವರಿಗೆ ಬಿಟ್ಟಿದ್ದು, ಸಿಎಂ ರಾಜೀನಾಮೆ ಕೊಟ್ಟ ಮೇಲೆ ಅದನ್ನು ಅಂಗೀಕಾರ ಮಾಡಬೇಕು. ಮುಂದಿನ ಮುಖ್ಯಮಂತ್ರಿಗೆ ಅನುವು ಮಾಡಿಕೊಡಬೇಕಾದದ್ದು ಅವರ ಜವಾಬ್ದಾರಿ. ನಮ್ಮ ಪಕ್ಷ 135+1 ಸ್ಥಾನ ಪಡೆದಿದ್ದೇವೆ. ಜತೆಗೆ ಇಬ್ಬರು ಪಕ್ಷೇತರರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಾವು ಸಂಪೂರ್ಣ ಬಹುಮತದಲ್ಲಿ ಇದ್ದೇವೆ. ಮುಂದಿನ ಮುಖ್ಯಮಂತ್ರಿಗೆ ಅವಕಾಶ ಮಾಡಿಕೊಡಬೇಕಾದದ್ದು ಸಂವಿಧಾನ ಬದ್ದವಾಗಿ ಇದೆ ಎಂದು ಹೇಳಿದ್ದಾರೆ.

ರಾಜ್‌ಕುಮಾರ್‌ ಮಾತು ನೆನೆದ ಸಿದ್ದರಾಮಯ್ಯ:
ಕರ್ನಾಟಕ ಮೇರು ನಟ ಡಾ.ರಾಜ್ ಕುಮಾರ್ ಅಭಿಮಾನಿ ದೇವರು ಅಂತ ಕರೆಯುತ್ತಿದ್ದರು. ನಾನು ರಾಜಕಾರಣಿ, ನಾನು ಸಂವಿಧಾನವೇ ನಮ್ಮ ಧರ್ಮ ಅಂತ ತಿಳಿದವನು. ಮತದಾರರೇ ನಮ್ಮ ಅಭಿಮಾನಿ ದೇವರು. ಕನ್ನಡ‌ ನಾಡಿನ ಏಳು ಕೋಟಿ ಜನರ ಸೇವೆ ಮಾಡುವ ಅವಕಾಶ ಸಿಕ್ಕಿತ್ತು. ಎರಡು ಬಾರಿ ಸಿಎಂ ಆಗುವ ಅವಕಾಶ ಸಿಕ್ಕಿತ್ತು. ಎರಡು ಬಾರಿ ವಿಪಕ್ಷ ನಾಯಕ ಆಗುವ ಅವಕಾಶ ಸಿಕ್ಕಿತ್ತು.

ಇನ್ನು ಈ ಅವಕಾಶ ಕೊಟ್ಟಂತ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ, ನಮ್ಮ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಸಂದರ್ಭದಲ್ಲಿ ಅಪಾರ ಧನ್ಯವಾದ ತಿಳಿಸುತ್ತೇನೆ. ನಾನು ಕಾಂಗ್ರೆಸ್ ಸೇರಿದ್ದು 2006, ಆಗಿನಿಂದಲೂ ಕಾಂಗ್ರೆಸ್ ಕಾರ್ಯಕರ್ತರು, ಶಾಸಕರು, ಸಂಸದರು, ನನಗೆ ಪ್ರೀತಿ ತೋರಿಸಿದ್ದಾರೆ, ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದರು.

ನಾನು ರಾಜಕಾರಣಕ್ಕೆ ಬಂದಿದ್ದು ಆಕಸ್ಮಿಕ: 2013 ರಿಂದ 2018 ವರೆಗೆ 2023 ರಿಂದ ಇಲ್ಲಿಯವರೆಗೆ ನನ್ನ ಜತೆ ಕೆಲಸ ಮಾಡಿದ ಸಹೋದ್ಯೋಗಿಗಳು ಎಲ್ಲ ರೀತಿಯ ಬೆಂಬಲ ಮತ್ತು ಸಹಕಾರ ಪ್ರೀತಿ ವ್ಯಕ್ತ ಪಡಿಸಿದ್ದಾರೆ. ಅವರಿಗೆ ನಾನು ಋಣಿ ಆಗಿರುತ್ತೇನೆ. ನಾನು ಹಳ್ಳಿಗಾಡಿನಿಂದ ಬಂದವನು. ನಾನು ಮುಂದೊಂದು ದಿನ ಶಾಸಕ ಆಗ್ತೇನೆ, ಮಂತ್ರಿ ಆಗ್ತೇನೆ, ಮುಖ್ಯಮಂತ್ರಿ ಆಗ್ತೇನೆ ಅಂತ ಕಸನು ಕೂಡ ಕಂಡಿರಲಿಲ್ಲ. ನಾನು ರಾಜಕಾರಣಕ್ಕೆ ಬಂದಿದ್ದು ಆಕಸ್ಮಿಕ. ನಮ್ಮ ಕುಟುಂಬದವರು ಯಾರೂ ರಾಜಕಾರಣಲ್ಲಿ ಇರಲಿಲ್ಲ ಎಂದು ಹೇಳಿದರು.

ಇನ್ನು ನಮ್ಮ ಸರ್ಕಾರ ಬಂದ ಮೇಲೆ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿಯೋಜನೆ ಕೊಟ್ಟಿದ್ದೇವೆ. ನೆಲ, ಜಲ, ಭಾಷೆ ವಿಷಯದಲ್ಲಿ ನಾವು ಯಾವತ್ತು ರಾಜೀ ಆಗಿಲ್ಲ ಬಿಟ್ಟುಕೊಡುವ ಪ್ರಶ್ನೆಯೂ ಇಲ್ಲ ಎಂದು ಹೇಳಿದರು.

Megha
the authorMegha

Leave a Reply

error: Content is protected !!
Latest news
ರಾಜೀನಾಮೆಗೂ ಮುನ್ನ ಸಿಎಂ ಕಚೇರಿ ಸಿಬ್ಬಂದಿ ವರ್ಗಾವಣೆ: ಆಪ್ತ, ಬೆಂಬಲಿಗ ಅಧಿಕಾರಗಳ ರಕ್ಷಣೆ ಮಾಡಿದರ ಸಿದ್ದು!? ಸಿಎಂ ಸ್ಥಾನಕ್ಕೆ ಹೈಕಮಾಂಡ್‌ ರಾಜೀನಾಮೆ ಕೊಡಿ ಅಂತ ಹೇಳಿದ್ರೆ ಕೊಡ್ತೀನಿ ಅಂದಿದ್ದೆ, ಮೊನ್ನೆ ಹೇಳಿದರು ಇಂದು ಕೊಟ್ಟೆ: ಸ... ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯರಿಂದ ಒಂದು ಪುಟದ ರಾಜೀನಾಮೆ ಪತ್ರ ಸಲ್ಲಿಕೆ KSRTC ಕಚೇರಿಯಲ್ಲಿ ಡ್ಯೂಟಿ ಮಾಡುವ ಮಹಿಳಾ ನೌಕರರಿಗೆ ಹೆರಿಗೆ ರಜೆ ನಿಯಮ ಬದಲಿಸಿ ಎಂಡಿ ಆದೇಶ- ಇಂದಿನಿಂದಲೇ ಜಾರಿ ಕಿರುಗಾವಲು: ಪತ್ನಿ ಮುಂದೆ ಶ್ರೀಮಂತ ಎಂದು ತೋರಿಸಿಕೊಳ್ಳಲು ಸರಗಳ್ಳತನ- ಈತ ಸೇರಿ ನಾಲ್ವರ ಬಂಧನ ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಪರಿಣಾಮ: KSRTC ಬಸ್‌ ಟಿಕೆಟ್‌ ದರ ಹೆಚ್ಚಳ ಸಾಧ್ಯತೆ ! ಕಾರ್ಮಿಕರ ಕನಿಷ್ಠ ವೇತನ ತಿಂಗಳಿಗೆ 36 ಸಾವಿರ ರೂ. ಹೆಚ್ಚಿಸಲು ಆಗ್ರಹಿಸಿ ಮೇ 30ರಂದು ಸಿಐಟಿಯು ಪ್ರತಿಭಟನೆ ಶಂಕಿತ ಎಬೋಲಾ ನೆಗಿಟಿವ್ ಆತಂಕಪಡುವ ಅಗತ್ಯವಿಲ್ಲ: ಸಚಿವ ದಿನೇಶ್ ಗುಂಡೂರಾವ್ ರಾಜ್ಯ ರಾಜಕೀಯ ವಿದ್ಯಮಾನ ಕುರಿತು ನಾಳೆ ಮಾತನಾಡುತ್ತೇನೆ: ಸಿಎಂ ಒಂದ್ಸಾಲ್‌ ಹೇಳಿಕೆ ಸಿದ್ದೂಜಿ ನೀವು ಇಲ್ಲಿಗೆ ಬಂದುಬಿಡಿ: ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಗೆ ರೋಚಕ ತಿರುವು!