NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಕಚೇರಿಯಲ್ಲಿ ಡ್ಯೂಟಿ ಮಾಡುವ ಮಹಿಳಾ ನೌಕರರಿಗೆ ಹೆರಿಗೆ ರಜೆ ನಿಯಮ ಬದಲಿಸಿ ಎಂಡಿ ಆದೇಶ- ಇಂದಿನಿಂದಲೇ ಜಾರಿ

ನಿರ್ವಾಹಕಿಯರು, ಚಾಲಕಿ, ಚಾಲಕಿ- ಕಂ-ನಿರ್ವಾಹಕಿ, ತಾಂತ್ರಿಕ ಸಿಬ್ಬಂದಿ ಮತ್ತು ಮಾರ್ಗ ತಪಾಸಣೆ ಮಹಿಳಾ ಸಿಬ್ಬಂದಿಗಳ ಹೊರತುಪಡಿಸಿ ಉಳಿದ ಎಲ್ಲ ಸಿಬ್ಬಂದಿಗಳು ಮತ್ತು ಅಧಿಕಾರಿಗಳಿಗೆ ಸರ್ಕಾರದಲ್ಲಿರುವಂತೆ ಒಟ್ಟಾಗಿ 180 ದಿನಗಳ ರಜೆಯನ್ನು ಅವರ ಅವಶ್ಯಕತೆಗೆ ಅನುಸಾರ ಪಡೆಯಲು ಅವಕಾಶ ಕಲ್ಪಿಸುವ ಕುರಿತು ಪ್ರಸ್ತಾವನೆಯನ್ನು ನಿಗಮದ ನಿರ್ದೇಶಕ ಮಂಡಳಿಯು 08.05.2026 ರನ್ವಯ ಒಪ್ಪಿಗೆ ನೀಡಿದೆ. ಅದರಂತೆ, ನಿಗಮದ ಅರ್ಹ ನೌಕರರಿಗೆ ಈ ಹೆರಿಗೆ ರಜೆ ಮಂಜೂರು ಮಾಡಬಹುದಾಗಿದೆ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅರ್ಹ ಮಹಿಳಾ ನೌಕರರಿಗೆ ಪ್ರಸೂತಿ ರಜೆ ಸೌಲಭ್ಯವನ್ನು ಸರ್ಕಾರದಲ್ಲಿರುವಂತೆ ವಿಸ್ತರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ ಪಾಷ ಇಂದು ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಸರ್ಕಾರದ ಸೇವಾ ನಿಯಮಗಳಡಿ ಇರುವ ಅವಕಾಶದಂತೆ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಮಹಿಳಾ ಅಧಿಕಾರಿ/ ಸಿಬ್ಬಂದಿಗಳ ಕಾರ್ಯ ವೈಖರಿ, ಕರ್ತವ್ಯದ ಒತ್ತಡ, ರಿಸ್ಕ್ ಫ್ಯಾಕ್ಟರ್ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ 90 ದಿನಗಳ ಹೆರಿಗೆ ಪೂರ್ವ
ರಜೆ ಹಾಗೂ 90 ದಿನಗಳ ಹೆರಿಗೆ ನಂತರದ ರಜೆಯನ್ನೊಳಗೊಂಡಂತೆ ಒಟ್ಟಾರೆ 180 ದಿನಗಳ ಹೆರಿಗೆ ರಜೆಯನ್ನು ವಿಸ್ತರಿಸಲು ನಿರ್ದೇಶನ ಜಾರಿಯಲ್ಲಿದೆ.

ಆದರೆ, ಇಂದಿನಿಂದ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ನಿರ್ವಾಹಕಿಯರು, ಚಾಲಕಿ, ಚಾಲಕಿ- ಕಂ-ನಿರ್ವಾಹಕಿ, ತಾಂತ್ರಿಕ ಸಿಬ್ಬಂದಿ ಮತ್ತು ಮಾರ್ಗ ತಪಾಸಣೆ ಮಹಿಳಾ ಸಿಬ್ಬಂದಿಗಳ ಕಾರ್ಯ ವೈಖರಿ, ಕರ್ತವ್ಯದ ಒತ್ತಡ, ರಿಸ್ಕ್ ಫ್ಯಾಕ್ಟರ್ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಇವರಿಗೆ 90 ದಿನಗಳ ಹೆರಿಗೆ ಪೂರ್ವ
ರಜೆ ಹಾಗೂ 90 ದಿನಗಳ ಹೆರಿಗೆ ನಂತರದ ರಜೆಯನ್ನೊಳಗೊಂಡಂತೆ ಒಟ್ಟಾರೆ 180 ದಿನಗಳ ಹೆರಿಗೆ ರಜೆಯನ್ನು ಈ ಹಿಂದಿನಂತೆಯೇ ಪಡೆಯಬಹುದಾಗಿದೆ.

ಇನ್ನು ಈ ಮೇಲಿನ ಸಿಬ್ಬಂದಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ವರ್ಗದ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ನಿರ್ವಹಿಸುವ ಕೆಲಸದಲ್ಲಿ ಹೆಚ್ಚಿನ ರಿಸ್ಕ್ ಫ್ಯಾಕ್ಟರ್ ಇಲ್ಲವಾದ್ದರಿಂದ ಈ ಸಿಬ್ಬಂದಿಗಳು ಮತ್ತು ಅಧಿಕಾರಿಗಳಿಗೆ ಸರ್ಕಾರದಲ್ಲಿರುವಂತೆ ಒಟ್ಟಾಗಿ 180 ದಿನಗಳ ರಜೆಯನ್ನು ಅವರ ಅವಶ್ಯಕತೆಗೆ ಅನುಸಾರ ಪಡೆಯಲು ಅವಕಾಶ ಕಲ್ಪಿಸುವ ಕುರಿತು ಪ್ರಸ್ತಾವನೆಯನ್ನು ನಿಗಮದ ನಿರ್ದೇಶಕ ಮಂಡಳಿಯು 08.05.2026 ರನ್ವಯ ಒಪ್ಪಿಗೆ ನೀಡಿದೆ. ಅದರಂತೆ, ನಿಗಮದ ಅರ್ಹ ನೌಕರರಿಗೆ ಈ ಹೆರಿಗೆ ರಜೆ ಮಂಜೂರು ಮಾಡಬಹುದಾಗಿದೆ.

ಈ ಸಂಬಂಧ ಈ ಮೊದಲೇ ತಿಳಿಸಿದಂತೆ ಇಂದು ಹೊರಡಿಸಲಾಗಿರುವ ಆದೇಶದಲ್ಲಿ ನಿರ್ವಾಹಕಿಯರು, ಚಾಲಕಿ, ಚಾಲಕಿ- ಕಂ-ನಿರ್ವಾಹಕಿ, ಮಹಿಳಾ ತಾಂತ್ರಿಕ ಸಿಬ್ಬಂದಿ ಮತ್ತು ಮಾರ್ಗ ತಪಾಸಣೆ ಮಹಿಳಾ ಸಿಬ್ಬಂದಿಗಳಿಗೆ 25.06.2020 ರಲ್ಲಿನ ನಿರ್ದೇಶನಗಳನ್ನು ಮುಂದುವರೆಸಲಾಗಿದ್ದು, ಅದರಂತೆ, ಕ್ರಮ ಕೈಗೊಳ್ಳತಕ್ಕದ್ದು.

ಇವರನ್ನು ಹೊರತುಪಡಿಸಿ ನಿಗಮದಲ್ಲಿ ಉಳಿದ ಎಲ್ಲ ವರ್ಗದ ಮಹಿಳಾ ಸಿಬ್ಬಂದಿಗಳು ಹಾಗೂ ಮಹಿಳಾ ಅಧಿಕಾರಿಗಳು ನಿರ್ವಹಿಸುವ ಕೆಲಸದಲ್ಲಿ ಹೆಚ್ಚಿನ ರಿಸ್ಕ್ ಫ್ಯಾಕ್ಟರ್ ಇಲ್ಲವಾದ್ದರಿಂದ ಇವರಿಗೆ 10-10-2012 ರ ಕಂಡಿಕೆ ‘ಅ’ ನ್ನು ಪರಿಗಣಿಸದೆ ಸರ್ಕಾರದಲ್ಲಿರುವಂತೆ ಒಟ್ಟಾರೆ 180 ದಿನಗಳ ಹೆರಿಗೆ ರಜೆಯನ್ನು ಅವರ ಅವಶ್ಯಕತೆಗೆ
ಅನುಗುಣವಾಗಿ ಮಂಜೂರು ಮಾಡಬೇಕು ಎಂದು ತಿಳಿಸಿದ್ದಾರೆ.

ಉಳಿದಂತೆ, 10-10-2012ರಲ್ಲಿ ಆಗಿರುವ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಂಬಂಧಪಟ್ಟವರೆಲ್ಲರೂ ಈ ಆದೇಶವನ್ನು ಮನದಟ್ಟು ಮಾಡಿಕೊಂಡು ಅದರಂತೆ ಕ್ರಮ ಕೈಗೊಳ್ಳತಕ್ಕದ್ದು. ಈ ನಿರ್ದೇಶನಗಳು ಈ ಸುತ್ತೋಲೆ ಹೊರಡಿಸಿದ ದಿನಾಂಕದಿಂದ ಹಾಗೂ ನಂತರ ಹೆರಿಗೆ ರಜೆ ಪಡೆಯುವವರಿಗೆ ಅನ್ವಯಿಸುವಂತೆ ಅಂದರೆ ಇಂದಿನಿಂದ ಜಾರಿಗೆ ಬಂದಿದೆ ಎಂದು ಎಂಡಿ ತಮ್ಮ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.  ಎಂಡಿ ಆದೇಶದ ಪಿಡಿಎಫ್‌ ಫೈಲ್‌  27 May 2026 KSRTC Circular 1754 Maternity leave

Deva
the authorDeva

Leave a Reply

error: Content is protected !!
Latest news
KSRTC ಕಚೇರಿಯಲ್ಲಿ ಡ್ಯೂಟಿ ಮಾಡುವ ಮಹಿಳಾ ನೌಕರರಿಗೆ ಹೆರಿಗೆ ರಜೆ ನಿಯಮ ಬದಲಿಸಿ ಎಂಡಿ ಆದೇಶ- ಇಂದಿನಿಂದಲೇ ಜಾರಿ ಕಿರುಗಾವಲು: ಪತ್ನಿ ಮುಂದೆ ಶ್ರೀಮಂತ ಎಂದು ತೋರಿಸಿಕೊಳ್ಳಲು ಸರಗಳ್ಳತನ- ಈತ ಸೇರಿ ನಾಲ್ವರ ಬಂಧನ ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಪರಿಣಾಮ: KSRTC ಬಸ್‌ ಟಿಕೆಟ್‌ ದರ ಹೆಚ್ಚಳ ಸಾಧ್ಯತೆ ! ಕಾರ್ಮಿಕರ ಕನಿಷ್ಠ ವೇತನ ತಿಂಗಳಿಗೆ 36 ಸಾವಿರ ರೂ. ಹೆಚ್ಚಿಸಲು ಆಗ್ರಹಿಸಿ ಮೇ 30ರಂದು ಸಿಐಟಿಯು ಪ್ರತಿಭಟನೆ ಶಂಕಿತ ಎಬೋಲಾ ನೆಗಿಟಿವ್ ಆತಂಕಪಡುವ ಅಗತ್ಯವಿಲ್ಲ: ಸಚಿವ ದಿನೇಶ್ ಗುಂಡೂರಾವ್ ರಾಜ್ಯ ರಾಜಕೀಯ ವಿದ್ಯಮಾನ ಕುರಿತು ನಾಳೆ ಮಾತನಾಡುತ್ತೇನೆ: ಸಿಎಂ ಒಂದ್ಸಾಲ್‌ ಹೇಳಿಕೆ ಸಿದ್ದೂಜಿ ನೀವು ಇಲ್ಲಿಗೆ ಬಂದುಬಿಡಿ: ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಗೆ ರೋಚಕ ತಿರುವು! ಬೆಂಗಳೂರಿನಲ್ಲಿ ಅಬ್ಬರಿಸಿದ ವರುಣ, ನಮ್ಮ ಮೆಟ್ರೋ ಹಳಿ ಮೇಲೆ ಬಿದ್ದ ಮರದ ಕೊಂಬೆ, ಪ್ರಯಾಣಿಕರ ಪರದಾಟ KSRTC ನೌಕರ ಕೇಶವಮೂರ್ತಿ ಹೃದಯಾಘಾತದಿಂದ ನಿಧನ ರೈತರ ನಿರ್ಲಕ್ಷ್ಯ ಮಾಡಿದರೆ ಬೀದಿಗಿಳಿದು ಹೋರಾಟ: ಕೇಂದ್ರ-ರಾಜ್ಯ. ಸರ್ಕಾರಗಳಿಗೆ ಕುರುಬೂರು ಶಾಂತಕುಮಾರ್ ಎಚ್ಚರಿಕೆ