NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ

ನಮ್ಮೆಲ್ಲರ ನೆಚ್ಚಿನ ಅಧಿಕಾರಿ ಹಾ ಗೂ ನೌಕರರ ಮಾರ್ಗದರ್ಶಕರಾಗಿದ್ದ ನೀವು ಇಂದು ನಿವೃತ್ತರಾಗುತ್ತಿರುವುದು ಭಾರಿ ಭಾವಕರನ್ನಾಗಿಸಿದೆ

ವಿಜಯಪಥ ಸಮಗ್ರ ಸುದ್ದಿ

ಧಾರವಾಡ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಧಾರವಾಡ ಗ್ರಾಮಾಂತರ ವಿಭಾಗದಲ್ಲಿ ಆಡಳಿತಾತ್ಮಕ ಸೇವೆಯಲ್ಲಿ ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ನಾಳೆ ಮೇ 31ರಂದು ನಿವೃತ್ತರಾಗುತ್ತಿರುವ ಹಿರಿಯ ಅಧಿಕಾರಿ ಸುರೇಶ ಸರ್ಜಾಪುರ ಹಾಗೂ ಸುಣಗಾರ ಅವರಿಗೆ ಇಂದು ನೌಕರರು ಹೃದಯಸ್ಪರ್ಷಿ ಬೀಳ್ಕೊಡುಗೆ ನೀಡಿದರು.

ನಾಳೆ ಮೇ 31 ಭಾನುವಾರ ಬಂದಿರುವುರಿಂದ ಬಹುತೇಕ ಅಧಿಕಾರಿಗಳು ರಜೆಯಲ್ಲಿರುತ್ತಾರೆ, ಹೀಗಾಗಿ ನಾಳೆ ನಿವೃತ್ತರಾಗುತ್ತಿರುವ ಸಂಸ್ಥೆಯ ಅಧಿಕಾರಿಗಳು/ನೌಕರರಿಗೆ ಇಂದೇ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.

ಈ ವೇಳೆ ನಾಳೆ ನಿವೃತ್ತರಾಗುತ್ತಿರುವ ಅಧಿಕಾರಿ ಸುರೇಶ ಅವರ ವೃತ್ತಿಪರತೆ ಬಗ್ಗೆ ಶ್ಲಾಘಿಸಿದ್ದಾರೆ. ನಮ್ಮೆಲ್ಲರ ನೆಚ್ಚಿನ ಅಧಿಕಾರಿ ಹಾಗೂ ನೌಕರರ ಮಾರ್ಗದರ್ಶಕರಾಗಿದ್ದ ನೀವು ಇಂದು ನಿವೃತ್ತರಾಗುತ್ತಿರುವುದು ಭಾರಿ ಭಾವಕರನ್ನಾಗಿಸಿದೆ ಎಂದು ಹೇಳಿದ್ದಾರೆ.

ಇನ್ನು ಬುದ್ಧ, ​ಬಸವಣ್ಣ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರ ತತ್ವ ಗಳಿಂದ ಪ್ರೇರಿತರಾಗಿ,‌ ಸಾಮಾಜಿಕ ನ್ಯಾಯವನ್ನು ತಮ್ಮ ಸಾರಿಗೆ ಸೇವೆಯ ಜೀವನದ ಮುಖ್ಯ ಧ್ಯೇಯವನ್ನಾಗಿಸಿಕೊಂಡ ಖಡಕ್ ಅಧಿಕಾರಿಗಳಾದ್ರಿ, ಅದೇ ರೀತಿ ನಿಮ್ಮ ನಿವೃತ್ತಿಯ ಜೀವನವು ಸಂತೋಷದಿಂದ ಕೂಡಿರಲಿ ಎಂದು ಹಾರೈಸಿದ್ದಾರೆ.

ಅಲ್ಲದೆ ಅಧಿಕಾರಿಗಳು / ನೌಕರರ ಮೇಲಿನ ನಿಮ್ಮ ಅಚಲ ಬದ್ಧತೆ, ಸಾಮಾಜಿಕ ನ್ಯಾಯದ ಪರವಾದ ಕರ್ತವ್ಯನಿಷ್ಠೆ, ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ತತ್ವಗಳ ಮೇಲಿನ ನಿಷ್ಠೆ ನಮಗೆಲ್ಲರಿಗೂ ದಾರಿದೀಪವಾಗಿದೆ ಎಂದು ಹೇಳಿದ್ದಾರೆ.

ತಾವು ಪ್ರಮುಖವಾಗಿ ಹೇಳಬೇಕು ಎಂದರೆ ಸಾಮಾನ್ಯ ನೌಕರರ ಕಣ್ಣೀರಿನ ಭಾಷೆಯನ್ನು ಅರ್ಥಮಾಡಿ ಕೊಂಡ ಅಧಿಕಾರಿಯಾಗಿದ್ದೀರಿ ಎಂದು ಸುರೇಶ ಸರ್ಜಾಪುರ ಹಾಗೂ ಸುಣಗಾರ ಅವರ ಸೇವೆಯನ್ನು ಶ್ಲಾಘಿಸಿದ್ದಾರೆ.

ಇನ್ನು ಅಧಿಕಾರವಿರುವುದು ವೈಭವಕ್ಕಾಗಿ ಅಲ್ಲ, ಅದು ಜನಸೇವೆಯ ಸಾಧನವಾಗಿ ಎಂದು ಹೇಳಿ ಅದೇರೀತಿ ನಡೆದುಕೊಂಡ ಅಪರೂಪದ ಅಧಿಕಾರಿಗಳು ತಾವು ಎಂದು ಹೇಳಿದ್ದಾರೆ.

ಒಟ್ಟಾರೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಧಾರವಾಡ ಗ್ರಾಮಾಂತರ ವಿಭಾಗದಲ್ಲಿ ಆಡಳಿತಾತ್ಮಕ ಸೇವೆಯಲ್ಲಿ ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ಇಂದು DTO ಸಂತೋಷ ಕಮತ ಅವರ ಅಧ್ಯಕ್ಷತೆಯಲ್ಲಿ ಸಮಸ್ತ ಅಧಿಕಾರಿ/ ನೌಕರ ಮಿತ್ರರೆಲ್ಲರೂ ಸೇರಿ ಆತ್ಮೀಯವಾಗಿ ನಿಮಗೆ ಬೀಳ್ಕೊಡುತ್ತಿದ್ದು, ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದ್ದಾರೆ.

Deva
the authorDeva

Leave a Reply

error: Content is protected !!
Latest news
NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ KSRTC: ಮೂರು ದಶಕಗಳ ಸುದೀರ್ಘ ಸೇವೆ ಬಳಿಕ ಸಂಸ್ಥೆಯ ಬಸ್‌ ಚಾಲಕ ನಿವೃತ್ತಿ-  ಮರೆಯಲಾಗದ ಸಂದರ್ಭ ಸೆರೆ! ಇಂಧನ, ಗ್ಯಾಸ್ ಬೆಲೆಯೇರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾರೈಸಂ ಪ್ರತಿಭಟನೆ -ಸರ್ಕಾರಗಳ ವಿರುದ್ಧ ಘೋಷಣೆ KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ – ಜೂ.3ರಂದು ನೂತನ ಸಿಎಂಆಗಿ ಗದ್ದುಗೆ ಏರಲಿರುವ ಡಿ.ಕೆ.ಶಿವಕುಮಾರ್‌ ಪೆಟ್ರೋಲ್‌, ಡೀಸೆಲ್‌ ಬಳಿಕ CNG ದರದಲ್ಲೂ ಏರಿಕೆ- ಎರಡನೇ ಬಾರಿಗೆ 2ರೂ. ಹೆಚ್ಚಳ -ಗ್ರಾಹಕರಿಗೆ ಶಾಕ್‌ ಕೊಟ್ಟ MGL ಆದೇಶ ಕಾಯ್ದಿರಿಸಿದ 3 ತಿಂಗಳೊಳಗಾಗಿ ಎಲ್ಲ ಕೋರ್ಟ್‌ಗಳಲ್ಲೂ ಅಂತಿಮ ತೀರ್ಪು ಹೊರಬೀಳಬೇಕು: ಸುಪ್ರೀಂ ಮಹತ್ವದ ಆದೇಶ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮೆ ಆಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅಧ್ಯಕ್ಷ ತಾಕೀತು ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್‌: ಬಿಲ್‌ಗಳಿಗೆ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಮಾಡಿ KERC ಆದೇಶ- ಜೂನ್‌... BMTC KSRTC ನಿವೃತ್ತ ನೌಕರರ ಪ್ರತಿಭಟನೆ: ಕನಿಷ್ಠ ಪಿಂಚಣಿ 7500 ರೂ. ನೀಡಲು ಆಗ್ರಹ