ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಮುಂಜಾನೆಯಿಂದ ಬಸ್ಗಳನ್ನು ಡಿಪೋಗಳಿಂದ ಹೊರತೆಗೆಯದೇ ಪ್ರತಿಭಟನೆ ಮಾಡುತ್ತಿದ್ದು, ಇದರಿಂದ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಕ್ಕೆ ಬಂದ ರಾತ್ರಿಪಾಳಿ ಬಸ್ಗಳು ಮುಂಜಾನೆ 5 ಗಂಟೆಯಿಂದ ಸಂಚಾರ ಆರಂಭಿಸಿದವು. ಆದರೆ, ಚಾಲಕ ಮತ್ತು ನಿರ್ವಾಹಕರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ನಾವು ರಾತ್ರಿ ಪಾಳಿಯಲ್ಲಿ ಕರ್ತವ್ಯಕ್ಕೆ ಹಾಜರಾದ್ದರಿಂದ ಬಸ್ಗಳನ್ನು ಡಿಪೋಗಳಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಇದು ನಾವು ಪ್ರತಿಭಟನೆಗೆ ಬೆಂಬಲ ನೀಡಿಲ್ಲ ಎಂದರ್ಥವಲ್ಲ. ಹೀಗಾಗಿ ನಾವು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೇ ಸಂಪೂರ್ಣ ಬೆಂಬಲ ನೀಡಿದ್ದೇವೆ ಎಂದು ಹೇಳಿದ್ದಾರೆ.
ಈ ನಡುವೆ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಬಸ್ಗಳು ಮುಂಜಾನೆ 3.30ರ ಸಮಯದಲ್ಲಿ ಸಂಚಾರ ಆರಂಭಿಸಿದ್ದರಿಂದ ಕೆರಳಿ ಬೈಕ್ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಕಲ್ಲೂ ತೂರಾಟ ನಡೆಸಿದರು. ಇದರಿಂದ ಕೆಎಸ್ಆರ್ಟಿಸಿಯ ಎರಡು ಬಸ್ಗಳ ಗಾಜುಗಳು ಪುಡಿಪುಡಿಯಾಗಿವೆ.
ಬಿಎಂಟಿಸಿಯ ಬನಶಂಕರಿ ಟಿಟಿಎಂಸಿ ಬಸ್ ನಿಲ್ದಾಣದ, ಯಶವಂತಪುರ ಟಿಟಿಎಂಸಿ ಸೇರಿದಂತೆ ಬೆಂಗಳೂರಿನ ಯಾವುದೇ ಡಿಪೋಗಳಿಂದ ಬಸ್ಗಳು ಸಂಚಾರ ಆರಂಭಿಸಿಲ್ಲ. ಇದರಿಂದ ವಿವಿಧ ಊರುಇಗಳಿಗೆ ತೆರಳಲು ಮುಂಜಾನೆ 4ಗಂಟೆಗೇ ಬಂದಿರುವ ನೂರಾರು ಪ್ರಯಾಣಿಕರು ಪರದಾಡುವಂತಾಗಿದೆ.
ಸಾರ್ವಜನಿಕರು ನಮ್ಮ ಹೋರಾಟವನ್ನು ಬೆಂಬಲಿಸಿ ನಿಮಗೆ ತೊಂದರೆಯಾಗುತ್ತಿರುವುದಕ್ಕೆ ಕ್ಷಮೆ ಕೇಳುತ್ತೇವೆ. ಆದರೆ ನಮ್ಮ ಸಮಸ್ಯೆಯನ್ನು ಪರಿಹರಿಸ ಬೇಕಾದ ಸರ್ಖಾರ ಮತ್ತು ಸಚಿವರಿಗೆ ನಿಮ್ಮ ಮತ್ತು ನಮ್ಮ ಕೂಗು ನೋವು ಕೇಳಿಸುತ್ತಿಲ್ಲ. ಈ ಕೂಗು ಅವರಿಗೆ ಮುಟ್ಟಬೇಕಾದರೆ ಈರೀತಿ ನಡೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಪ್ರಯಾಣಿಕ ದೇವರಲ್ಲಿ ಮನವಿ ಮಾಡುತ್ತೇವೆ ಎಂದು ಬನಶಂಕರಿ ಟಿಟಿಎಂಸಿ ಬಸ್ ನಿಲ್ದಾಣ ಪ್ರತಿಭಟನೆ ಮಾಡುತ್ತಿರುವ ಸಾರಿಗೆ ನೌಕರರು ಹೇಳಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ನೀಡಿರುವ ಸಂದೇಶದ ಅನ್ವಯ ಇಂದಿಯಿಂದ ಸಾರಿಗೆಯ ನಾಲ್ಕೂ ನಿಗಮದ ಬಸ್ಗಳು ಕಾರ್ಯಾಚರಣೆ ಮಾಡುತ್ತಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನ ಮಾಡಲಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ನೌಕರರು ಸರ್ಕಾರಕ್ಕೆ ರವಾನಿಸಿದ್ದಾರೆ.
Helodu ondu madodu ondu