ಹೌದು ಸಾರಿಗೆ ಮಂತ್ರಿಗಳೇ ಸಾರಿಗೆ ನೌಕರರನ್ನು ಬಿಟ್ಟು ಉಳಿದ ಯಾವುದೇ ಸಂಘ ಸಂಸ್ಥೆಗಳು ಪ್ರತಿಭಟನೆ ಮಾಡುತ್ತಿಲ್ಲ. ಯಾಕೆಂದರೆ ಅಲ್ಲಿರುವ ಯಾವುದೇ ನೌಕರರನ್ನು ಪ್ರತಿಭಟನೆ ಮಾಡುವಂತಹ ಸ್ಥಿತಿಯಲ್ಲಿ ಆಯಾ ಸಂಸ್ಥೆಗಳು ಇಟ್ಟಿಲ್ಲ. ಈಗ ಸಾವು ಬದುಕಿನ ನಡುವೆ ಇರೋದು ಸಾರಿಗೆ ನೌಕರರು.
ಸರಕಾರಿ ನೌಕರರನ್ನು ಮಾಡಲು ಆಗದಿದ್ದರೆ ಚುನಾವಣೆಗೆ ಮೊದಲು ಯಾಕೆ ಮುಖ್ಯ ಮಂತ್ರಿ ಯಡಿಯೂರಪ್ಪನವರು ನಮ್ಮ ಸರಕಾರ ಬಂದರೆ ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನಾಗಿ ಮಾಡುತ್ತೇವೆಂದು ಆಶ್ವಾಸನೆ ಕೊಡಬೇಕಿತ್ತು? ನಿಮ್ಮ ಆಶ್ವಾಸನೆ ಕೇಳಿಯೇ ಸಾರಿಗೆ ನೌಕರರು ಹೃದಯ ಪೂರ್ತಿ ನಿಮಗೆ ಮತ ಹಾಕಿದ್ದು,ಯಾಕೆಂದರೆ ಹಸಿದ ಹೊಟ್ಟೆ ತುಂಬಿಸುತ್ತಿರೆಂದು.
ಹಾಗಾದರೆ ಅಧಿಕಾರ ಸಿಗುವವರೆಗೆ ಅಷ್ಟೆ ತಾನೇ ನಿಮ್ಮ ಆಶ್ವಾಸನೆ ಎಂದಾಯಿತು!!!? ಈಗ ಉಪ ಮುಖ್ಯ ಮಂತ್ರಿಗಳು ಹಾಗೂ ಸಾರಿಗೆ ಮಂತ್ರಿಗಳಾದ ಸವದಿ ಸಾಹೇಬರು ಹೇಳುತ್ತಿದ್ದಾರೆ! ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನು ಮಾಡಿದರೆ ಸರಕಾರಕ್ಕೆ ಹೊರೆ ಆಗುತ್ತದೆ ಅಂತಿರಲ್ಲ, ಸಾರಿಗೆ ಸಂಸ್ಥೆ ಇರೋದು ಲಾಭಕ್ಕಾಗಿನಾ? ಅಥವಾ ಸೇವೆಗಾಗ? ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನು ಮಾಡಿದರೆ ಸರಕಾರಕ್ಕೆ ಹೊರೆ ಆಗುತ್ತದೆ ಅಂತಿರಲ್ಲ, ಅಗ್ನಶಾಮಕ ದಳ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ವಿದ್ಯುತ್ ಇಲಾಖೆ, ಇವುಗಳಿಂದ ಸರಕಾರಕ್ಕೆ ಹೊರೆ ಆಗುವುದಿಲ್ಲವೇ?
ಸ್ವಾಮಿ ನಾವು ಕೇಳುತ್ತಿರುವುದು ಬಂಗಲೆ, ಕಾರು, ಎಸ್ಟೇಟ್ನಲ್ಲಿ ಜೀವನ ಸಾಗಿಸುವುದಕ್ಕೆ ಅಲ್ಲ. ಮಕ್ಕಳಿಗೆ ಒಳ್ಳೆಯಶಿಕ್ಷಣ ಹಾಗೂ ಮುಖ್ಯವಾಗಿ ನಮ್ಮ ನಿವೃತ್ತಿಯ ನಂತರದಲ್ಲಿ ನಾವು ಭಿಕ್ಷೆ ಬೇಡಿ ಬೀದಿ ಹೆಣವಾಗಿ ಸಾಯಬಾರದು, ನಮ್ಮ ಜೀವನಕ್ಕೆ ಭದ್ರತೆ ಬೇಕು ಅಂತ.
ನಿಜವಾಗಿಯೂ ನಿಮಗೆ ಆತ್ಮಸಾಕ್ಷಿ ಮತ್ತು ಸಾರಿಗೆ ನೌಕರರ ಮೇಲೆ ಕಾಳಜಿ ಇದ್ದರೆ ನಿಮ್ಮ ಮಾತಿನಂತೆ ನಡೆಯಿರಿ. ಇಲ್ಲದಿದ್ದಲ್ಲಿ ನೀವೂ ಎಲ್ಲಾ ಪಕ್ಷಗಳ ಹಾಗೆ ಅಧಿಕಾರಕ್ಕೆ ಅಷ್ಟೇ ನಿಮ್ಮ ಆಶ್ವಾಸನೆ ಅಂತ ಹೇಳಿ. ಎಲ್ಲಾ ಸಾರಿಗೆ ಕಾರ್ಮಿಕರು ಹಾಗೂ ಅವರ ಕುಟುಂಬಕ್ಕೆ ನಿಮ್ಮ ಕೈಯಾರೆ ವಿಷ ಕೊಟ್ಟು ಪುಣ್ಯ ಸಂಪಾದಿಸಿ ಕೊಳ್ಳಿ.ಇದು ನಮ್ಮ ಕೋಪ ಅಲ್ಲ, ನಮ್ಮ ಜೀವನದ ಸಂಘರ್ಷ.
Super yavude kaaranakku integedu kolla bedi