CRIMENEWS

ನ್ಯಾಯಾಲಯದ ಆದೇಶ ಪಾಲಿಸದ KKRTC: ಮೃತರ ಕುಟುಂಬಕ್ಕೆ 36 ಲಕ್ಷ ರೂ. ಪರಿಹಾರ ನೀಡದಕ್ಕೆ ಔರಾದ್ ಘಟಕದ 2ಬಸ್‌ಗಳ ಜಪ್ತಿ

ಔರಾದ್ ಬಸ್ ಘಟಕದಲ್ಲಿ ಎರಡು ಬಸ್‌ಗಳನ್ನು ಜಪ್ತಿ ಮಾಡಲಾಗಿದೆ. ನ್ಯಾಯಾಲಯದ ದಾಖಲೆಗಳ ಪ್ರಕಾರ, ಮೂಲ ಪರಿಹಾರ ಮೊತ್ತ 31,85,750 ಹಾಗೂ ಬಡ್ಡಿ 4,77,862 ಸೇರಿ ಒಟ್ಟು ನಿ 36,63,612 ಮೊತ್ತವನ್ನು ಪಾವತಿಸದ ಕಾರಣ, ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಕರ ವಿರುದ್ಧ ಜಾರಿ ಪ್ರಕ್ರಿಯೆ ಆರಂಭಿಸಲಾಗಿದೆ.

ವಿಜಯಪಥ ಸಮಗ್ರ ಸುದ್ದಿ

ಔರಾದ್: ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನ್ಯಾಯಾಲಯದ ಆದೇಶದಂತೆ ಪರಿಹಾರ ಮೊತ್ತ ನೀಡಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC) ಔರಾದ್ ಘಟಕದ ಬಸ್‌ಗಳ ಜಪ್ತಿ ಮಾಡಲಾಗಿದೆ.

ಔರಾದ್ ಘಟಕದ ಬಸ್ ಜಪ್ತಿ ಮಾಡಲು ಜಿಲ್ಲೆಯ ಔರಾದ್‌ನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ವಾರಂಟ್ ಹೊರಡಿಸಿದ್ದು, ಅದರಂತೆ ಘಟಕ ಎರಡು ಬಸ್‌ಗಳನ್ನು ಜಪ್ತಿ ಮಾಡಿ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಲಾಗಿದೆ.

ಅಪಘಾತದಿಂದ ಮೃತಪಟ್ಟ ಕುಟುಂಬಕ್ಕೆ 36.63 ಲಕ್ಷ ಪರಿಹಾರ ಪಾವತಿಸದ ಹಿನ್ನೆಲೆಯಲ್ಲಿ ಕೆಕೆಆರ್‌ಟಿಸಿ ವಿರುದ್ಧ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಅಪಘಾತ ಪರಿಹಾರ ಪ್ರಕರಣದಲ್ಲಿ ಪರಿಹಾರ ನೀಡದ ಸಂಸ್ಥೆ ವಿರುದ್ಧ ಸುವರ್ಣಾ ವೀರಭದ್ರ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅರ್ಜಿದಾರರಿಗೆ 36.63 ಲಕ್ಷ ರೂ.ಪರಿಹಾರ ನೀಡುವಂತೆ ಆದೇಶಿಸಿತ್ತು. ಆದರೆ, ನಿಗದಿತ ಅವಧಿಯೊಳಗೆ ಮೊತ್ತ ಪಾವತಿಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆಸ್ತಿ ಜಪ್ತಿಗೆ ಆದೇಶ ನೀಡಿದೆ.

ಹೀಗಾಗಿ ಔರಾದ್ ಬಸ್ ಘಟಕದಲ್ಲಿ ಎರಡು ಬಸ್‌ಗಳನ್ನು ಜಪ್ತಿ ಮಾಡಲಾಗಿದೆ. ನ್ಯಾಯಾಲಯದ ದಾಖಲೆಗಳ ಪ್ರಕಾರ, ಮೂಲ ಪರಿಹಾರ ಮೊತ್ತ 31,85,750 ಹಾಗೂ ಬಡ್ಡಿ 4,77,862 ಸೇರಿ ಒಟ್ಟು ನಿ 36,63,612 ಮೊತ್ತವನ್ನು ಪಾವತಿಸದ ಕಾರಣ, ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಕರ ವಿರುದ್ಧ ಜಾರಿ ಪ್ರಕ್ರಿಯೆ ಆರಂಭಿಸಲಾಗಿದೆ.

ವಾರಂಟ್‌ನಲ್ಲಿ ಡಿಪೋದಲ್ಲಿರುವ ಯಾವುದೇ ಬಸ್‌ ಜಪ್ತಿ ಮಾಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಹಣ ಪಾವತಿಯಾಗುವವರೆಗೆ ಜಪ್ತಿ ಪ್ರಕ್ರಿಯೆ ಮುಂದುವರಿಸಲು ಹಾಗೂ ಅದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಬೆಳವಣಿಗೆ ಸಾರಿಗೆ ನಿಗಮದ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಏನಿದು ಪ್ರಕರಣ?: 2024ರ ಫೆಬ್ರವರಿ 28ರಂದು ಕಮಲನಗರ ಸಮೀಪ ಕೆಕೆಆರ್‌ಟಿಸಿ ಬಸ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಮೃತಪಟ್ಟ ವೀರಭದ್ರ ಅವರ ಪತ್ನಿ ಸುವರ್ಣ ಅವರು ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಸುವರ್ಣ ಅವರಿಗೆ ಒಟ್ಟು 36 ಲಕ್ಷ 63 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಆದರೆ ನ್ಯಾಯಾಲಯದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಎರಡು ಸಾರಿಗೆ ಬಸ್‌ಗಳನ್ನು ಜಪ್ತಿ ಮಾಡಲು ನ್ಯಾಯಾಲಯ ಆದೇಶ ನೀಡಿದೆ.

Deva
the authorDeva

Leave a Reply

error: Content is protected !!
Latest news
ನ್ಯಾಯಾಲಯದ ಆದೇಶ ಪಾಲಿಸದ KKRTC: ಮೃತರ ಕುಟುಂಬಕ್ಕೆ 36 ಲಕ್ಷ ರೂ. ಪರಿಹಾರ ನೀಡದಕ್ಕೆ ಔರಾದ್ ಘಟಕದ 2ಬಸ್‌ಗಳ ಜಪ್ತಿ ಸರ್ಕಾರದಿಂದ ಹೊರಬಿತ್ತು ಮಹತ್ವದ ಆದೇಶ: ಇನ್ನುಮುಂದೆ ಸರ್ಕಾರಿ ಪುರುಷ ನೌಕರರು ಪಡೆಯಬಹುದು 6ತಿಂಗಳ ಶಿಶುಪಾಲನಾ ರಜೆ KSRTC: ಇಂದಿನಿಂದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವಿತರಣೆಗೆ ಸರ್ಕಾರದ ಆದೇಶ ಬಿಡದಿ ಟೌನ್ ಶಿಪ್‌: ರೈತರ ವಿರೋಧದ ನಡುವೆಯೂ ಎಕರೆಗೆ 2.14 ಕೋಟಿ ರೂ. ದರ ನಿಗದಿ- ಭೂಸ್ವಾಧೀನಕ್ಕೆ ಮುಂದಾದ ಸರ್ಕಾರ ಕರೆಂಟ್‌ ಬಿಲ್‌: ವಿದ್ಯುತ್ ವಿತರಣಾ ಕಂಪನಿಗಳ ಅನ್ಯಾಯದ ಬಿಲ್ಲಿಂಗ್ ಪದ್ಧತಿಗೆ ಬ್ರೇಕ್‌- KERC ಆದೇಶ ಪಾಲನೆಗೆ ಗ್ರಾಹಕರ... ಗೃಹಲಕ್ಷ್ಮಿಯೋಜನೆಗೆ ಮತ್ತೆ ಹೊಸದಾಗಿ ಅರ್ಜಿ ಸ್ವೀಕರಿಸುವ ಚಿಂತನೆಯಲ್ಲಿ ಸರ್ಕಾರ! ಮೂರು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ‘ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಿಸಲು ಸರ್ಕಾರ ನಿರ್ಧಾರ: ಸಾರಿಗೆ ಸಚಿವ ಬೈರತಿ ... ಹಣ ದುರುಪಯೋಗ, ಕರ್ತವ್ಯ ಲೋಪ ಎಸಗಿದ ಆರೋಪ ಸಾಬೀತು: ಮಹೇಶ್ ಜೋಶಿ ಕಸಾಪ ಆಜೀವ ಸದಸ್ಯತ್ವ ರದ್ದು ಮುಖ್ಯ ಶಿಕ್ಷಕರ ಕಿರುಕುಳಕ್ಕೆ ಬೇಸತು 10ನೇ ತರಗತಿ ವಿದ್ಯಾರ್ಥಿ ಶಾಲಾ ಕಟ್ಟಡದಿಂದ ಜಿಗಿದು ಆತ್ಮಹತ್ಯೆ KSRTC ಎಂಡಿ ಅಕ್ರಮ್‌ಪಾಷ ವರ್ಗಾವಣೆ ಪ್ರಭಾರ ಎಂಡಿಯಾಗಿ ಡಾ.ಆರ್‌. ಸೆಲ್ವಮಣಿ ನೇಮಕ ಮಾಡಿ ಸರ್ಕಾರದ ಆದೇಶ