ಬೆಂಗಳೂರು: ಮೆಜೆಸ್ಟಿಕ್ಗೆ ಬಿಎಂಟಿಸಿಯ ಎರಡು ಬಸ್ಗಳನ್ನು ತೆಗೆದುಕೊಂಡು ಬರುವ ಮುಖಾಂತರ ಪ್ರಯಾಣಿಕರನ್ನು ಇನ್ನಷ್ಟು ಸಮಸ್ಯೆಗೆ ದೂಡಲು ಸಾರಿಗೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಸ್ವತಃ ಪ್ರಯಾಣಿಕರೆ ಕಿಡಿಕಾರುತ್ತಿದ್ದಾರೆ.
ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ನಿನ್ನೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರು ಇಂದು ಕೂಡ ಮುಷ್ಕರವನ್ನು ಮುಂದುವರಿಸಿದ್ದಾರೆ. ಈ ನಡುವೆ ಇಂದು ಮೆಜೆಸ್ಟಿಕ್ಗೆ ಚಾಲಕ ಮತ್ತು ನಿರ್ವಾಹಕರಿಲ್ಲದ ಎರಡು ಬಸ್ಗಳನ್ನು ಖಾಸಗಿ ಚಾಲಕರ ಮೂಲಕ ಕರೆತಂದಿರುವ ಸಾರಿಗೆ ಅಧಿಕಾರಿಗಳು ನೌಕರರು ಮತ್ತು ಪ್ರಯಾಣಿಕರುನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಸಾರಿಗೆ ಅಧಿಕಾರಿಗಳು ಮಾಡುತ್ತಿರುವ ಈ ಎಡವಟ್ಟಿನಿಂದ ಜನರಿಗೆ ತುಂಬ ತೊಂದರೆಯಾಗುವುದು ಖಚಿತವಾಗಿದೆ. ಅಂದರೆ ಮೆಜೆಸ್ಟಿಕ್ಗೆ ಬಂದಿರುವ ಎರಡುವ ಬಸ್ಗಳು ಯಾವ ಮಾರ್ಗದಲ್ಲಿ ಚಲಿಸುತ್ತವೆ ಮತ್ತು ಚಾಲಕ ನಿರ್ವಾಹಕರು ಯಾರು ಎಂಬುವುದೇ ಇಲ್ಲ. ಆದರೆ, ಬೆಂಗಳೂರಿನಲ್ಲಿ ಬಿಎಂಟಿಸಿ ರಸ್ತೆಗಿಳಿದಿವೆ ಎಂದು ಜನರ ದಾರಿ ತಪ್ಪಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಈ ನಡುವೆ ಪ್ರತಿಭಟನಾ ನಿರತ ನೌಕರರು ನಮ್ಮ ಬೇಡಿಕೆ ಈಡೇರುವವರೆಗೂ ಯಾವುದೇ ಬಸ್ಗಳನ್ನು ಚಾಲನೆ ಮಾಡಲು ಬಿಡುವುದಿಲ್ಲ ಎಂದು ಕಡ ಕಂಡಿತವಾಗಿ ಹೇಳುತ್ತಿದ್ದಾರೆ.