ಬೆಂಗಳೂರು: ಮುಷ್ಕರ ನಿರತ ನೌಕರರನ್ನು ಹತ್ತಿಕ್ಕಲು ಸರ್ಕಾರ ಎರಡು ಪ್ಲ್ಯಾನ್‌ಗಳನ್ನು ರೂಪಿಸಿದೆ. ಅದರಲ್ಲಿ ಒಂದು ನಾಳೆಯೊಳಗೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ಎಸ್ಮಾ ಜಾರಿಗೆ ಚಿಂತನೆ. ಮತ್ತೊಂದು ಕಡೆ ಸಾರಿಗೆ ಬಸ್‌ಗಳನ್ನು ಓಡಿಸಲು ಖಾಸಗಿ ಚಾಲಕ ನಿರ್ವಾಹಕರನ್ನು ಹಾಕಲು ಮುಂದಾಗಿದೆ.
ಈ ನಡುವೆ ಪ್ರತಿಭಟನ ನಿರತ ಸಾರಿಗೆ ನೌಕರರು ನಾವು ಈಗಾಗಲೇ ಸತ್ತು ಹೋಗಿದ್ದೇವೆ ನಮ್ಮ ಬೇಡಿಕೆ ಈಡೇರುವವರೆಗೂ ನಾವು ಯಾವುದೇ ಕಾರಣಕ್ಕೂ ಮುಷ್ಕರವನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇನ್ನು ಮೆಜೆಸ್ಟಿಕ್‌ಗೆ ಎರಡು ಬಸ್‌ಗಳನ್ನು ತಂದು ನಿಲ್ಲಿಸಲಾಗಿದೆ. ಇನ್ನೊಂದು ಕಡೆ ಪೊಲೀಸರ ಬಿಗಿ ಬದೋಬಸ್ತ್‌ನಲ್ಲಿ ಖಾಸಗಿ ಚಾಲಕ ಮತ್ತು ನಿರ್ವಾಹಕರನ್ನು ಹಾಕಿಕೊಂಡು ಶಿವಾಜಿನಗರ-ಕಾವಲು ಭೈರಸಂದ್ರ ಮಾರ್ಗವಾಗಿ ಚಾಲನೆ ಮಾಡಲಾಗಿದೆ. ಆದರೆ ನೌಕರರು ಮಾತ್ರ ಇದ್ಯಾವುದಕ್ಕೂ ಸೊಪ್ಪುಹಾಕುತ್ತಿಲ್ಲ.
ಖಾಸಗಿ ಚಾಲಕ ಮತ್ತು ನಿರ್ವಾಹಕರನ್ನು ಕರೆ ತಂದು ಬಸ್ ಚಾಲನೆ ಮಾಡುತ್ತಿದ್ದು, ಇದರಿಂದ ಕೆರಳುತ್ತಿರುವ ನೌಕರರನ್ನು ನಿಯಂತ್ರಿಸುವುದು ಹೇಗೆ? ಮುಂದೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ವುತಾರೋ ಎಂಬ ಆತಂಕವು ಸರ್ಕಾರವನ್ನು ಕಾಡುತ್ತಿದೆ. ಈ ನಡುವೆಯೂ ಖಾಸಗಿ ಚಾಲಕ ಮತ್ತು ನಿರ್ವಾಹಕರ ಕರೆತಂದು ಮುಷ್ಕರ ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುವುದು ಮಧ್ಯಾಹ್ನದ ಹೊತ್ತಿಗೆ ಗೊತ್ತಾಗಲಿದೆ.
ಸೂಪರ್