NEWSದೇಶ-ವಿದೇಶ

8ನೇ ವೇತನ ಆಯೋಗ: ಸಲಹೆ ಸಂಗ್ರಹಕ್ಕೆ ಸರ್ಕಾರ ಕೊಟ್ಟಿದ್ದ ಗಡುವು ಇಂದಿಗೆ ಮುಕ್ತಾಯ- ವರದಿ ಸಲ್ಲಿಕೆಯೊಂದೇ ಬಾಕಿ

ಕನಿಷ್ಠ ಮೂಲ ವೇತನ 18 ಸಾವಿರ ರೂ.ಗಳಿಂದ 69 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಎಂದು ಆಯೋಗದ ಮುಂದೆ ಮಹತ್ವದ ಬೇಡಿಕೆಗಳನ್ನು ಇಟ್ಟಿರುವ ಕೇಂದ್ರ ಸರ್ಕಾರಿ ನೌಕರರ ಒಕ್ಕೂಟವಾದ ನ್ಯಾಷನಲ್ ಕೌನ್ಸಿಲ್ – ಜಾಯಿಂಟ್ ಕನ್ಸಲ್ಟೇಟಿವ್ ಮೆಕಾನಿಸಂ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಕೇಂದ್ರ ಸರ್ಕಾರಿ ನೌಕರರಿಗೆ 1 ಜನವರಿ 2026 ರಿಂದ ಪೂರ್ವಾನ್ವಯವಾಗುವಂತೆ 8ನೇ  ವೇತನ ಆಯೋಗ ಜಾರಿಯಾಗಬೇಕಿದೆ.  ಈ ಹಿನ್ನೆಲೆಯಲ್ಲಿ  ಮೂಲ ವೇತನ 18 ಸಾವಿರದಿಂದ 69 ಸಾವಿರ ರೂ.ಗಳಿಗೆ  ಹೆಚ್ಚಳ ಮಾಡಬೇಕು ಎಂದು ಆಯೋಗದ ಮುಂದೆ ಮಹತ್ವದ ಬೇಡಿಕೆಗಳನ್ನು ಕೇಂದ್ರ ಸರ್ಕಾರಿ ನೌಕರರ ಒಕ್ಕೂಟವಾದ ನ್ಯಾಷನಲ್ ಕೌನ್ಸಿಲ್ – ಜಾಯಿಂಟ್ ಕನ್ಸಲ್ಟೇಟಿವ್ ಮೆಕಾನಿಸಂ ಇಟ್ಟಿವೆ.

ಈ ಸಂಬಂಧ  ಕೇಂದ್ರ ಸರ್ಕಾರ 2025ರ ನವೆಂಬರ್‌ 3ರಂದು ರಚಿಸಿರುವ 8ನೇ ಕೇಂದ್ರ ವೇತನ ಆಯೋಗ ಸಮಿತಿ (8th Central Pay Commission) ನೌಕರರ ಸಲಹೆ ಪಡೆದು ಅಂತಿಮ ವರದಿಗೊಳಿಸುವ ದಿನಾಂಕ ಇಂದಿಗೆ ಜೂನ್‌ 15ಕ್ಕೆ ಮುಗಿದೆ.

ಅಂದರೆ, 2026ರ ಜೂನ್‌ 15ರಂದು ಸಮಿತಿಯು ನೌಕರರು, ನೌಕರರ ಸಂಘಟನೆಗಳ ಜತೆ ಚರ್ಚಿಸಿ ಅಲ್ಲಿ ಬಂದ ಸಲಹೆ ನಿರ್ದೇಶನಗಳನ್ನು ಕಲೆಹಾಕಿ ಆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಹೀಗಾಗಿ ಸಲಹೆ ಮತ್ತು ನಿರ್ದೇಶನಗಳನ್ನು ಪಡೆಯಲು ಇಂದು ಅಂತಿಮ ದಿನವಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ವೇತನ ಆಯೋಗ ಸಮಿತಿಯು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವುದಷ್ಟೇ ಬಾಕಿಯಿದೆ. ಇದರಿಂದ ಕೇಂದ್ರ ಸರ್ಕಾರದ ಸುಮಾರು 50 ಲಕ್ಷ ನೌಕರರು ಮತ್ತು 69 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರ ವೇತನ, ಭತ್ಯೆ ಹಾಗೂ ಪಿಂಚಣಿ ಪರಿಷ್ಕರಣೆ ಮಾಡುವ ಜವಾಬ್ದಾರಿ ಹೊಂದಿದ್ದು, ಇದರ ಲಾಭ ನೌಕರರಿಗೆ ಇನ್ನಷ್ಟೇ ಸಿಗಬೇಕಿದೆ.

8ನೇ ವೇತನ ಆಯೋಗ: ನವೆಂಬರ್ 3, 2025 ರಂದು ಕೇಂದ್ರ ಸರ್ಕಾರವು ಗೆಜೆಟ್ ಅಧಿಸೂಚನೆ ಹೊರಡಿಸುವ ಮೂಲಕ ಆಯೋಗವನ್ನು ರಚಿಸಿದೆ. ಈ ಹೊಸ ವೇತನ ಆಯೋಗದ ಶಿಫಾರಸುಗಳನ್ನು 1 ಜನವರಿ 2026 ರಿಂದ ಪೂರ್ವಾನ್ವಯವಾಗುವಂತೆ (Retrospectively) ಜಾರಿಗೊಳಿಸುವ ನಿರೀಕ್ಷೆಯಿದೆ.

ಈ ನಡುವೆ ಸರ್ಕಾರ MyGov ಪೋರ್ಟಲ್ ಮೂಲಕ 18 ಪ್ರಶ್ನೆಗಳನ್ನು ಹಾಕಿ ಸಾರ್ವಜನಿಕರು ಹಾಗೂ ನೌಕರರ ಅಭಿಪ್ರಾಯ ಸಂಗ್ರಹಿಸಲು 31 ಮಾರ್ಚ್ 2026ರವರೆಗೆ ಅವಕಾಶ ನೀಡಿತ್ತು. ಆ ಅವಧಿಯಲ್ಲಿ ಸಮರ್ಪಕವಾದ ಸಲಹೆ ಬಾರದಿರುವುದರಿಂದ ಮತ್ತೆ ಕೇಂದ್ರ ಸರ್ಕಾರಿ ನೌಕರರ ಒಕ್ಕೂಟಗಳು ಮತ್ತು ಆಸಕ್ತ ಗುಂಪುಗಳು ತಮ್ಮ ಮನವಿ ಪತ್ರಗಳನ್ನು (Memorandums) ಸಲ್ಲಿಸುವ ಕೊನೆಯ ದಿನಾಂಕವನ್ನು ಜೂನ್ 15, 2026 ರವರೆಗೆ ವಿಸ್ತರಿಸಲಾಗಿತ್ತು.

ನೌಕರರ ಪ್ರಮುಖ ಬೇಡಿಕೆಗಳು (NC-JCM ಪ್ರಸ್ತಾವನೆ) ಕೇಂದ್ರ ಸರ್ಕಾರಿ ನೌಕರರ ಒಕ್ಕೂಟವಾದ ನ್ಯಾಷನಲ್ ಕೌನ್ಸಿಲ್ – ಜಾಯಿಂಟ್ ಕನ್ಸಲ್ಟೇಟಿವ್ ಮೆಕಾನಿಸಂ (NC-JCM) ಆಯೋಗದ ಮುಂದೆ ಮಹತ್ವದ ಬೇಡಿಕೆಗಳನ್ನು ಇಟ್ಟಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ

ಕನಿಷ್ಠ ವೇತನ ಹೆಚ್ಚಳ: ಪ್ರಸ್ತುತ ಇರುವ ಕನಿಷ್ಠ ಮೂಲ ವೇತನವನ್ನು ₹18,000 ರಿಂದ ₹69,000 ಕ್ಕೆ ಏರಿಸಬೇಕು ಎಂದು ಒತ್ತಾಯಿಸಿವೆ. ಅಲ್ಲದೆ ಪ್ರಸ್ತುತ ಇರುವ 2.57ರ ಫಿಟ್‌ಮೆಂಟ್ ಅಂಶವನ್ನು 3.83 ಕ್ಕೆ ಹೆಚ್ಚಿಸಬೇಕೆಂದು ನೌಕರರ ಸಂಘಟನೆಗಳು ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿವೆ.

ಬಡ್ತಿ ಮತ್ತು ಉದ್ಯೋಗ ಹಂತಗಳು: ಪ್ರಸ್ತುತ ಇರುವ 18 ಉದ್ಯೋಗ ಹಂತಗಳನ್ನು ಸರಳಗೊಳಿಸಿ, ಪ್ರತಿಯೊಬ್ಬ ನೌಕರನಿಗೆ ಆತನ ಸೇವಾವಧಿಯಲ್ಲಿ ಕನಿಷ್ಠ 5 ಬಡ್ತಿಗಳನ್ನು (Promotions) ನೀಡಬೇಕು ಎಂದು ಕೋರಲಾಗಿದೆ.

ವೇತನ ಮತ್ತು ಪಿಂಚಣಿ ಹೆಚ್ಚಳ: ಇನ್ನು ಕೇಂದ್ರ ಸರ್ಕಾರ ಅಂತಿಮವಾಗಿ ಒಪ್ಪಿಕೊಳ್ಳುವ ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ಸಂಬಳ ನಿರ್ಧಾರವಾಗುತ್ತದೆ. ತಜ್ಞರ ಅಂದಾಜಿನ ಪ್ರಕಾರ ವೇತನ ಮತ್ತು ಪಿಂಚಣಿಯಲ್ಲಿ ಸರಾಸರಿ 20% ರಿಂದ 25% ರಷ್ಟು ನೈಜ ಹೆಚ್ಚಳವಾಗುವ ಸಾಧ್ಯತೆಯಿದೆ.

ತುಟ್ಟಿಭತ್ಯೆ (DA) ವಿಲೀನ: ಹೊಸ ವೇತನ ಶ್ರೇಣಿ ಜಾರಿಗೆ ಬರುವಾಗ, ಆ ಹೊತ್ತಿಗಿರುವ ತುಟ್ಟಿಭತ್ಯೆಯನ್ನು (DA) ಮೂಲ ವೇತನದಲ್ಲಿ ವಿಲೀನಗೊಳಿಸಲಾಗುತ್ತದೆ. ತದನಂತರ ಹೊಸ ರಚನೆಯಲ್ಲಿ DA ಶೂನ್ಯದಿಂದ (Zero) ಆರಂಭವಾಗುತ್ತದೆ. ಹೀಗಾಗಿ ಡಿಎ ವಿಲೀನ ಮಾಡಿದ ಬಳಿಕ ವೇತನ ಹೆಚ್ಚಳ ಮಾಡಬೇಕು ಎಂಬ ಒತ್ತಾಯ ಮಾಡಲಾಗಿದೆ.

ನಿವೃತ್ತ ಪಿಂಚಣಿದಾರರಿಗೆ ಲಾಭ: ಕನಿಷ್ಠ ಪಿಂಚಣಿ ಮೊತ್ತವು ಗಣನೀಯವಾಗಿ ಏರಿಕೆಯಾಗಲಿದ್ದು, NPS ಅಥವಾ UPS ಪಿಂಚಣಿ ಯೋಜನೆಗಳಲ್ಲಿ ಅಗತ್ಯ ಮಾರ್ಪಾಡುಗಳನ್ನು ನಿರೀಕ್ಷಿಸಲಾಗುತ್ತಿದ್ದು, ಕೇಂದ್ರ ಸರ್ಕಾರ ಅಗತ್ಯ ಮಾರ್ಪಾಡುಗಳನ್ನು ಮಾಡಿದ್ದಲ್ಲಿ ಪಿಂಚಣಿದಾರರಿಗೆ ಹೆಚ್ಚಿನ ಲಾಭ ಸಿಗಲಿದೆ.

ಹಿಂಬಾಕಿ (Arrears): ಆಯೋಗದ ವರದಿ ಸಲ್ಲಿಕೆ ಮತ್ತು ಸರ್ಕಾರದ ಅಂತಿಮ ನಿರ್ಧಾರ ತಡವಾದರೆ, 1 ಜನವರಿ 2026 ರಿಂದ ಅನ್ವಯವಾಗುವಂತೆ ನೌಕರರಿಗೆ ಹಲವಾರು ತಿಂಗಳ ಬಾಕಿ ಸಂಬಳ (Arrears) ಒಟ್ಟಿಗೆ ಸಿಗಲಿದೆ. ರಾಜ್ಯ ಸರ್ಕಾರಿ ನೌಕರರ ಮೇಲಿನ ಪ್ರಭಾವ ಕೇಂದ್ರ ವೇತನ ಆಯೋಗದ ಶಿಫಾರಸುಗಳು ನೇರವಾಗಿ ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ. ಆದರೆ, ಸಾಮಾನ್ಯವಾಗಿ ಕೇಂದ್ರ ಸರ್ಕಾರವು ಇದನ್ನು ಜಾರಿಗೊಳಿಸಿದ ನಂತರ, ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯ ಸರ್ಕಾರಗಳು ತಮ್ಮದೇ ಆದ ಸ್ವತಂತ್ರ ರಾಜ್ಯ ವೇತನ ಆಯೋಗಗಳನ್ನು ರಚಿಸಿ, ಕೇಂದ್ರದ ಮಾದರಿಯಲ್ಲೇ ವೇತನ ಪರಿಷ್ಕರಣೆ ಮಾಡುತ್ತವೆ.

Deva
the authorDeva

Leave a Reply

error: Content is protected !!
Latest news
ಇಂದಿನಿಂದ KSRTC ಬಸ್‌ನಲ್ಲಿ ಯಾವುದೇ ವಿಶೇಷ ಕಾರ್ಡ್‌ ಇಲ್ಲದೆ ಮಹಿಳೆಯರ ಮುಕ್ತ ಪ್ರಯಾಣಕ್ಕೆ ಅವಕಾಶ- "ಪ್ರಿಯದರ್ಶಿನಿ ಯ... ಪೆಟ್ರೋಲ್, ಡೀಸೆಲ್‌ಗೆ ಪರ್ಯಾಯವಾಗಿ ನೂರಕ್ಕೆ ನೂರರಷ್ಟು ಎಥನಾಲ್ ಬಳಕೆ: ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತ 8ನೇ ವೇತನ ಆಯೋಗ: ಸಲಹೆ ಸಂಗ್ರಹಕ್ಕೆ ಸರ್ಕಾರ ಕೊಟ್ಟಿದ್ದ ಗಡುವು ಇಂದಿಗೆ ಮುಕ್ತಾಯ- ವರದಿ ಸಲ್ಲಿಕೆಯೊಂದೇ ಬಾಕಿ ಬೇಕಾಬಿಟ್ಟಿ ಗ್ಯಾರಂಟಿಗಳ ಕೊಡುವುದರಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ: ಸರ್ಕಾರಗಳಿಗೆ ಎಚ್ಚರಿಕೆ ನೀಡಿ ವಿತ್ತ... ಲಾರಿ ಓವರ್‌ಟೇಕ್‌ ಮಾಡುವ ವೇಳೆ ಚಾಲಕನ ನಿಯಂತ್ರ ಕಳೆದುಕೊಂಡ ಕಾರು ಪಲ್ಟಿ: ದಂಪತಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ, ಆತಂಕಬೇಡ: ಸಿಎಂ ಶಿವಕುಮಾರ್‌ ಭರವಸೆ KSRTC ಕನಕಪುರ ಘಟಕದಲ್ಲಿ ಚಾಲಕನ ಮೇಲೆ ಹಲ್ಲೆ ಮಾಡಿದ ನಾಲ್ವರ ಅಮಾನತು ಸಿಎಂ ತವರಲ್ಲೇ KSRTC ಚಾಲನಕನ ಮೇಲೆ ಹಲ್ಲೆ, ಗೂಂಡಾ ವರ್ತನೆ: ಡಿಎಂ ಎದುರೇ ಘಟಕದಲ್ಲಿ ರೌಡಿಸಂ ನೌಕರನ ವಿರುದ್ಧ ಸಾಬೀತಾಗಿರುವ ದುರ್ನಡತೆಗೆ ಹೋಲಿಸಿದರೆ ಆತನ ವಜಾ ಮಾಡಿರುವುದು ಕಾನೂನುಬಾಹಿರ,ಅತ್ಯಂತ ಕಠಿಣ ಶಿಕ್ಷೆ: ಸು... ತಜ್ಞರ ಸಲಹೆ ಪಡೆದು ಪಾಲಿಕೆ ಆಯವ್ಯಯ ಅನುದಾನ ಬಳಕೆ : GBA ದಕ್ಷಿಣ ಆಯುಕ್ತ