NEWSನಮ್ಮರಾಜ್ಯ

ಮೃತ ಗೃಹಲಕ್ಷ್ಮಿಯರ ಬ್ಯಾಂಕ್‌ ಖಾತೆ ಸೇರಿದೆ ಬರೋಬರಿ 79.75 ಕೋಟಿ ರೂ.ಗೂ ಹೆಚ್ಚು ಹಣ

ಸದ್ಯ ಈಗ ಸಿಕ್ಕಿರುವ ಮಾಹಿತಿ ಪ್ರಕಾರ 68,776 ಮೃತ ಮಹಿಳೆಯರ ಅಕೌಂಟ್‌ಗೆ ಹಣ ಜಮೆ ಆಗಿದೆ. ಅದೂ ಕೂಡ ಒಂದಲ್ಲ ಎರಡಲ್ಲ ಬರೋಬ್ಬರಿ 79 ಕೋಟಿ ರೂಪಾಯಿ ಸರ್ಕಾರದ ಹಣ ಈ ಮೃತರ ಬ್ಯಾಂಕ್‌ ಖಾತೆಗಳನ್ನು ಸೇರಿದೆ. ಅಂದರೆ ಪಕ್ಕ ಲೆಕ್ಕಾಚಾರ ಹಾಕಿ ಹೇಳಬೇಕು ಎಂದರೆ ಬರೋಬ್ಬರಿ 79 ಕೋಟಿ 75 ಲಕ್ಷದ 66 ಸಾವಿರ ರೂ.ಗಳು ಮೃತ ಮಹಿಳೆಯರ ಅಕೌಂಟ್‌ಗೆ ಜಮೆಯಾಗಿದೆ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳ ಮೇಜರ್‌ ಸರ್ಜರಿಗೆ ಮುಂದಾಗಲು ಪ್ರಮುಖ ಕಾರಣಗಳೇನು ಎಂಬುದನ್ನು ಸರ್ಕಾರ ಬಹಿರಂಗಪಡಿಸಿದೆ. ಅನರ್ಹರ ಖಾತೆಗಳಿಗೂ ಗೃಹಲಕ್ಷ್ಮಿ ಹಣ ಹೋಗುತ್ತಿದೆ. ಇದೆಲ್ಲವನ್ನೂ ಸರಿಪಡಿಸಲು ಯೋಜನೆ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ 1 ಕೋಟಿ 24 ಲಕ್ಷ ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ. ಈ ಗೃಹಲಕ್ಷ್ಮಿ ಹಣ ಭಾರಿ ಪ್ರಮಾಣದಲ್ಲಿ ದುರುಪಯೋಗವಾಗುತ್ತಿದ್ದು, ಅದರ ತಡೆಗೆ ಸಿಎಂ ಡಿ.ಕೆ.ಶಿವಕುಮಾರ್‌ ಸರ್ಕಾರದ ಹೊಸ ಹೆಜ್ಜೆಯಿಟ್ಟಿದೆ.

ಇನ್ನು ಸತ್ತವರ ಹೆಸರಿಗೂ ದುಡ್ಡು, ಹೆಸರೇ ಇಲ್ಲದ ಬ್ಯಾಂಕ್‌ಗೂ ಹಣ ಪಾವತಿ, ಕರ್ನಾಟಕದಲ್ಲಿ ಇಲ್ಲದೇ ಇರುವ ಬ್ಯಾಂಕ್‌ಗಳಿಗೂ ಖಾತೆಗೂ ಹಣ ಜಮೆಯಾಗಿರುವುದು ಬೆಳಕಿಗೆ ಬಂದಿದೆ.

ಹೀಗಾಗಿ ಗೃಹಲಕ್ಷ್ಮೀ ಯೋಜನೆಯಲ್ಲಿ ಸತ್ತವರ ಹೆಸರಿಗೂ ಹಣ ಜಮೆಯಾಗಿರುವುದು ಖಚಿತವಾದ ಹಿನ್ನೆಲೆಯಲ್ಲಿ ಈ ಪತ್ತೆಕಾರ್ಯ ಚುರುಕುಗೊಂಡಿದೆ. ಸದ್ಯ ಈಗ ಸಿಕ್ಕಿರುವ ಮಾಹಿತಿ ಪ್ರಕಾರ 68,776 ಮೃತ ಮಹಿಳೆಯರ ಅಕೌಂಟ್‌ಗೆ ಹಣ ಜಮೆ ಆಗಿದೆ. ಅದೂ ಕೂಡ ಒಂದಲ್ಲ ಎರಡಲ್ಲ ಬರೋಬ್ಬರಿ 79 ಕೋಟಿ ರೂಪಾಯಿ ಸರ್ಕಾರದ ಹಣ ಈ ಮೃತರ ಬ್ಯಾಂಕ್‌ ಖಾತೆಗಳನ್ನು ಸೇರಿದೆ. ಅಂದರೆ ಪಕ್ಕ ಲೆಕ್ಕಾಚಾರ ಹಾಕಿ ಹೇಳಬೇಕು ಎಂದರೆ ಬರೋಬ್ಬರಿ 79 ಕೋಟಿ 75 ಲಕ್ಷದ 66 ಸಾವಿರ ರೂ.ಗಳು ಮೃತ ಮಹಿಳೆಯರ ಅಕೌಂಟ್‌ಗೆ ಜಮೆಯಾಗಿದೆ.

ಇನ್ನು ಮೃತರ ಖಾತೆಗಳಿಗೆ ಜಮೆಯಾಗಿರುವ ಹಣವನ್ನು ವಾಪಸ್ ಪಡೆಯಲು ಸರ್ಕಾರ ಈಗ ಮುಂದಾಗಿದ್ದು, ಒಟ್ಟು 92 ಬ್ಯಾಂಕ್‌ಗಳಿಗೆ ಗೃಹಲಕ್ಷ್ಮೀಯರ ಮರಣದ ನಂತರವೂ ಹಣ ಪಾವತಿಯಾಗಿರುವುದು ಗೊತ್ತಾಗಿದೆ.

ಸತ್ತವರ ಹೆಸರಲ್ಲಿ ಹಣ ಪಡೆದಿದ್ದು ಯಾರು? ಯಾರ ಅಕೌಂಟ್‌ಗೆ ಹಣ ಜಮೆ ಆಯ್ತು? ಮೃತರಾದ್ರೂ ಹಣ ಪಡೆಯುತ್ತಿರೋದ್ಯಾರು ಎಂಬುದನ್ನು ಪರಿಶೀಲಿಸಲು ಸರ್ಕಾರ ಮುಂದಾಗಿದೆ. ಹಾಗೆಯೇ, ಮೃತರ ಹೆಸರಲ್ಲಿ ಹಣ ಪಡೆಯುತ್ತಿರುವವರ ಪತ್ತೆ ಕಾರ್ಯಕ್ಕೆ ಸರ್ಕಾರ ಇಳಿದಿದೆ. ಇದರ ಜತೆಗೆ ಈಗಾಗಲೇ ಹಂತಹಂತವಾಗಿ ಹಣ ವಾಪಸ್ ಪಡೆಯುತ್ತಿದೆ.

ಗುರುತಿಸಿದ ಮೃತ ಮಹಿಳೆಯರ ಡಿಬಿಟಿ ಹಣ ಬಂದ್ ಮಾಡಲಾಗಿದೆ. ಮೃತಪಟ್ಟ ಮಹಿಳೆಯರ ಅಕೌಂಟ್‌ನ ಹಣ ಪಡೆಯಲು ಬ್ಯಾಂಕರ್ಸ್, ಬ್ಯಾಂಕ್ ಆಡಳಿತ ಮಂಡಳಿ ಜತೆ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇ-ಗರ್ವನೆನ್ಸ್ ಅಧಿಕಾರಿಗಳು ಸಭೆ ಮಾಡಿದ್ದಾರೆ.

ಹಣ ಡ್ರಾ ಮಾಡದೇ ಇರುವ ಖಾತೆಗಳಿಂದ ಇಲಾಖೆ ಹಣ ವಾಪಾಸ್ ಪಡೆದಿದೆ. ಆದರೆ, ಕೆಲ ಖಾತೆಗಳಲ್ಲಿ ಹಣ ಎಟಿಎಂ ಮೂಲಕ ಡ್ರಾ ಆಗಿದೆ. ಹೊರ ರಾಜ್ಯದ ಬ್ಯಾಂಕ್‌ಗಳಿಂದ ಮಾಹಿತಿ ಬರುತ್ತಿಲ್ಲ. ಮೃತ ಗೃಹಲಕ್ಷ್ಮಿ ಫಲಾನುಭವಿಗಳ ಪತ್ತೆ ಕಾರ್ಯ ಇನ್ನೂ ನಡೆಯುತ್ತಿದೆ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ.

Deva
the authorDeva

Leave a Reply

error: Content is protected !!
Latest news
KSRTC: ಅತೀ ಶೀಘ್ರದಲ್ಲೇ ಶೇ.15ರಿಂದ 20ರಷ್ಟು ಬಸ್‌ ಪ್ರಯಾಣ ದರ ಏರಿಕೆ- ಸುಳಿವುಕೊಟ್ಟ ಮುಖ್ಯಮಂತ್ರಿ ಡಿಕೆಶಿ ವಿದ್ಯುತ್‌ ಖಾಸಗೀಕರಣ ನಿಲ್ಲಿಸಲು ಆಗ್ರಹಿಸಿ ಅತ್ತಹಳ್ಳಿ ದೇವರಾಜ್ ನೇತೃತ್ವದಲ್ಲಿ ಪ್ರತಿಭಟನೆ NWKRTC: ಡೋರ್‌ ಹಾಕದಿದ್ದರೆ, ಚಾಲಕರ ಬಳಿ ಕುಳಿತಿದ್ದರೆ ಕಂಡಕ್ಟರ್‌ ವಿರುದ್ಧ ಪ್ರಕರಣ ದಾಖಲಿಸಿ- ತನಿಖಾಧಿಕಾರಿಗಳಿ ಡಿಸ... ಇದು ನಿಗಮಗೆ ಗೊತ್ತೆ? ಗ್ರಾಚ್ಯುಟಿ, ರಜೆ ನಗದೀಕರಣ ಸೇರಿ 10 ಆದಾಯಗಳ ಮೇಲೆ ಸರ್ಕಾರ ಯಾವುದೇ ತೆರಿಗೆ ವಿಧಿಸುವಂತಿಲ್ಲ 4-6 ತಿಂಗಳಿನಲ್ಲಿ ಬೆಂಗಳೂರಿನ ರಸ್ತೆಗಳಿಗೆ ಹೊಸ ಲುಕ್‌: ಸಚಿವ ಕೃಷ್ಣ ಬೈರೇಗೌಡ BMTC ಬಸ್‌- ಬೈಕ್‌ಗೆ ಡಿಕ್ಕಿ: ಬೈಕ್‌ನಲ್ಲಿದ್ದ ಮಗು, ದಂಪತಿ ಸೇರಿ ಮೂವರು ಮೃತ ಮತ್ತೊಂದು ಮಗುವಿನ ಸ್ಥಿತಿ ಚಿಂತಾಜನಕ BMTC: ಮುಂದಿನ ವರ್ಷದಿಂದ ನಿರ್ವಾಹಕರ ಮುಂಬಡ್ತಿ ಜೇಷ್ಠತಾ ಪಟ್ಟಿಯಲ್ಲಿ ನಿಧನ, ವಜಾ, ನಿವೃತ್ತರ ಹೆಸರು ಸೇರ್ಪಡೆ ಆಗಲ್ಲ-... ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ಇಂದು KSRTC ನೂತನ ಎಂಡಿಯಾಗಿ ಅಧಿಕಾರ ವಹಿಸಿಕೊಂಡ ಶಿವಕುಮಾರ್ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿದಿದೆ ಪೆಟ್ರೋಲ್, ಡೀಸೆಲ್ ಬೆಲೆ ಕೂಡಲೇ ಕಡಿತಗೊಳಿಸಿ – ಕೇಂದ್ರಕ್ಕೆ ಅಶೋಕ್ ಆಗ್ರಹ