NEWSನಮ್ಮಜಿಲ್ಲೆ

NWKRTC: ಡೋರ್‌ ಹಾಕದಿದ್ದರೆ, ಚಾಲಕರ ಬಳಿ ಕುಳಿತಿದ್ದರೆ ಕಂಡಕ್ಟರ್‌ ವಿರುದ್ಧ ಪ್ರಕರಣ ದಾಖಲಿಸಿ- ತನಿಖಾಧಿಕಾರಿಗಳಿ ಡಿಸಿ ಆದೇಶ

ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತನಿಖಾ ಸಮಯದಲ್ಲಿ ಅನುಸೂಚಿ ಕಾರ್ಯಾಚರಣೆ ಮೇಲಿರುವ ವಾಹನಗಳ ಬಾಗಿಲುಗಳನ್ನು ನಿರ್ವಾಹಕರು ಮುಚ್ಚಿರುವ (Door Close) ಬಗ್ಗೆ ತನಿಖೆಗೊಳಿಸುವುದು ಅವಶ್ಯವಾಗಿದೆ- ಡಿಸಿ

ವಿಜಯಪಥ ಸಮಗ್ರ ಸುದ್ದಿ

ಗದಗ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗದಗ ವಿಭಾಗ ಎಲ್ಲ ಘಟಕಗಳ ಚಾಲನಾ ಸಿಬ್ಬಂದಿ ಅನುಸೂಚಿ ಕಾರ್ಯಾಚರಣೆ ಮೇಲೆ ಇರುವ ವಾಹನಗಳ ಬಾಗಿಲುಗಳು ಹಾಕದಿದ್ದರೆ (Door Close) ಈ ಸಂಬಂಧ ತನಿಖೆಗೊಳಿಸಲಾಗುವುದು ಎಂದು ಎಲ್ಲ ಚಾಲನಾ ಸಿಬ್ಬಂದಿಗಳಿಗೂ ವಿಭಾಗೀಯ ನಿಯಂತ್ರಣಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ವಿಷಯಕ್ಕೆ ಸಂಬಂಧಿಸಿದಂತೆ ಶುಕ್ರವಾರ 19-06-2026 ರಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಅಪಘಾತ ಕುರಿತು ಜರುಗಿದ ವಿಡಿಯೋ ಕಾನ್ಫರೆನ್ಸ್‌ ಸಭೆಯಲ್ಲಿ ಚಾಲನಾ ಸಿಬ್ಬಂದಿಗಳು ಅನುಸೂಚಿ ಕಾರ್ಯಾಚರಣೆಯ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವಾಗ ವಾಹನಗಳ ಬಾಗಿಲುಗಳನ್ನು ಮುಚ್ಚದೆ ಇರುವುದರಿಂದ ಪ್ರಯಾಣಿಕರು ಬಿದ್ದು ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಚರ್ಚಿಸಲಾಗಿದೆ.

ಅಲ್ಲದೆ ನಮ್ಮ ವಿಭಾಗದಲ್ಲಿಯೆ ವಾಹನಗಳ ಬಾಗಿಲುಗಳು ಮುಚ್ಚದಿರುವುದರಿಂದ 4 ಅಪಘಾತಗಳು ಸಂಭವಿಸಿವೆ ಎಂದು ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಅವರು ಅವರು ಗುರುತಿಸಿದ್ದಾರೆ.

ಹೀಗಾಗಿ ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತನಿಖಾ ಸಮಯದಲ್ಲಿ ಅನುಸೂಚಿ ಕಾರ್ಯಾಚರಣೆ ಮೇಲಿರುವ ವಾಹನಗಳ ಬಾಗಿಲುಗಳನ್ನು ನಿರ್ವಾಹಕರು ಮುಚ್ಚಿರುವ (Door Close) ಬಗ್ಗೆ ತನಿಖೆಗೊಳಿಸುವುದು ಅವಶ್ಯವಾಗಿದೆ.

ಆದ್ದರಿಂದ ಇಂದಿನಿಂದಲೇ (ಶುಕ್ರವಾರದಿಂದಲೇ) ಜಾರಿಗೆ ಬರುವಂತೆ ತನಿಖಾ ಸಮಯದಲ್ಲಿ ಕರ್ತವ್ಯ ನೀರತ ಚಾಲನಾ ಸಿಬ್ಬಂದಿಗಳು ಮಾರ್ಗ ಮಧ್ಯೆ ವಾಹನಗಳ ಬಾಗಿಲುಗಳನ್ನು ಹಾಕಿಕೊಂಡು ಕಾರ್ಯಾಚರಣೆಗೊಳಿಸಿರುತ್ತಾರೊ ಅಥವಾ ಇಲ್ಲವೋ? ಎಂಬುವುದನ್ನು ಕಡ್ಡಾಯವಾಗಿ ತನಿಖೆ ಮಾಡಬೇಕು ಎಂದು ಎಲ್ಲ ವಿಭಾಗೀಯ ತನಿಖಾ ಸಿಬ್ಬಂದಿಗಳಿಗೂ ಆದೇಶ ಮಾಡಿದ್ದಾರೆ.

ಇನ್ನು ತನಿಖೆಗೊಳಪಡಿಸಿದ ಸಂದರ್ಭದಲ್ಲಿ ವಾಹನಗಳ ಬಾಗಿಲುಗಳು ಸುಸ್ಥಿತಿಯಲ್ಲಿ/ ದುರಸ್ಥಿ ಸ್ಥಿತಿಯಲ್ಲಿ ಇರುವುದನ್ನು ಕಡ್ಡಾಯವಾಗಿ ಪರಿಶೀಲಿಸುವುದು. ಒಂದು ವೇಳೆ ವಾಹನಗಳ ಬಾಗಿಲುಗಳು ಸುಸ್ಥಿತಿಯಲ್ಲಿದ್ದು, ನಿರ್ವಾಹಕರು ಬಾಗಿಲುಗಳನ್ನು ಮುಚ್ಚದೆ (Door Close) ಬಸ್‌ ಚಾಲನೆಯಲ್ಲಿದ್ದರೆ ಕಡ್ಡಾಯವಾಗಿ ನಿರ್ವಾಹಕರ ಮೇಲೆ ಪ್ರಕರಣವನ್ನು ದಾಖಲಿಸಬೇಕು ಎಂದು ಡಿಸಿ ಆದೇಶದಲ್ಲಿ ಸ್ಪಷ್ಠವಾಗಿ ಹೇಳಿದ್ದಾರೆ.

ಅಲ್ಲದೆ ನಿರ್ವಾಹಕರು ವಾಹನದಲ್ಲಿ ತಮಗೆ ನಿಗದಿಪಡಿಸಿದ ಆಸನದ ಮೇಲೆ ಕುಳಿತುಕೊಳ್ಳದೇ ಚಾಲಕರ ಸೀಟಿನ ಪಕ್ಕದಲ್ಲಿ ಕುಳಿತು ಕರ್ತವ್ಯ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ನಿರ್ವಾಹಕರು ತಮಗೆ ನಿಗದಿಪಡಿಸಿದ ಆಸನದಲ್ಲಿ ಕೂರದ ಚಾಲಕರ ಪಕ್ಕದಲ್ಲಿ ಕುಳಿತಿರುವುದು ಕಂಡು ಬಂದಲ್ಲಿ ಪರಿಶೀಲಿಸಿ ಕಡ್ಡಾಯವಾಗಿ ಅಂತಹ ನಿರ್ವಾಹಕರ ಮೇಲೆ ಪ್ರಕರಣ ದಾಖಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಈ ಎಲ್ಲ ನಿರ್ದೇಶನದಂತೆ ತನಿಖಾ ಸಮಯದಲ್ಲಿ ಕಡ್ಡಾಯವಾಗಿ ಪರಿಸೀಲನೆ ಮಾಡಿ ಲೋಪ-ದೋಷಗಳು ಕಂಡು ಬಂದಲ್ಲಿ ಪ್ರಕರಣಗಳನ್ನು ದಾಖಲಿಸುವಲ್ಲಿ ಅಗತ್ಯ ಕ್ರಮ ಕೈಗೊಂಡು ಕೈಗೊಂಡ ಕ್ರಮಗಳ ಬಗ್ಗೆ ಸಂಚಾರ ಶಾಖೆಗೆ ಕಡ್ಡಾಯವಾಗಿ ಮಾಹಿತಿಯನ್ನು ಸಲ್ಲಿಸಬೇಕು ಎಂದು ಈ ಮೂಲಕ ಆದೇಶಿಸಲಾಗಿದೆ.

Deva
the authorDeva

Leave a Reply

error: Content is protected !!
Latest news
KSRTC: ಅತೀ ಶೀಘ್ರದಲ್ಲೇ ಶೇ.15ರಿಂದ 20ರಷ್ಟು ಬಸ್‌ ಪ್ರಯಾಣ ದರ ಏರಿಕೆ- ಸುಳಿವುಕೊಟ್ಟ ಮುಖ್ಯಮಂತ್ರಿ ಡಿಕೆಶಿ ವಿದ್ಯುತ್‌ ಖಾಸಗೀಕರಣ ನಿಲ್ಲಿಸಲು ಆಗ್ರಹಿಸಿ ಅತ್ತಹಳ್ಳಿ ದೇವರಾಜ್ ನೇತೃತ್ವದಲ್ಲಿ ಪ್ರತಿಭಟನೆ NWKRTC: ಡೋರ್‌ ಹಾಕದಿದ್ದರೆ, ಚಾಲಕರ ಬಳಿ ಕುಳಿತಿದ್ದರೆ ಕಂಡಕ್ಟರ್‌ ವಿರುದ್ಧ ಪ್ರಕರಣ ದಾಖಲಿಸಿ- ತನಿಖಾಧಿಕಾರಿಗಳಿ ಡಿಸ... ಇದು ನಿಗಮಗೆ ಗೊತ್ತೆ? ಗ್ರಾಚ್ಯುಟಿ, ರಜೆ ನಗದೀಕರಣ ಸೇರಿ 10 ಆದಾಯಗಳ ಮೇಲೆ ಸರ್ಕಾರ ಯಾವುದೇ ತೆರಿಗೆ ವಿಧಿಸುವಂತಿಲ್ಲ 4-6 ತಿಂಗಳಿನಲ್ಲಿ ಬೆಂಗಳೂರಿನ ರಸ್ತೆಗಳಿಗೆ ಹೊಸ ಲುಕ್‌: ಸಚಿವ ಕೃಷ್ಣ ಬೈರೇಗೌಡ BMTC ಬಸ್‌- ಬೈಕ್‌ಗೆ ಡಿಕ್ಕಿ: ಬೈಕ್‌ನಲ್ಲಿದ್ದ ಮಗು, ದಂಪತಿ ಸೇರಿ ಮೂವರು ಮೃತ ಮತ್ತೊಂದು ಮಗುವಿನ ಸ್ಥಿತಿ ಚಿಂತಾಜನಕ BMTC: ಮುಂದಿನ ವರ್ಷದಿಂದ ನಿರ್ವಾಹಕರ ಮುಂಬಡ್ತಿ ಜೇಷ್ಠತಾ ಪಟ್ಟಿಯಲ್ಲಿ ನಿಧನ, ವಜಾ, ನಿವೃತ್ತರ ಹೆಸರು ಸೇರ್ಪಡೆ ಆಗಲ್ಲ-... ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ಇಂದು KSRTC ನೂತನ ಎಂಡಿಯಾಗಿ ಅಧಿಕಾರ ವಹಿಸಿಕೊಂಡ ಶಿವಕುಮಾರ್ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿದಿದೆ ಪೆಟ್ರೋಲ್, ಡೀಸೆಲ್ ಬೆಲೆ ಕೂಡಲೇ ಕಡಿತಗೊಳಿಸಿ – ಕೇಂದ್ರಕ್ಕೆ ಅಶೋಕ್ ಆಗ್ರಹ