NEWSಲೇಖನಗಳು

ಅಪ್ಪ ಅಂದ್ರೆ ಭಯ- ಧೈರ್ಯ ಅಪ್ಪ ಅಂದ್ರೆ ಭವಿಷ್ಯದ ಗುರು ಅಪ್ಪ ಅಂದ್ರೆ ಆಲದ ಮರ ಇದಾವುದು ಅಲ್ಲ ಪದಗಳಿಗೆ ನಿಲುಕದ ದೈವ

ಅಪ್ಪ ಅಂದರೆ ಕೇವಲ ಕುಟುಂಬದ ಮುಖ್ಯಸ್ಥರಲ್ಲ. ಕತ್ತೆತರ ದುಡಿದು ಸಾಕುವ ಜೀವಂತ ವಸ್ತುವಲ್ಲ. ಅಪ್ಪ ಅಂದರೆ ಮಕ್ಕಳ ಭವಿಷ್ಯವನ್ನು ಕಟ್ಟಿಕೊಡುವ ಅದ್ಬುತ ಕಲೆಕಾರ ಶಿಲ್ಪಿ. ತಮ್ಮ ಆಸೆಗಳನ್ನೆಲ್ಲ ಬದಿಗಿಟ್ಟು ತನ್ನ ಮಕ್ಕಳ ಕನಸುಗಳನ್ನು ನನಸಾಗಿಸಲು ಜೀವನವಿಡೀ ಶ್ರಮಿಸುವ ಮಹಾನ್ ವ್ಯಕ್ತಿ, ಅದೊಂದು ಶಕ್ತಿ. ತಮ್ಮ ನೋವು, ಕಷ್ಟ, ಚಿಂತೆಗಳನ್ನು ಮರೆಮಾಚಿ ಕುಟುಂಬದ ಸಂತೋಷಕ್ಕಾಗಿ ದುಡಿಯುವ ವ್ಯಕ್ತಿತ್ವವೇ ಅಪ್ಪ.

ವಿಜಯಪಥ ಸಮಗ್ರ ಸುದ್ದಿ

ಪ್ಪ ಮಗುವಿನ ಜೀವನದ ಮೊದಲ ಹೀರೋ. ಮಗು ನಡೆಯಲು ಕಲಿಯುವಾಗ ಕೈ ಹಿಡಿದು ನಡೆಸುವವರು, ಬಿದ್ದಾಗ ಕೈಹಿಡಿದು ಮೇಲೆತ್ತಿ ಕನಸು ಕಾಣಲು ಪ್ರೇರೇಪಿಸುವವನು ಅಪ್ಪ. ಈ ಅಪ್ಪನ ಪ್ರೀತಿ ತಾಯಿಯಂತೆ ಹೊರಗೆ ವ್ಯಕ್ತವಾಗದಿದ್ದರೂ, ಹೃದಯದ ಆಳದಲ್ಲಿ ಅಪಾರವಾದ ಮಮತೆಯನ್ನು ಹೊತ್ತಿರುತ್ತದೆ.

ಅದಕ್ಕೇ ಹೇಳೂತ್ತಿರುವುದು ಅಪ್ಪನ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ತಂದೆಯ ಸ್ಥಾನ ಮತ್ತು ಅಪ್ಪ ಅಮ್ಮನ ಪ್ರೀತಿ ಅತ್ಯಮೂಲ್ಯ ಬೆಲೆಕಟ್ಟಲಾಗದ್ದು. ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕುವರು ಅಪ್ಪ. ಇಂಥ ಅಪ್ಪಂದಿರಿಗೆ ನಾವು ಗೌರವ ಕೊಡಬೇಕು.

ಅಪ್ಪ ಎಂದರೆ ಸಲುಗೆ ಏಕವಚನದಲ್ಲೇ ನಾವು ಕರೆದರೂ ಬೇಸರ ಮಾಡಿಕೊಳ್ಳದ ಆಲದ ಮರ ಅಪ್ಪ. ಹೌದು ಅಪ್ಪ ನೀ ದೇವರು ಈ ಜಗವೆಲ್ಲ ನೀನೆ ಅಪ್ಪ. ಅಪ್ಪ ಎಂಬ ಎರಡಕ್ಷರ ಪವಿತ್ರ ಸಂಕೇತ. ನಾವು ದೇವರನ್ನು ಎಷ್ಟು ಭಯ ಭಕ್ತಿಯಿಂದ ಗೌರವದಿಂದ ಪೂಜಿಸಿ ಆರಾದಿಸುತ್ತೇವೆಯೋ ಹಾಗೇಯೇ ಅಪ್ಪನ ಕಂಡರೂ ಒಂದು ರೀತಿಯ ಭಯ ಭಕ್ತಿ ಗೌರವ ನಮಗೆ ಗೊತ್ತಿಲ್ಲದಂತೆ ಹೆಚ್ಚಾಗುತ್ತಿರುತ್ತದೆ.

ಇನ್ನು ಪ್ರತಿ ವರ್ಷದ ಜೂನ್ ತಿಂಗಳ ಮೂರನೇ ಭಾನುವಾರ ವಿಶ್ವದಾದ್ಯಂತ ತಂದೆಯರ ದಿನಾಚರಣೆಗೆ ಮೀಸಲಾಗಿರುತ್ತದೆ. ಈ ದಿನವನ್ನು ಆಚರಿಸಿ ನಮ್ಮ ಜೀವನದಲ್ಲಿ ತಂದೆಯ ಪಾತ್ರವನ್ನು ಸ್ಮರಿಸುವ, ಅವರ ತ್ಯಾಗ, ಪ್ರೀತಿ ಮತ್ತು ಮಾರ್ಗದರ್ಶನಕ್ಕೆ ಗೌರವ ಸಲ್ಲಿಸುವ ಮರೆಯದ ದಿನವೇ ೀ ತಂದೆಯರ ಅಥವಾ ಅಪ್ಪನ ದಿನಾಚರಣೆ.

ಅಪ್ಪ ಅಂದರೆ ಕೇವಲ ಕುಟುಂಬದ ಮುಖ್ಯಸ್ಥರಲ್ಲ. ಕತ್ತೆತರ ದುಡಿದು ಸಾಕುವ ಜೀವಂತ ವಸ್ತುವಲ್ಲ. ಅಪ್ಪ ಅಂದರೆ ಮಕ್ಕಳ ಭವಿಷ್ಯವನ್ನು ಕಟ್ಟಿಕೊಡುವ ಅದ್ಬುತ ಕಲೆಕಾರ ಶಿಲ್ಪಿ. ತಮ್ಮ ಆಸೆಗಳನ್ನೆಲ್ಲ ಬದಿಗಿಟ್ಟು ತನ್ನ ಮಕ್ಕಳ ಕನಸುಗಳನ್ನು ನನಸಾಗಿಸಲು ಜೀವನವಿಡೀ ಶ್ರಮಿಸುವ ಮಹಾನ್ ವ್ಯಕ್ತಿ, ಅದೊಂದು ಶಕ್ತಿ. ತಮ್ಮ ನೋವು, ಕಷ್ಟ, ಚಿಂತೆಗಳನ್ನು ಮರೆಮಾಚಿ ಕುಟುಂಬದ ಸಂತೋಷಕ್ಕಾಗಿ ದುಡಿಯುವ ವ್ಯಕ್ತಿತ್ವವೇ ಅಪ್ಪ.

ಅಪ್ಪ ಅಂದರೆ ಸದಾ ನೆರಳು ನೀಡುವ ಮರ. ತಾನು ಬಿಸಿಲಿನಲ್ಲಿ ನಿಂತು ಮಕ್ಕಳಿಗೆ ತಂಪಾದ ತಂಗಾಳಿಯ ಜತೆಗೆ ನೆರಳು ನೀಡುವ ಮಹಾನ್ ವ್ಯಕ್ತಿತ್ವ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ನಮಗೆ ಸ್ಪೂರ್ತಿಯಾಗುವ ಧೈರ್ಯದ ಮೂರ್ತಿ. ಅಪ್ಪನ ಅನುಭವದ ಮಾತುಗಳು ಬದುಕಿನ ದಾರಿದೀಪ. ತಪ್ಪು ಮಾಡಿದಾಗ ತಿದ್ದುವ, ಸರಿಯಾದ ದಾರಿಯಲ್ಲಿ ನಡೆಸುವ ಮಾರ್ಗದರ್ಶಕ ಅಪ್ಪ.

ಈ ವೇಗದ ಜೀವನದಲ್ಲಿ ಅನೇಕ ಬಾರಿ ನಾವು ಅಪ್ಪನ ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಆದರೆ ವಯಸ್ಸು ಹೆಚ್ಚಾದಂತೆ ಅವರ ತ್ಯಾಗದ ಮಹತ್ವ ಅರಿವಾಗುತ್ತದೆ. ಮಕ್ಕಳ ಶಿಕ್ಷಣ, ಆರೋಗ್ಯ, ಭವಿಷ್ಯಕ್ಕಾಗಿ ಅವರು ಮಾಡಿದ ಶ್ರಮದ ಮೌಲ್ಯ ಊಹೆಗೆ ನಿಲುಕತ್ತಾಗಿರುತ್ತದೆ. ಅದೇ ಅಪ್ಪ.

ಹಳ್ಳಿಯ ಹೊಲದಲ್ಲಿ ದುಡಿದು ಸಾಕಿ ಸಲಹುವ ಇತರರಿಗೆ ಅನ್ನದಾತನಾಗುವ ಅಪ್ಪನಿಂದ ಹಿಡಿದು ಕಾಂಕ್ರಿಟ್‌ ಕಾಡಿನಲ್ಲಿ ( ನಗರ ಪ್ರದೇಶದಲ್ಲಿ) ಮೇಲಿನವರ ಬೈಗಳಗಳ ನಡುವೆಯೂ ಕೇಳಿಸಂತೆ ದುಡಿಯುವ ಕಾರ್ಮಿಕ, ಉದ್ಯೋಗಿ, ವ್ಯಾಪಾರಿಯಾಗಿರುವ ಅಪ್ಪ ತಮ್ಮ ಕುಟುಂಬದ ಸುಖಕ್ಕಾಗಿ ಹಗಲಿರುಳು ಶ್ರಮಿಸಿ ದಣಿವಾದರೂ ದಣಿವರಿಯದಂತೆ ನಗುಮುಖದಲ್ಲೇ ನಮ್ಮನ್ನು ಕಾಣುವ ದೈವ ಮೂರ್ತಿಯೇ ಅಪ್ಪ. ಈ ನಮ್ಮ ಅಪ್ಪನ ಪರಿಶ್ರಮವೇ ಕುಟುಂಬದ ನೆಮ್ಮದಿಗೆ ಆಧಾರ. ಇದನ್ನೇ ನಾವು ಎಂದೂ ಮರೆಯಬಾರದು.

ಅಪ್ಪನ ಪ್ರೀತಿ ಮಾತುಗಳಲ್ಲಿ ಹೆಚ್ಚು ವ್ಯಕ್ತವಾಗದು. ಕೆಲವೊಮ್ಮೆ ಒಂದು ಸಲಹೆ, ಒಂದು ನಗು, ಒಂದು ಪ್ರೋತ್ಸಾಹದ ಮಾತಿನ ಮೂಲಕವೇ ಅಪ್ಪ ತನ್ನ ಪ್ರೀತಿಯನ್ನ ತೋರಿಸುತ್ತಾನೆ. ಮಕ್ಕಳ ಯಶಸ್ಸಿನಲ್ಲಿ ಸಂತೋಷಪಟ್ಟು, ಮಕ್ಕಳು ಜೀವನದಲ್ಲಿ ಎಡವಿದಾಗ ಧೈರ್ಯ ತುಂಬುವ ಶಕ್ತಿಯೇ ಅಪ್ಪ.

ಇಂಥ ಅಪ್ಪಂದಿರ ದಿನಾಚರಣೆ ಕೇವಲ ಶುಭಾಶಯ ಹೇಳುವ ದಿನವಲ್ಲ. ಇದು ಅವರ ಕಷ್ಟ, ತ್ಯಾಗ ಮತ್ತು ಪ್ರೀತಿಯನ್ನು ನೆನಪಿಸಿಕೊಳ್ಳುವ ಆನಂದಭಾಷ್ಪದೊಂದಿಗೆ ಸ್ಮರಿಸುವ ದಿನ. ನಮ್ಮ ಜೀವನದಲ್ಲಿ ಅಪ್ಪನ ಕೊಡುಗೆಯನ್ನು ಗೌರವಿಸುವ ದಿನ. ಅಪ್ಪನಿಗೆ ಸಮಯ ನೀಡುವುದು, ಕೃತಜ್ಞತೆ ವ್ಯಕ್ತಪಡಿಸುವುದು ಅಪ್ಪನೊಂದಿಗೆ ಸಂತಸದ ಕ್ಷಣ ಹಂಚಿಕೊಳ್ಳುವ ಈ ದಿನದ ನಿಜವಾಗಿಯೂ ಅಪ್ಪನ ದಿನ.

ಜೀವನದ ಪ್ರತಿಯೊಂದು ಹಂತದಲ್ಲೂ ಬೆನ್ನಿಗೆ ನಿಂತು ಬೆಂಬಲ ನೀಡುವ ಅಪ್ಪನ ಋಣ ತೀರಿಸಲು ನಮಗೆ ಸಾಧ್ಯವಿಲ್ಲ. ಆದರೆ ಅಪ್ಪನ ಮೇಲಿನ ಗೌರವ ಏಕವಚನದಲ್ಲಿ ಕರೆದರೂ, ಪ್ರೀತಿ ಮತ್ತು ಕಾಳಜಿಯಲ್ಲಿ ಅವನ ಗುಣ ಸ್ವಲ್ಪವೂ ಕಡಿಮೆಯಾಗುವುದಿಲ್ಲ. ಇತರರಿಗೆ ಬಾಸ್‌, ಅಧಿಕಾರಿ, ಭಯನಾಕ ವ್ಯಕ್ತಿ ಆದರೆ ಮಕ್ಕಳು ಏಕವಚನದಲ್ಲೇ ಕರೆದರೂ ಕೋಪ ಮಾಡಿಕೊಳ್ಳದ ಸದಾ ಒಳಿತನ್ನೇ ಬಯಸುವ ಸಂತಸ ಹಂಚುವ ಚಿಲುಮೆಯೇ ಅಪ್ಪ.

ಈ ಅಪ್ಪನ ದಿನದಂದು ಪ್ರತಿಯೊಬ್ಬರೂ ಅಪ್ಪನಿಗೆ ಹೃತ್ಪೂರ್ವಕ ಧನ್ಯವಾದಗಳ ಸಲ್ಲಿಸೋಣ. ಅಪ್ಪನ ತ್ಯಾಗವನ್ನು ಸ್ಮರಿಸೋಣ. ಅಪ್ಪ ನಮ್ಮ ಜೀವನಕ್ಕೆ ನೀಡಿರುವ ಅಮೂಲ್ಯ ಕೊಡುಗೆಯನ್ನು ಗೌರವಿಸೋಣ. ಇಂಥ ಅಪ್ಪನ ಕಟು ಮಾತಿನ ಹಿಂದಿರುವ ಕಾಳಜಿಗೆ ನಮಿಸುತ್ತ ಅಪ್ಪ ನಿನಗಿದೋ ನಿಮ್ಮ ಮಕ್ಕಳ ಶುಭಾಶಯ.

Deva
the authorDeva

Leave a Reply

error: Content is protected !!
Latest news
ಜೀವನದಲ್ಲಿ ದಿನಂಪ್ರತಿ ಯೋಗಾಭ್ಯಾಸ ಅಳವಡಿಸಿಕೊಳ್ಳಿ: ಡಿಸಿ ಡಾ. ಅನುರಾಧ ಕರೆ ಕೆರೆಗೆ ವೈದ್ಯಕೀಯ ತ್ಯಾಜ್ಯ ಹಾಕಿದ ಆರೋಪ: ಡಾಕ್ಟರ್ ವಿರುದ್ಧ ಎಫ್‌ಐಆರ್ ದಾಖಲು ಬಿಡದಿ ಟೌನ್‌ಶಿಪ್ ವಿರುದ್ಧ ಜೆಡಿಎಸ್‌ ಬೃಹತ್‌ ಪಾದಯಾತ್ರೆ- ಇದು ಕೇವಲ ಭಾಷಣಕ್ಕಷ್ಟೇ ಅಲ್ಲ: ನಿಖಿಲ್ ಕುಮಾರಸ್ವಾಮಿ ಎಚ್... ನಿಂತಿರುವ ಕಾಲೇಜು ವಿದ್ಯಾರ್ಥಿ ಚುನಾವಣೆ ಇದೇ ವರ್ಷದಿಂದ ಮತ್ತೆ ಆರಂಭ: ಸಿಎಂ ಡಿಕೆಶಿ ಅಪ್ಪ ಅಂದ್ರೆ ಭಯ- ಧೈರ್ಯ ಅಪ್ಪ ಅಂದ್ರೆ ಭವಿಷ್ಯದ ಗುರು ಅಪ್ಪ ಅಂದ್ರೆ ಆಲದ ಮರ ಇದಾವುದು ಅಲ್ಲ ಪದಗಳಿಗೆ ನಿಲುಕದ ದೈವ ಗ್ರಾಚ್ಯುಟಿ ಸೇರಿ 10 ಆದಾಯಗಳ ಮೇಲೆ ಸರ್ಕಾರ ಯಾವುದೇ ತೆರಿಗೆ ವಿಧಿಸಲ್ಲ KSRTC: ಅತೀ ಶೀಘ್ರದಲ್ಲೇ ಶೇ.15ರಿಂದ 20ರಷ್ಟು ಬಸ್‌ ಪ್ರಯಾಣ ದರ ಏರಿಕೆ- ಸುಳಿವುಕೊಟ್ಟ ಮುಖ್ಯಮಂತ್ರಿ ಡಿಕೆಶಿ ವಿದ್ಯುತ್‌ ಖಾಸಗೀಕರಣ ನಿಲ್ಲಿಸಲು ಆಗ್ರಹಿಸಿ ಅತ್ತಹಳ್ಳಿ ದೇವರಾಜ್ ನೇತೃತ್ವದಲ್ಲಿ ಪ್ರತಿಭಟನೆ NWKRTC: ಡೋರ್‌ ಹಾಕದಿದ್ದರೆ, ಚಾಲಕರ ಬಳಿ ಕುಳಿತಿದ್ದರೆ ಕಂಡಕ್ಟರ್‌ ವಿರುದ್ಧ ಪ್ರಕರಣ ದಾಖಲಿಸಿ- ತನಿಖಾಧಿಕಾರಿಗಳಿ ಡಿಸ... 4-6 ತಿಂಗಳಿನಲ್ಲಿ ಬೆಂಗಳೂರಿನ ರಸ್ತೆಗಳಿಗೆ ಹೊಸ ಲುಕ್‌: ಸಚಿವ ಕೃಷ್ಣ ಬೈರೇಗೌಡ