KKRTC ನೌಕರರ 14 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಆದೇಶ ಯಾವುದೇ ಸಮಯದಲ್ಲಾದರೂ ಹೊರಬೀಳಬಹುದು
ವೇತನ ಪರಿಷ್ಕರಣೆ ಹಿಂಬಾಕಿ ವೇತನದ ಬಿಲ್ಲುಗಳನ್ನು ಸಲ್ಲಿಸಲು ಜೂ.20ರವರೆಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಬಿಲ್ಲುಗಳನ್ನು ತಯಾರಿ ವಿಭಾಗೀಯ ಲೆಕ್ಕಪತ್ರ ಶಾಖೆಗೆ ಪರಿಶೀಲನೆಗಾಗಿ ಬಹುತೇಕ ಎಲ್ಲ ಡಿಪೋಗಳು ಮಂಡಿಸಿವೆ.

ಯಾದಗಿರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರಿಗೆ 14 ತಿಂಗಳುಗಳ ಹಿಂಬಾಕಿ ವೇತನ ಪಾವತಿಸಲು ಕೇಂದ್ರ ಕಚೇಯಿಂದ ಯಾವುದೇ ಸಮಯದಲ್ಲಾದರೂ ಆದೇಶ ಬರುವ ಸಂಭಂವವಿದೆ ಎಂದು ಯಾದಗಿರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಇನ್ನು ಈ ಸಂಬಂಧ 14 ತಿಂಗಳ ಬಿಲ್ಲುಗಳನ್ನು ತಯಾರಿಸಿ ಜೂನ್ 20 ರೊಳಗಾಗಿ ವಿಭಾಗೀಯ ಲೆಕ್ಕಪತ್ರ ಶಾಖೆಗೆ ಪರಿಶೀಲನೆಗಾಗಿ ಮಂಡಿಸಬೇಕು ಎಂದು ಇದೇ ಜೂನ್ 11ರಂದು ಎಲ್ಲ ಘಟಕಗಳಿಗೂ ಆದೇಶ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಲ್ಲುಗಳನ್ನು ತಯಾರಿ ವಿಭಾಗೀಯ ಲೆಕ್ಕಪತ್ರ ಶಾಖೆಗೆ ಪರಿಶೀಲನೆಗಾಗಿ ಬಹುತೇಕ ಎಲ್ಲ ಡಿಪೋಗಳು ಮಂಡಿಸಿವೆ.
ಬಿಲ್ಲುಗಳನ್ನು ತಯಾರಿಸಿ ವಿಳಂಬಕ್ಕೆ ಆಸ್ಪದ ನೀಡದಂತೆ ಮೇಲೆ ಸೂಚಿಸಿದ ದಿನಾಂಕ ರೊಳಗಾಗಿ ಹಿಂಬಾಕಿ ವೇತನದ ಬಿಲ್ಲುಗಳನ್ನು ತಯಾರಿಸಿ ಲೆಕ್ಕಪತ್ರ ಶಾಖೆಗೆ ಸಲ್ಲಿಸಬೇಕು, ತಪ್ಪಿದ್ದಲ್ಲಿ ವಿಳಂಬಕ್ಕೆ ಕಾರಣರಾದ ಆಡಳಿತ/ ಲೆಕ್ಕಪತ್ರ ಶಾಖೆಯ ಸಿಬ್ಬಂದಿಗಳನ್ನು ನೇರ ಹೊಣೆಗಾರರನ್ನಾಗಿಸಿ ಸೂಕ್ತ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದರು.
ಯಾದಗಿರಿ, ಶಹಾಪೂರ, ಸುರಪೂರ, ಗುರಮಠಕಲ್ ಘಟಕ ಹಾಗೂ ವಿಭಾಗೀಯ ಕಾರ್ಯಾಗಾರದ ಲೆಕ್ಕಪತ್ರ ಶಾಖೆಯಗೆ ಸೂಚನೆ ನೀಡಲಾಗಿತ್ತು. ಇವುಗಳಲ್ಲಿ ಇನು ಕೆಲವರು ಬಿಲ್ಲುಗಳನ್ನು ತಯಾರಿಸಿಲ್ಲ ಎಂದು ತಿಳಿದು ಬಂದಿದ್ದು ಕೂಡಲೇ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು.
ಆದಾಗ್ಯೂ ಬಿಲ್ಲುಗಳನ್ನು ತಯಾರಿಸಿ ಲೆಕ್ಕಪತ್ರ ಶಾಖೆಗೆ ಮಂಡಿಸದೆ ಇರುವ ಡಿಪೋಗಳು ಸೂಕ್ತ ಕಾರಣ ನೀಡಿ ಕೂಡಲೇ ಮಂಡಿಸಬೇಕು ಎಂದು ತಿಳಿಸಿದ್ದಾರೆ.
ಹಿಂದೆ ಸಂಸ್ಥೆಯ ಆದೇಶ: 01.01.2021 ರಿಂದ 28.02.2023 ರವರೆಗೆ ವೇತನ ಪರಷ್ಕರಣೆಯ 26 ತಿಂಗಳ ಹಿಂದಾಕಿ ಮೊತ್ತದಲ್ಲಿ ಮೊದಲ 12 ತಿಂಗಳ ಹಿಂಬಾಕಿ ಮೊತ್ತವನ್ನು ಪಾವತಿಸಲು ವ್ಯವಸ್ಥಾಪಕ ನಿರ್ದೇಶಕರು ಅನುಮೋದನೆ ನೀಡಿದ್ದು ಅದರನ್ವಯ ಆದೇಶ ಹೊರಡಿಸಿ ಮೇ ತಿಂಗಳಿನಲ್ಲಿ 12 ತಿಂಗಳ ವೇತನ ಹಿಂಬಾಕಿಯನ್ನು ನೌಕರರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.
ಸರ್ಕಾರವು ಮೊದಲ ಕಂತಿನಲ್ಲಿ ಕೆಕೆಆರ್‌ಟಿಸಿ ನಿಗಮಕ್ಕೆ 81.91 ಕೋಟಿ ರೂ. ಬಿಡುಗಡೆ ಮಾಡಿ ಆದೇಶಿಸಿದ್ದು ಅದರನ್ವಯ ನಿಗಮದಲ್ಲಿ 01.01.2021 ರಿಂದ 31.12.2021 ವರೆಗೆ ಒಟ್ಟು 12 ತಿಂಗಳ ಹಿಂಬಾಕಿ ಮೊತ್ತವನ್ನು ಮೇ 11ರಂದು ಎಲ್ಲ ಅರ್ಹ ಅಧಿಕಾರಿ/ ನೌಕರರಿಗೆ (ನಿವೃತ್ತ ಅಧಿಕಾರಿ/ನೌಕರರು ಒಳಗೊಂಡಂತೆ) ಪಾವತಿಸಲಾಗಿತ್ತು.
ಇನ್ನೂಳಿದ ಮಾಹೆ 01.01.2022 ರಿಂದ 28.02.2023 ರವರೆಗೆ 14 ತಿಂಗಳುಗಳ ಹಿಂಬಾಕಿ ವೇತನ ಪಾವತಿಸಲು ಕೇಂದ್ರ ಕಚೇಯಿಂದ ಈಗ ಯಾವುದೇ ಸಮಯದಲ್ಲಾದರೂ ಆದೇಶ ಬರುವ ಸಂಭಂವವಿದೆ. ಆದ ಕಾರಣ ಈ ಬಿಲ್ಲುಗಳನ್ನು ತಯಾರಿಸಿ ವಿಭಾಗೀಯ ಲೆಕ್ಕಪತ್ರ ಶಾಖೆಗೆ ಪರಿಶೀಲನೆಗಾಗಿ ಮಂಡಿಸಬೇಕು ಎಂದು ಡಿಸಿ ಆದೇಶ ಹೊರಡಿಸಿದ್ದಾರೆ.







