NEWSನಮ್ಮರಾಜ್ಯ

ಸರ್ಕಾರಿ ನೌಕರಿ ಮಹಿಳೆಯರಿಗೆ ಇನ್ನು ಮುಂದೆ ಸಿಗಲ್ವ ಶಕ್ತಿ ಯೋಜನೆಯ ಉಚಿತ ಪ್ರಯಾಣ?

ಗ್ಯಾರಂಟಿ ಕೊಡಿ ಅಂತಾ ನಾವು ಕೇಳಿರಲಿಲ್ಲ, ಅವರೇ ಕೊಟ್ಟಿದ್ದಾರೆ. ಈಗ ವಾಪಸ್ ತೆಗೆದುಕೊಳ್ಳುತ್ತೇವೆ ಅಂತಿದ್ದಾರೆ. ಶಕ್ತಿ ಯೋಜನೆಯಿಂದ ಮಹಿಳಾ ನೌಕರರಿಗೆ ಅನುಕೂಲ ಆಗುತ್ತಿದೆ. ನಮ್ಮ ಬಳಿ ಚರ್ಚೆ ಮಾಡಿದಾಗ ನಮ್ಮ ಅಭಿಪ್ರಾಯ ತಿಳಿಸುತ್ತೇವೆ -ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರ ಇದೀಗ ಗ್ಯಾರಂಟಿ ಇಕ್ಕಟ್ಟಿನಲ್ಲಿ ಸಿಲುಕಿದೆ. ಸದ್ಯ ಗ್ಯಾರಂಟಿ ಪರಿಷ್ಕರಣೆ ನಡೆಯುತ್ತಿದ್ದು, ಇದೇ ಹೊತ್ತಲ್ಲಿ ಸರ್ಕಾರಿ ನೌಕರರನ್ನು ಗ್ಯಾರಂಟಿ ಯೋಜನೆಗಳಿಂದ ಹೊರಗಿಡಲು ಚಿಂತನೆ ನಡೆಸಿದ್ದು, ಒಂದು ವೇಳೆ ಈ ಆದೇಶ ಹೊರಬಿದ್ದರೆ ಸರ್ಕಾರಿ ಮಹಿಳಾ ನೌಕರರು ಈವರೆಗೂ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿರುವುದಕ್ಕೆ ಕತ್ತರಿ ಬೀಳಲಿದೆ.

ಈಗಾಗಲೇ ಗ್ಯಾರಂಟಿ ಪ್ರಾಧಿಕಾರ ಈ ಬಗ್ಗೆ ಚಿಂತನೆ ನಡೆಸಿದ್ದು, ಸರ್ಕಾರಿ ನೌಕರರ ಕುಟುಂಬಗಳನ್ನು ಗ್ಯಾರಂಟಿ ಯೋಜನೆಗಳಿಂದ (Guarantee Scheme) ಕಡಿತಗೊಳಿಸುವ ಬಗ್ಗೆ ಚರ್ಚಿಸುತ್ತಿದೆ. ಸದ್ಯ ಪ್ರಾಧಿಕಾರವು ಸರ್ಕಾರಿ ನೌಕರರಿಗೆ ಸ್ವಯಂ ಪ್ರೇರಿತವಾಗಿ ಗ್ಯಾರಂಟಿ ಸೌಲಭ್ಯ ಬಿಟ್ಟುಕೊಡಿ ಎಂದು ಸಲಹೆ ನೀಡಿದೆ. ಒಂದು ವೇಳೆ ಬಿಟ್ಟುಕೊಡದಿದ್ದರೆ ಸರ್ಕಾರದಿಂದಲೇ ಅಧಿಕೃತ ಆದೇಶ ಹೊರಡಿಸುವ ಚಿಂತನೆಯನ್ನು ಮಾಡಲಾಗುತ್ತಿದೆ.

ಇನ್ನು ಈ ಕುರಿತು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರು ಮಾತನಾಡಿ, ಜಿಎಸ್‌ಟಿ ಬರುವವರಿಗೆ ಹಾಗೂ ಐಟಿ ಅವರಿಗೆ ಕೊಡಬಾರದು ಅಂತಿದೆ. ಈ ಕುರಿತು ಸರ್ಕಾರಿ ನೌಕರರ ಜತೆ ಚರ್ಚೆ ಮಾಡುತ್ತೇವೆ. ಸರ್ಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಸ್ವಯಂಪ್ರೇರಿತವಾಗಿ ಬಿಟ್ಟುಕೊಡಲು ಸರ್ಕಾರಿ ನೌಕರರ ಸಂಘ ಮತ್ತು ಇತರೆ ಸಂಘಗಳೊಂದಿಗೆ ಚರ್ಚೆ ನಡೆಸುವುದು ಕೂಡ ಗ್ಯಾರಂಟಿ ಪ್ರಾಧಿಕಾರದ ಅಜೆಂಡಾ ಆಗಿದೆ ಎಂದು ಹೇಳಿದ್ದಾರೆ.

ಇದಕ್ಕೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಪ್ರತಿಕ್ರಿಯೆ ನೀಡಿದ್ದು, ಗ್ಯಾರಂಟಿ ಪ್ರಾಧಿಕಾರ ನಮ್ಮ ಬಳಿ ಚರ್ಚೆ ಮಾಡಿದರೆ ನಮ್ಮ ಅಭಿಪ್ರಾಯ ತಿಳಿಸುತ್ತೇವೆ. ಗ್ಯಾರಂಟಿ ಕೊಡಿ ಅಂತಾ ನಾವು ಕೇಳಿರಲಿಲ್ಲ, ಅವರೇ ಕೊಟ್ಟಿದ್ದಾರೆ. ಈಗ ವಾಪಸ್ ತೆಗೆದುಕೊಳ್ಳುತ್ತೇವೆ ಅಂತಿದ್ದಾರೆ. ಶಕ್ತಿ ಯೋಜನೆಯಿಂದ ಮಹಿಳಾ ನೌಕರರಿಗೆ ಅನುಕೂಲ ಆಗುತ್ತಿದೆ. ನಮ್ಮ ಬಳಿ ಚರ್ಚೆ ಮಾಡಿದಾಗ ನಮ್ಮ ಅಭಿಪ್ರಾಯ ತಿಳಿಸುತ್ತೇವೆ ಎಂದಿದ್ದಾರೆ.

ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಜಾರಿಗೆ ಬಂದಿರುವ ಶಕ್ತಿ ಯೋಜನೆಯಿಂದ ಮಹಿಳಾ ನೌಕರರಿಗೆ ಭಾರಿ ಅನುಕೂಲವೇ ಆಗಿದೆ. ಆದರೆ ಅಂದು ಮುಖ್ಯಮಂತ್ರಿಯಾಗಿದ್ದ ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಮಹಿಳೆಯರೂ ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸಬಹುದು ಎಂದು ಹೇಳಿದ್ದರು. ಈಗಿನ ಸಿಎಂ ಈ ಬಗ್ಗೆ ಯೋಚನೆ ಮಾಡುತ್ತಿದ್ದು, ಇದು ಒಂದು ವೇಳೆ ನಿಂತರೆ ಏನಾಗುತ್ತದೆ ಎಂಬುದರ ಬಗ್ಗೆಯೂ ವಿಸ್ತೃತ ಚರ್ಚೆ ಆರಂಭವಾಗಿದೆ.

Deva
the authorDeva

Leave a Reply

error: Content is protected !!
Latest news
KSRTC: ಶೇ.44 ರಷ್ಟು ಬಸ್‌ ಪ್ರಯಾಣ ದರ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಗೃಹಜ್ಯೋತಿಯಿಂದ ಸರ್ಕಾರಿ ನೌಕರರ ಹೊರಗಿಡಲು ಸರ್ಕಾರದ ಚಿಂತನೆ ಸರ್ಕಾರಿ ನೌಕರಿ ಮಹಿಳೆಯರಿಗೆ ಇನ್ನು ಮುಂದೆ ಸಿಗಲ್ವ ಶಕ್ತಿ ಯೋಜನೆಯ ಉಚಿತ ಪ್ರಯಾಣ? KKRTC ನೌಕರರ 14 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಆದೇಶ ಯಾವುದೇ ಸಮಯದಲ್ಲಾದರೂ  ಹೊರಬೀಳಬಹುದು ಜೀವನದಲ್ಲಿ ದಿನಂಪ್ರತಿ ಯೋಗಾಭ್ಯಾಸ ಅಳವಡಿಸಿಕೊಳ್ಳಿ: ಡಿಸಿ ಡಾ. ಅನುರಾಧ ಕರೆ ಕೆರೆಗೆ ವೈದ್ಯಕೀಯ ತ್ಯಾಜ್ಯ ಹಾಕಿದ ಆರೋಪ: ಡಾಕ್ಟರ್ ವಿರುದ್ಧ ಎಫ್‌ಐಆರ್ ದಾಖಲು ಬಿಡದಿ ಟೌನ್‌ಶಿಪ್ ವಿರುದ್ಧ ಜೆಡಿಎಸ್‌ ಬೃಹತ್‌ ಪಾದಯಾತ್ರೆ- ಇದು ಕೇವಲ ಭಾಷಣಕ್ಕಷ್ಟೇ ಅಲ್ಲ: ನಿಖಿಲ್ ಕುಮಾರಸ್ವಾಮಿ ಎಚ್... ನಿಂತಿರುವ ಕಾಲೇಜು ವಿದ್ಯಾರ್ಥಿ ಚುನಾವಣೆ ಇದೇ ವರ್ಷದಿಂದ ಮತ್ತೆ ಆರಂಭ: ಸಿಎಂ ಡಿಕೆಶಿ ಅಪ್ಪ ಅಂದ್ರೆ ಭಯ- ಧೈರ್ಯ ಅಪ್ಪ ಅಂದ್ರೆ ಭವಿಷ್ಯದ ಗುರು ಅಪ್ಪ ಅಂದ್ರೆ ಆಲದ ಮರ ಇದಾವುದು ಅಲ್ಲ ಪದಗಳಿಗೆ ನಿಲುಕದ ದೈವ ಗ್ರಾಚ್ಯುಟಿ ಸೇರಿ 10 ಆದಾಯಗಳ ಮೇಲೆ ಸರ್ಕಾರ ಯಾವುದೇ ತೆರಿಗೆ ವಿಧಿಸಲ್ಲ