NEWSಲೇಖನಗಳು

ಓದಿನ ನೆಪದಲ್ಲಿ ಮಹಾನಗರಗಳ ಮಾಯಾಲೋಕಕ್ಕೆ ಬಂದು ಹಾದಿ ತಪ್ಪುತ್ತಿರುವ ಯುವತಿಯರು!

ಸಾಮಾನ್ಯವಾಗಿ ಹೆಣ್ಣುಮಕ್ಕಳು ದಾರಿ ತಪ್ಪಲು ಕೌಟುಂಬಿಕ ಬಡತನ ಅಥವಾ ಆರ್ಥಿಕ ಅನಿವಾರ್ಯತೆ ಕಾರಣ ಎಂದುಕೊಳ್ಳಲಾಗುತ್ತದೆ. ಆದರೆ ಸದ್ಯದ ಪರಿಸ್ಥಿತಿಯೇ ಬೇರೆ ಇದೆ. ಕೇವಲ 20 ವರ್ಷ ದಾಟದ ಯುವತಿಯರು ಯಾವುದೇ ಹಣಕಾಸಿನ ತೊಂದರೆ ಇಲ್ಲದಿದ್ದರೂ, ತಮ್ಮ ದುಬಾರಿ ಹವ್ಯಾಸಗಳನ್ನು ತೀರಿಸಿಕೊಳ್ಳಲು ಈ ಕಪ್ಪು ಲೋಕಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಇದು ಜೀವನವನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂಬ ಅರಿವು ಅವರಿಗಿಲ್ಲ.

ವಿಜಯಪಥ ಸಮಗ್ರ ಸುದ್ದಿ

​ಬೆಂಗಳೂರು: ಮಹಾನಗರಗಳ ಜಗಮಗಿಸುವ ಬಣ್ಣದ ಲೋಕಕ್ಕೆ ಮರುಳಾಗಿ, ಹೆತ್ತವರ ನಂಬಿಕೆಯನ್ನು ಗಾಳಿಗೆ ತೂರಿ ಗ್ರಾಮೀಣ ಭಾಗ- ಇತರೆ ನಗರ ಪ್ರದೇಶಗಳಿಂದ ಬರುವ ಕೆಲ ಯುವತಿಯರು ತಪ್ಪುದಾರಿ ತುಳಿಯುತ್ತಿರುವುದು ಸಮಾಜದಲ್ಲಿ ತೀವ್ರ ಆತಂಕ ಮೂಡಿಸಿದೆ.

ಹಳ್ಳಿ ಹಾಗೂ ಸಣ್ಣ ಪುಟ್ಟ ಪಟ್ಟಣಗಳಿಂದ ಕಣ್ಣು ತುಂಬ ಕನಸು ಹೊತ್ತು ರಾಜಧಾನಿಯಂತಹ ಮಹಾ ನಗರಗಳಿಗೆ ಓದಲು ಬರುವ ಹೆಣ್ಣುಮಕ್ಕಳಲ್ಲಿ ಕೆಲವರು, ವಿದ್ಯಾಭ್ಯಾಸವನ್ನು ಬದಿಗೆ ಸರಿಸಿ ಐಷಾರಾಮಿ ಜೀವನದ ಹಪಾಹಪಿಗೆ ಬೀಳುತ್ತಿರುವುದು ಇಂದು ಕಾಣಿಸುತ್ತಿರುವ ಕಹಿ ಸತ್ಯವಾಗಿದೆ.

ತಮ್ಮ ದುಬಾರಿ ಹವ್ಯಾಸಕ್ಕಾಗಿ ಈ ಕಪ್ಪು ಸರಿಯೇ?: ​ಸಾಮಾನ್ಯವಾಗಿ ಹೆಣ್ಣುಮಕ್ಕಳು ದಾರಿ ತಪ್ಪಲು ಕೌಟುಂಬಿಕ ಬಡತನ ಅಥವಾ ಆರ್ಥಿಕ ಅನಿವಾರ್ಯತೆ ಕಾರಣ ಎಂದುಕೊಳ್ಳಲಾಗುತ್ತದೆ. ಆದರೆ ಸದ್ಯದ ಪರಿಸ್ಥಿತಿಯೇ ಬೇರೆ ಇದೆ. ಕೇವಲ 20 ವರ್ಷ ದಾಟದ ಯುವತಿಯರು ಯಾವುದೇ ಹಣಕಾಸಿನ ತೊಂದರೆ ಇಲ್ಲದಿದ್ದರೂ, ತಮ್ಮ ದುಬಾರಿ ಹವ್ಯಾಸಗಳನ್ನು ತೀರಿಸಿಕೊಳ್ಳಲು ಈ ಕಪ್ಪು ಲೋಕಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಇದು ಜೀವನವನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂಬ ಅರಿವು ಅವರಿಗಿಲ್ಲ.

​ಐಫೋನ್‌ನಂತಹ ದುಬಾರಿ ಮೊಬೈಲ್‌ಗಳು, ಬ್ರ್ಯಾಂಡೆಡ್ ಬಟ್ಟೆಗಳು, ಮಾಲ್ ಸಂಸ್ಕೃತಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಹೈ-ಫೈ ಲೈಫ್‌ಸ್ಟೈಲ್ ಪ್ರದರ್ಶಿಸುವ ಹಪಾಹಪಿಯೇ ಇವರನ್ನು ಈ ದಾರಿಗೆ ಎಳೆಯುತ್ತಿದೆ. ₹2,000 ದಿಂದ ₹5,000 ವರೆಗಿನ ಸುಲಭದ ಹಣ ಹಾಗೂ ಒಂದು ರಾತ್ರಿಯ ಐಷಾರಾಮಿ ಸುಖಕ್ಕಾಗಿ ದೇಹ ವ್ಯಾಪಾರಕ್ಕಿಳಿಯುವ ದುರಂತ ಬೆಳವಣಿಗೆ ರಾಜಧಾನಿಯ ಸೀಳುದಾರಿಗಳಲ್ಲಿ ರಾಜಾರೋಷವಾಗಿ ನಡೆಯುತ್ತಿದೆ.

​ಕಮರುತ್ತಿದೆ ಹೆತ್ತವರ ಕನಸು: ​ಹಳ್ಳಿಯಲ್ಲಿ ತಾವಿಷ್ಟಪಟ್ಟು, ಹೊಟ್ಟೆ ಬಟ್ಟೆ ಕಟ್ಟಿ, ಮಗಳು ಓದಿ ದೊಡ್ಡ ಅಧಿಕಾರಿಯಾಗಲಿ, ತಮ್ಮ ಕಷ್ಟ ತೀರಲಿ ಎಂದು ಪಾಲಕರು ನಗರದಂತಹ ದೊಡ್ಡ ಕಾಲೇಜುಗಳಿಗೆ ಕಳುಹಿಸುತ್ತಾರೆ. ಆದರೆ ಇಲ್ಲಿ ಮಗಳು ಮಾಡುತ್ತಿರುವ ‘ಪಾರ್ಟಿ ಲೈಫ್’ ಹೆತ್ತವರಿಗೆ ಗೊತ್ತಿರುವುದೇ ಇಲ್ಲ. ನಗರದ ರಸ್ತೆ ಬದಿಗಳಲ್ಲಿ ಕೇವಲ ಹಣಕ್ಕಾಗಿ ನಿಲ್ಲುವ ಇಂತಹ ಸುಂದರ ಯುವತಿಯರನ್ನು ನೋಡಿದಾಗ ಸಮಾಜದ ನೈತಿಕತೆ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಇಂದಿನ ಯುವಜನರನ್ನೂ ಕಾಡದಿರದು.

ಮಗಳು ಕೆಟ್ಟವಳಲ್ಲ ಆದರೂ ಇರಲಿ ನಿರಂತರ ನಿಗಾ: ನಿಮ್ಮ ಮಕ್ಕಳಿಗೆ ಕೇವಲ ಹಣ ನೀಡುವುದಷ್ಟೇ ನಿಮ್ಮ ಜವಾಬ್ದಾರಿಯಲ್ಲ. ಅವರು ಕೇಳಿದಾಗಲೆಲ್ಲ ಹಣ ಕೊಡುವ ಮುನ್ನ ಅದರ ಅಗತ್ಯವನ್ನು ಪರಿಶೀಲಿಸಿ. ನಿಮ್ಮ ಮಗಳು ಕೆಟ್ಟವಳಲ್ಲ ಆದರೂ ಅವರ ಮೇಲೆ ನಿರಂತರವಾಗಿ ನಿಗಾವಹಿಸುವುದು ಕೂಡ ಹೆತ್ತವರ ಜವಾಬ್ದಾರಿಯಾಗಿರುತ್ತದೆ. ಕಾರಣ ಆಕೆ ಇನ್ನು ಪ್ರಪಂಚದ ಆಳ ಹಲವನ್ನು ತಿಳಿಯುವ ಮುನ್ನ ಪ್ರಪಾತಕ್ಕೆ ಬೀಳದಂತೆ ನೋಡಿಕೊಳ್ಳುವುದು ನಿಮ್ಮದೇ ಆಗಿರುತ್ತದೆ.

​ಸ್ನೇಹಿತರ ಬಳಗ ಯಾರು?: ನಗರದಲ್ಲಿ ನಿಮ್ಮ ಮಗಳು ಯಾರ ಜತೆ ಸ್ನೇಹ ಬೆಳೆಸಿದ್ದಾಳೆ? ರೂಮ್ ಮೇಟ್ಸ್ ಯಾರು? ಕಾಲೇಜಿಗೆ ನಿಯಮಿತವಾಗಿ ಹೋಗುತ್ತಿದ್ದಾಳೆಯೇ ಎಂಬುದನ್ನು ವಿಚಾರಿಸಿ. ಸಾಧ್ಯವಾದರೆ ಕಾಲೇಜುಗಳಿಗೆ ಹೋಗಿ ನಿಮ್ಮ ಮಕ್ಕಳ ಓದಿನ ಬಗ್ಗೆ ವಿಚಾರಿಸಿಕೊಳ್ಳುವುದನ್ನು ರೂಢಿಮಾಡಿಕೊಳ್ಳುವುದು ಉತ್ತಮ.

​ವರ್ತನೆಯಲ್ಲಿ ಬದಲಾವಣೆ: ಇದ್ದಕ್ಕಿದ್ದಂತೆ ಮಗಳ ಬಳಿ ದುಬಾರಿ ವಸ್ತುಗಳು, ಹೊಸ ಬಟ್ಟೆಗಳು ಕಾಣಿಸಿಕೊಂಡರೆ ತಕ್ಷಣವೇ ಎಚ್ಚೆತ್ತುಕೊಂಡು ಸೌಮ್ಯವಾಗಿಯೇ ವಿಚಾರಿಸಿ, ಕೌನ್ಸೆಲಿಂಗ್ ನಡೆಸಿ. ಆಕೆಗೆ ಬುದ್ಧಿ ಹೇಳಿ ಭವಿಷ್ಯದಲ್ಲಿ ನೋಡುವುದು ತುಂಬಾ ಇದೆ. ನಾವು ಕೊಟ್ಟಿರುವ ಹಣಕ್ಕಿಂತ ಹೆಚ್ಚು ಖರ್ಚು ಮಾಡುತ್ತಿರುವುದು ನೋಡಿದರೆ ನಮಗೆ ಭಯವಾಗುತ್ತಿದೆ ಎಂದು ತಿಳಿಹೇಳಿ ತಪ್ಪು ದಾರಿಯಿಂದ ಹೊರತರುವುದಕ್ಕೆ ಶಾಂತಿಯಿಂದಲೇ ವರ್ತಿಸಿ.

Deva
the authorDeva

Leave a Reply

error: Content is protected !!
Latest news
ಇಂದು ಸಾರಿಗೆ ನೌಕರರ ವೇತನ ಸಂಬಂಧ ಕರೆದಿದ್ದ ರಾಜೀ ಸಂಧಾನ ಸಭೆ ಮತ್ತೆ ವಿಫಲ! 2028ರ ವೇಳೆಗೆ ಮಾದಕ ವಸ್ತು- ನಶೆ ಮುಕ್ತ ಕರ್ನಾಟಕವೇ ನಮ್ಮ ಗುರಿ: ಸಿಎಂ ಡಿಕೆಶಿ ಕೊರಟಗೆರೆ: ಸರ್ಕಾರಿ ಬಸ್‌ನಲ್ಲಿ ಪುಟ್ಟ ಮಗು ಅಸ್ವಸ್ಥ- ಪ್ರಾಣ ಉಳಿಸಲು ಆಸ್ಪತ್ರೆಗೆ ಬಸ್‌ ತೆಗೆದುಕೊಂಡು ಹೋದ ಚಾಲಕ ಶರಣ... ನಾಳೆಯಿಂದ ಜಾರಿಗೆ ಬರುವಂತೆ ಪೆಟ್ರೋಲ್- ಡೀಸೆಲ್ ಮಾರಾಟದ ಎಲ್ಲ ನಿರ್ಬಂಧಗಳ ತೆರವುಗೊಳಿಸಿ ಕೇಂದ್ರ ಸರ್ಕಾರ ಆದೇಶ SIR ಪೂರ್ಣಗೊಂಡ ಬಳಿಕವೇ ಗೃಹಲಕ್ಷ್ಮೀ ಯೋಜನೆಯ ಪರಿಷ್ಕರಣೆ- ಮತದಾರರ ಪಟ್ಟೀಲಿ ಮನೆ ಯಜಮಾನಿ ಹೆಸರು ಕಡ್ಡಾಯ! ಓದಿನ ನೆಪದಲ್ಲಿ ಮಹಾನಗರಗಳ ಮಾಯಾಲೋಕಕ್ಕೆ ಬಂದು ಹಾದಿ ತಪ್ಪುತ್ತಿರುವ ಯುವತಿಯರು! KSRTC ಬಸ್ ಟೈಯರ್ ಸ್ಫೋಟ: ನಿವೃತ್ತ ಶಿಕ್ಷಕಿ ಸೇರಿ ಇಬ್ಬರು ಸ್ಥಳದಲ್ಲೇ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ- ಆಸ್ಪತ್ರ... 308 ಗ್ರಾಂ ಮಾದಕ ದ್ರವ್ಯ ವಶ: ಇಬ್ಬರು ಯುವತಿಯರು ಸೇರಿ ಏಳು ಮಂದಿ ಬಂಧನ ಗೃಹಜ್ಯೋತಿ ಯೋಜನೆ ದುರ್ಬಳಕೆ ತಡೆಗಾಗಿ ಮತ್ತೆ ಅರ್ಜಿ: ಸಿಎಂ ಡಿಕೆಶಿ ಅಧಿಕೃತ ಘೋಷಣೆ ರಾಜ್ಯಾದ್ಯಂತ ನಾಳೆಯಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ: ಮನೆಗೆ ಬರುವ ಬಿಎಲ್ಒಗಳಿಗೆ ಸಹಕರಿಸಲು ಡಿಸಿಗಳು ಕರೆ