NEWSದೇಶ-ವಿದೇಶ

ನಾಳೆಯಿಂದ ಜಾರಿಗೆ ಬರುವಂತೆ ಪೆಟ್ರೋಲ್- ಡೀಸೆಲ್ ಮಾರಾಟದ ಎಲ್ಲ ನಿರ್ಬಂಧಗಳ ತೆರವುಗೊಳಿಸಿ ಕೇಂದ್ರ ಸರ್ಕಾರ ಆದೇಶ

ಇದೇ ಜೂನ್ 11ರಂದು ಜಾರಿಗೊಳಿಸಿದ್ದ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಲಾಗಿದ್ದು,  ಜುಲೈ 1ರಿಂದ ಈ ಹಿಂದೆ ವಿಧಿಸಿದ್ದ ಎಲ್ಲ ನಿರ್ಬಂಧಗಳು ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಪ್ರತಿ ವ್ಯಕ್ತಿಗೆ ಗರಿಷ್ಠ 200 ಲೀಟರ್ ಡೀಸೆಲ್ ಮಾತ್ರ ಮಾರಾಟ ಮಾಡಬೇಕೆಂಬ ನಿರ್ಬಂಧವನ್ನು ಕೇಂದ್ರ ಸರ್ಕಾರ ನಾಳೆಯಿಂದ ಹಿಂಪಡೆಯುತ್ತಿದೆ.

ಅಂದರೆ ಜುಲೈ 1ರಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲಿನ ಎಲ್ಲ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ತೆರವುಗೊಳಿಸಿದ್ದು, ಈ ಸಂಬಂಧ ಅಧಿಕೃತ ಆದೇಶವನ್ನು ಹೊರಡಿಸಿದೆ.

ಇದೇ ಜೂನ್ 11ರಂದು ಜಾರಿಗೊಳಿಸಿದ್ದ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಲಾಗಿದ್ದು,  ಜುಲೈ 1ರಿಂದ ಈ ಹಿಂದೆ ವಿಧಿಸಿದ್ದ ಎಲ್ಲ ನಿರ್ಬಂಧಗಳು ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಜೂನ್ 11ರಂದು ಹೊರಡಿಸಿದ್ದ ಆದೇಶದ ಪ್ರಕಾರ, ಕೈಗಾರಿಕಾ ಮತ್ತು ವಾಣಿಜ್ಯ ಬಳಕೆದಾರರು ಚಿಲ್ಲರೆ ಮಾರಾಟ ಮಳಿಗೆಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅಂತಹ ಗ್ರಾಹಕರು ತಮ್ಮ ಅಗತ್ಯಗಳಿಗೆ ಮೀಸಲಾದ ಸರಬರಾಜು ಜಾಲಗಳ ಮೂಲಕವೇ ಇಂಧನ ಖರೀದಿಸಬೇಕೆಂದು ಷರತ್ತು ವಿಧಿಸಲಾಗಿತ್ತು.

ಅದೇ ವೇಳೆ, ಸಗಟು ಪ್ರಮಾಣದಲ್ಲಿ ಡೀಸೆಲ್ ಖರೀದಿಸುವ ಗ್ರಾಹಕರಿಂದಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಅಸಹಜ ಬೇಡಿಕೆ ಕಂಡುಬಂದಲ್ಲಿ, ಅಂತಹ ಗ್ರಾಹಕರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಕೇಂದ್ರ ಸರ್ಕಾರ ನಿರ್ದೇಶನ ಮಾಡಿತ್ತು.

ಇದೀಗ ದೇಶದಲ್ಲಿ ಇಂಧನ ಪೂರೈಕೆ ಮತ್ತು ವಿತರಣಾ ವ್ಯವಸ್ಥೆಯ ಪರಿಸ್ಥಿತಿ ಪರಿಶೀಲಿಸಿದ ಬಳಿಕ, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲಿನ ಎಲ್ಲ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ, ಜುಲೈ 1ರಿಂದ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವು ಹಿಂದಿನಂತೆ ಸಾಮಾನ್ಯ ಕ್ರಮದಲ್ಲಿ ನಡೆಯಲಿದೆ ಎಂದು ಹೇಳಿದೆ.

Deva
the authorDeva

Leave a Reply

error: Content is protected !!
Latest news
ಇಂದು ಸಾರಿಗೆ ನೌಕರರ ವೇತನ ಸಂಬಂಧ ಕರೆದಿದ್ದ ರಾಜೀ ಸಂಧಾನ ಸಭೆ ಮತ್ತೆ ವಿಫಲ! 2028ರ ವೇಳೆಗೆ ಮಾದಕ ವಸ್ತು- ನಶೆ ಮುಕ್ತ ಕರ್ನಾಟಕವೇ ನಮ್ಮ ಗುರಿ: ಸಿಎಂ ಡಿಕೆಶಿ ಕೊರಟಗೆರೆ: ಸರ್ಕಾರಿ ಬಸ್‌ನಲ್ಲಿ ಪುಟ್ಟ ಮಗು ಅಸ್ವಸ್ಥ- ಪ್ರಾಣ ಉಳಿಸಲು ಆಸ್ಪತ್ರೆಗೆ ಬಸ್‌ ತೆಗೆದುಕೊಂಡು ಹೋದ ಚಾಲಕ ಶರಣ... ನಾಳೆಯಿಂದ ಜಾರಿಗೆ ಬರುವಂತೆ ಪೆಟ್ರೋಲ್- ಡೀಸೆಲ್ ಮಾರಾಟದ ಎಲ್ಲ ನಿರ್ಬಂಧಗಳ ತೆರವುಗೊಳಿಸಿ ಕೇಂದ್ರ ಸರ್ಕಾರ ಆದೇಶ SIR ಪೂರ್ಣಗೊಂಡ ಬಳಿಕವೇ ಗೃಹಲಕ್ಷ್ಮೀ ಯೋಜನೆಯ ಪರಿಷ್ಕರಣೆ- ಮತದಾರರ ಪಟ್ಟೀಲಿ ಮನೆ ಯಜಮಾನಿ ಹೆಸರು ಕಡ್ಡಾಯ! ಓದಿನ ನೆಪದಲ್ಲಿ ಮಹಾನಗರಗಳ ಮಾಯಾಲೋಕಕ್ಕೆ ಬಂದು ಹಾದಿ ತಪ್ಪುತ್ತಿರುವ ಯುವತಿಯರು! KSRTC ಬಸ್ ಟೈಯರ್ ಸ್ಫೋಟ: ನಿವೃತ್ತ ಶಿಕ್ಷಕಿ ಸೇರಿ ಇಬ್ಬರು ಸ್ಥಳದಲ್ಲೇ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ- ಆಸ್ಪತ್ರ... 308 ಗ್ರಾಂ ಮಾದಕ ದ್ರವ್ಯ ವಶ: ಇಬ್ಬರು ಯುವತಿಯರು ಸೇರಿ ಏಳು ಮಂದಿ ಬಂಧನ ಗೃಹಜ್ಯೋತಿ ಯೋಜನೆ ದುರ್ಬಳಕೆ ತಡೆಗಾಗಿ ಮತ್ತೆ ಅರ್ಜಿ: ಸಿಎಂ ಡಿಕೆಶಿ ಅಧಿಕೃತ ಘೋಷಣೆ ರಾಜ್ಯಾದ್ಯಂತ ನಾಳೆಯಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ: ಮನೆಗೆ ಬರುವ ಬಿಎಲ್ಒಗಳಿಗೆ ಸಹಕರಿಸಲು ಡಿಸಿಗಳು ಕರೆ